Download Our App

Follow us

Home » ರಾಜಕೀಯ » ಕೋಲಾರದ ಕಾಂಗ್ರೆಸ್​​​​​ ಮುಖಂಡ ರವಿಚಂದ್ರನ್​ ಸಾವಿಗೆ ಸಂತಾಪ ಸೂಚಿಸಿದ ಸಿಎಂ ಸಿದ್ದರಾಮಯ್ಯ..!

ಕೋಲಾರದ ಕಾಂಗ್ರೆಸ್​​​​​ ಮುಖಂಡ ರವಿಚಂದ್ರನ್​ ಸಾವಿಗೆ ಸಂತಾಪ ಸೂಚಿಸಿದ ಸಿಎಂ ಸಿದ್ದರಾಮಯ್ಯ..!

ಬೆಂಗಳೂರು : ಸಿಎಂ ವಿರುದ್ಧ ಪ್ರಾಸಿಕ್ಯೂಷನ್​ಗೆ ಅನುಮತಿ ನೀಡಿರುವ ವಿಚಾರವಾಗಿ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಾಗುತ್ತಿದೆ. ಇದರ ನಡುವೆಯೇ ಪ್ರಾಸಿಕ್ಯೂಷನ್​ ಖಂಡಿಸಿ ಬೆಂಗಳೂರಿನ ಪ್ರೆಸ್​​ಕ್ಲಬ್​​​ನಲ್ಲಿ ಪ್ರೆಸ್​ಮೀಟ್​ ಮಾಡ್ತಿದ್ದಾಗಲೇ ಕೋಲಾರದ ಕಾಂಗ್ರೆಸ್​​​​​ ಮುಖಂಡ ರವಿಚಂದ್ರನ್ ಸಾವನ್ನಪ್ಪಿದ್ದಾರೆ.

ಇದೀಗ ರವಿಚಂದ್ರನ್​ ಸಾವಿಗೆ ಸಿಎಂ ಸಿದ್ದರಾಮಯ್ಯ ಸಂತಾಪ ಸೂಚಿಸಿದ್ದಾರೆ. ಟ್ವೀಟ್ ಮಾಡುವ ಮೂಲಕ ಸಂತಾಪ ಸೂಚಿಸಿದ ಸಿಎಂ ಸಿದ್ದರಾಮಯ್ಯ ಅವರು, ರಾಜ್ಯಪಾಲರು ಪ್ರಾಸಿಕ್ಯೂಷನ್ ಗೆ ಆದೇಶ ನೀಡಿರುವುದನ್ನು ವಿರೋಧಿಸಿ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳು ಮತ್ತು ಅಲ್ಪ ಸಂಖ್ಯಾತರ ಸಂಘದ ವತಿಯಿಂದ ಬೆಂಗಳೂರು ಪ್ರೆಸ್​​ಕ್ಲಬ್​​ನಲ್ಲಿ‌ ಸುದ್ದಿಗೋಷ್ಠಿ ನಡೆಸುತ್ತಿದ್ದ ವೇಳೆ ಸಂಘದ ಸದಸ್ಯ, ನಮ್ಮ ಪಕ್ಷದ ಕಾರ್ಯಕರ್ತ ಸಿ.ಕೆ.ರವಿಚಂದ್ರನ್ ಹೃದಯಾಘಾತದಿಂದ ನಿಧನರಾದ ಸುದ್ದಿ ತಿಳಿಯಿತು.

ಸಂವಿಧಾನ, ಪ್ರಜಾಪ್ರಭುತ್ವದ ಉಳಿವಿನ ಈ ಹೋರಾಟದಲ್ಲಿ ನಮ್ಮ ಜೊತೆಯಾಗಿದ್ದ ರವಿಚಂದ್ರನ್ ಅವರ ನಿಧನ ಅತೀವು ನೋವುಂಟು ಮಾಡಿದೆ. ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ. ಅವರ ದುಃಖತಪ್ತ ಕುಟುಂಬಸ್ಥರು ಮತ್ತು ಬಂಧುಬಳಗದ ಜೊತೆ ನಾನಿದ್ದೇನೆ ಎಂದು ಸಿಎಂ ಟ್ವೀಟ್ ಮಾಡಿ ಸಂತಾಪ ಸೂಚಿಸಿದ್ದಾರೆ.

ಇದನ್ನೂ ಓದಿ : ಸದ್ಯದಲ್ಲೇ ಅಡ್ವೆಂಚರಸ್​​ ಕಾಮಿಡಿ ಕಥಾಹಂದರ ಒಳಗೊಂಡ ‘ಫಾರೆಸ್ಟ್’ ಚಿತ್ರದ ಟ್ರೈಲರ್ ರಿಲೀಸ್​​..!

Leave a Comment

DG Ad

RELATED LATEST NEWS

Top Headlines

ಸಿ.ಟಿ ರವಿ ಅವಾಚ್ಯ ಶಬ್ದ ಬಳಸಿದ್ದು ಸತ್ಯ, ಆ ಪದ ಬಳಸಿದ್ದು ಖಂಡನೀಯ – ಸಿಎಂ ಸಿದ್ದರಾಮಯ್ಯ ಕಿಡಿ..!

ಬೆಳಗಾವಿ : ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಅವರಿಗೆ ಆಕ್ಷೇಪಾರ್ಹ ಪದ ಬಳಸಿದ ಆರೋಪದಲ್ಲಿ ಪೊಲೀಸರಿಂದ ಬಂಧಿತರಾಗಿದ್ದ ವಿಧಾನ ಪರಿಷತ್‌ ಸದಸ್ಯ ಸಿಟಿ ರವಿ ಅವರಿಗೆ ಕರ್ನಾಟಕ ಹೈಕೋರ್ಟ್‌

Live Cricket

Add Your Heading Text Here