ಜಿಗಣಿ ಪೊಲೀಸರ ಭರ್ಜರಿ ಕಾರ್ಯಾಚರಣೆ – 250 ಕೆಜಿ ಗಾಂಜಾ ವಶಕ್ಕೆ!

ಬೆಂಗಳೂರು : ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಗಣಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ 250 ಕೆಜಿ ಗಾಂಜಾ ವಶಕ್ಕೆ ಪಡೆದಿದ್ದಾರೆ.

ಸಿನಿಮಾ ಶೈಲಿಯಲ್ಲಿ ಗಾಂಜಾ ಸಾಗಿಸಿದ್ದ ಬಿಹಾರ ಮೂಲದ ಇಬ್ಬರನ್ನು ಬಂಧಿಸಿದ್ದಾರೆ. ರಾಮಾಯಣ್ ಯಾದವ್(56) ಮತ್ತು ಸಬೀರ್(51) ಬಂಧಿತರು. 

ಆರೋಪಿಗಳು ಗಾಂಜಾವನ್ನು ಛತ್ತೀಸ್​ಗಢದಿಂದ ಜಿಗಣಿಗೆ ಕೋಳಿಗಳಿಗೆ ಆಹಾರ ತರುತ್ತಿದ್ದ ಲಾರಿಯಲ್ಲಿ ತರುತ್ತಿದ್ದರು. ಜಿಗಣಿ ಪೊಲೀಸರು ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ್ದು, 1 ಕೋಟಿ 25 ಲಕ್ಷ ರೂಪಾಯಿ ಮೌಲ್ಯದ 250 ಕೆಜಿ ಗಾಂಜಾವನ್ನು ಜಪ್ತಿ ಮಾಡಿದ್ದಾರೆ.

ಇಬ್ಬರು ಆರೋಪಿಗಳನ್ನು ಜಿಗಣಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಇನ್ನು ಪ್ರಮುಖ ಆರೋಪಿ ಬಿನೋದ್ ಸಿಂಗ್ ಮತ್ತು ಬಾಬುಗಾಗಿ ಶೋಧ ನಡೆಸುತ್ತಿದ್ದಾರೆ. ಪೊಲೀಸರ ಕಾರ್ಯಕ್ಕೆ ಬೆಂಗಳೂರು ಗ್ರಾಮಾಂತರ ಎಸ್​ಪಿ ಚಂದ್ರಕಾಂತ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ : GBA ಚುನಾವಣೆಗೆ ಡೇಟ್ ಫಿಕ್ಸ್ – ಜೂ.14 ರಿಂದ 24ರ ಒಳಗೆ ಎಲೆಕ್ಷನ್ ನಡೆಸಲು ಸೂಚನೆ!

Btv Kannada
Author: Btv Kannada

Leave a Comment

Read More