ಚಿನ್ನ-ಬೆಳ್ಳಿ ದರ ಮತ್ತೆ ಏರಿಕೆ – ಇಂದಿನ ಬೆಲೆ ಎಷ್ಟು?

ಬೆಂಗಳೂರು : ಯುದ್ಧದ ಬಳಿಕ ಭಾರಿ ಇಳಿಕೆಯಾಗಿದ್ದ ಚಿನ್ನ-ಬೆಳ್ಳಿ ದರ ಮತ್ತೆ ಏರಿಕೆಯಾಗುತ್ತಿದೆ. ನಿನ್ನೆ 195 ರೂ.ನಷ್ಟು ಹೆಚ್ಚಿದ್ದ ಬಂಗಾರದ ದರ ಇಂದು 105 ರೂ. ಜಿಗಿದಿದೆ. ಎರಡು ದಿನದಲ್ಲಿ ಇದರ ಬೆಲೆಯಲ್ಲಿ ಗ್ರಾಂಗೆ 300 ರೂ.ನಷ್ಟು ಹೆಚ್ಚಿದೆ.

ವಿದೇಶಗಳಲ್ಲೂ ಹೆಚ್ಚಿನ ಕಡೆ ಚಿನ್ನದ ಬೆಲೆ ಹೆಚ್ಚಾಗಿದ್ದು, ಬೆಳ್ಳಿ ಬೆಲೆಯೂ ಸತತ ಎರಡನೇ ಬಾರಿ ಹೆಚ್ಚಳ ಕಂಡಿದೆ. ನಿನ್ನೆ ಗ್ರಾಂಗೆ 10 ರೂ ಹೆಚ್ಚಿದ್ದು, ಇವತ್ತು 5 ರೂ. ಏರಿದೆ.

ಭಾರತದಲ್ಲಿ ಸದ್ಯ 10 ಗ್ರಾಂನ 22 ಕ್ಯಾರಟ್ ಚಿನ್ನದ ಬೆಲೆ 1,39,750 ರೂ. ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 1,52,460 ರೂ. ಆಗಿದೆ. 100 ಗ್ರಾಂ ಬೆಳ್ಳಿ ಬೆಲೆ 27,000 ರೂ. ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಂ​ಗೆ 1,39,750 ರೂ. ಆಗಿದೆ, ಬೆಳ್ಳಿ ಬೆಲೆ 100 ಗ್ರಾಂಗೆ 27,000 ರೂ.ಯಲ್ಲಿದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 27,500 ರೂ ಇದೆ.

ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ
  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 15,246 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 13,975 ರೂ
  • 18 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 11,434 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 270 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 15,246 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 13,975 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 270 ರೂ
ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಂಗೆ)
  • ಬೆಂಗಳೂರು: 13,975 ರೂ
  • ಚೆನ್ನೈ: 14,101 ರೂ
  • ಮುಂಬೈ: 13,975 ರೂ
  • ದೆಹಲಿ: 13,990 ರೂ
  • ಕೋಲ್ಕತಾ: 13,975 ರೂ
  • ಕೇರಳ: 13,975 ರೂ
  • ಅಹ್ಮದಾಬಾದ್: 13,980 ರೂ
  • ಜೈಪುರ್: 13,990 ರೂ
  • ಲಕ್ನೋ: 13,990 ರೂ
  • ಭುವನೇಶ್ವರ್: 13,975 ರೂ

ಇದನ್ನೂ ಓದಿ : ದೋಸೆಗೆ 375, ಟೀಗೆ 195 ರೂ. – ರಾಮೇಶ್ವರಂ ಕೆಫೆ ವಿರುದ್ಧ ಗ್ರಾಹಕರ ಆಕ್ರೋಶ!

Btv Kannada
Author: Btv Kannada

Leave a Comment

Read More