Download Our App

Follow us

Home » ಫ್ಲ್ಯಾಶ್ ನ್ಯೂಸ್ » ಕೆಲವೇ ಕ್ಷಣಗಳಲ್ಲಿ ವಿಶೇಷ ವಿಸ್ಮಯಕ್ಕೆ ಸಾಕ್ಷಿಯಾಗಲಿದೆ ಗವಿಗಂಗಾಧರೇಶ್ವರ ಸನ್ನಿಧಿ – ಸೂರ್ಯರಶ್ಮಿ ಕಣ್ತುಂಬಿಕೊಳ್ಳಲು ಶಿವ ಭಕ್ತರು ಕಾತುರ..!

ಕೆಲವೇ ಕ್ಷಣಗಳಲ್ಲಿ ವಿಶೇಷ ವಿಸ್ಮಯಕ್ಕೆ ಸಾಕ್ಷಿಯಾಗಲಿದೆ ಗವಿಗಂಗಾಧರೇಶ್ವರ ಸನ್ನಿಧಿ – ಸೂರ್ಯರಶ್ಮಿ ಕಣ್ತುಂಬಿಕೊಳ್ಳಲು ಶಿವ ಭಕ್ತರು ಕಾತುರ..!

ಬೆಂಗಳೂರು : ಮಕರ ಸಂಕ್ರಾಂತಿ ವರ್ಷದ ಮೊದಲ ಹಾಗೂ ಸುಗ್ಗಿಯ ಹಬ್ಬ. ಈ ದಿನ ಬೆಂಗಳೂರಿನ ಗವಿಗಂಗಾಧರೇಶ್ವರ ದೇಗುಲದಲ್ಲಿ ವಿಸ್ಮಯವೊಂದು ನಡೆಯಲಿದೆ. ಇಂದು ಸೂರ್ಯನ ಬೆಳಕು ನೇರವಾಗಿ ಶಿವಲಿಂಗದ ಮೇಲೆ ಬೀಳಲಿದೆ. ಇದನ್ನು ಕಣ್ತುಂಬಿಕೊಳ್ಳಲು ಭಕ್ತ ಸಾಗರವೇ ಗವಿಗಂಗಾಧರೇಶ್ವರ ದೇಗುಲದಲ್ಲಿ ನೆರೆದಿದೆ.

ಈ ವರ್ಷ ಉತ್ತರಾಯಣ ಆರಂಭಕ್ಕೆ ಇನ್ನೇನು ಕೆಲವೇ ಸಮಯ ಬಾಕಿ ಇದೆ. ದಕ್ಷಿಣಾಭಿಮುಖದಿಂದ ಉತ್ತರಾಯಣಕ್ಕೆ ಸೂರ್ಯ ತನ್ನ ಪಥ ಸಂಚಲಿಸುತ್ತಾನೆ. ಹೀಗಾಗಿ ದಕ್ಷಿಣದ ಕಾಶಿಯಂತಲೇ ಖ್ಯಾತಿ ಪಡೆದಿರೋ ಬೆಂಗಳೂರಿನ ಗವಿ ಗವಿಗಂಗಾಧರೇಶ್ವರ ದೇವಾಲಯದಲ್ಲಿ ಇಂದು ವಿಸ್ಮಯವೇ ನಡೆಯಲಿದೆ. ಶಿವನ ಪಾದವನ್ನ ಸೂರ್ಯರಶ್ಮಿ ಸ್ಪರ್ಶಿಸುವ ಮೂಲಕ ಪಥ ಬದಲಿಸಲಿದ್ದಾನೆ.

ಶಿವನ ಪಾದವನ್ನ ಇಂದು ಸಂಜೆ 5.20ರಿಂದ 5.23ರ ನಡುವಿನ ಸಮಯದಲ್ಲಿ 3 ನಿಮಿಷಗಳ ಕಾಲ ಸೂರ್ಯರಶ್ಮಿ ಸ್ಪರ್ಶ ವಾಗಲಿದೆ. ಸೂರ್ಯರಶ್ಮಿ ಸ್ಪರ್ಶಿಸುವ ವೇಳೆ ಶಿವಲಿಂಗಕ್ಕೆ ವಿಶೇಷ ಬಗೆ-ಬಗೆಯ ಅಭಿಷೇಕಗಳು ನಡೆಯಲಿದೆ.

ದಕ್ಷಿಣಾಯಣದಿಂದ ಉತ್ತರಾಯಣಕ್ಕೆ ಸೂರ್ಯ ತನ್ನ ಪಥ ಬದಲಾಯಿಸುತ್ತಿದ್ದಂತೆ ಗವಿಗಂಗಾಧರೇಶ್ವರನ ಮೇಲೆ ಸೂರ್ಯನ ಕಿರಣಗಳು ಬೀಳುತ್ತದೆ. ಈ ಸಂದರ್ಭದಲ್ಲಿ ದೇವಸ್ಥಾನಕ್ಕೆ ಸಾರ್ವಜನಿಕರ ಪ್ರವೇಶ ನಿರ್ಬಂಧ ಇರುವ ಕಾರಣ, ಈ ವಿಸ್ಮಯ ಕಣ್ತುಂಬಿಸಿಕೊಳ್ಳಲು ದೇವಸ್ಥಾನದ ಹೊರ ಭಾಗದಲ್ಲಿ ಎಲ್‌ಇಡಿ ಸ್ಕ್ರೀನ್ ವ್ಯವಸ್ಥೆ ಮಾಡಲಾಗಿದೆ.

ಇದನ್ನೂ ಓದಿ : ಮಕರ ಜ್ಯೋತಿ ಪ್ರಜ್ವಲಿಸುವ ದಿನವೇ ಶಬರಿಮಲೆ ಅಯ್ಯಪ್ಪನ ದರ್ಶನ ಪಡೆದ ಸಂಸದ ಪ್ರಜ್ವಲ್ ರೇವಣ್ಣ ಹಾಗೂ ಸೂರಜ್ ರೇವಣ್ಣ..!

Leave a Comment

DG Ad

RELATED LATEST NEWS

Top Headlines

ಅಭಿಮಾನದ ಹೆಸರಲ್ಲಿ ವೈಯಕ್ತಿಕ ನಿಂದನೆ ಮಾಡ್ಬೇಡಿ – ಫ್ಯಾನ್ಸ್​ಗೆ ಕಿವಿ ಮಾತು ಹೇಳಿದ ನಟ ಅಲ್ಲು ಅರ್ಜುನ್..!

ಅಲ್ಲು ಅರ್ಜುನ್ ನಟನೆಯ ಪುಷ್ಪ 2 ಚಿತ್ರವನ್ನು ನೋಡುವ ಧಾವಂತದಲ್ಲಿ ಮಹಿಳಾ ಅಭಿಮಾನಿಯೋರ್ವರು ಕಾಲ್ತುಳಿತಕ್ಕೆ ಸಿಲುಕಿ ಉಸಿರು ಚೆಲ್ಲಿದ್ದಾರೆ. ಇನ್ನು, ಮೃತ ಮಹಿಳೆಯ ಪುತ್ರ ಇನ್ನು ಕೋಮಾದಲ್ಲಿದ್ದಾರೆ.

Live Cricket

Add Your Heading Text Here