ನವದೆಹಲಿ : ಆಮ್ ಆದ್ಮಿ ಪಕ್ಷ (AAP)ದ ಭವಿಷ್ಯ ಎಂದೇ ಪರಿಗಣಿಸಲಾಗಿದ್ದ ರಾಘವ್ ಚಡ್ಡಾ ಪಕ್ಷ ತೊರೆದಿದ್ದು, ರಾಜ್ಯಸಭೆಯ ಒಟ್ಟು 10 ಸಂಸದರ ಪೈಕಿ 7 AAP ಸಂಸದರು ಬಿಜೆಪಿ ಸೇರುವುದಾಗಿ ಘೋಷಣೆ ಮಾಡಿದ್ದರು. ಇದೀಗ 7 ಎಎಪಿ ಸಂಸದರನ್ನು ಬಿಜೆಪಿಯೊಂದಿಗೆ ವಿಲೀನಗೊಳಿಸಲು ರಾಜ್ಯಸಭಾ ಅಧ್ಯಕ್ಷರು ಅಧಿಕೃತವಾಗಿ ಅನುಮೋದನೆ ನೀಡಿದ್ದಾರೆ.
ಈ ನಿರ್ಧಾರದೊಂದಿಗೆ ಮೇಲ್ಮನೆಯಲ್ಲಿ ಬಿಜೆಪಿಯ ಸಂಖ್ಯಾಬಲವು 106 ರಿಂದ 113 ಕ್ಕೆ ಏರಿಕೆಯಾಗಿದೆ. ಕಳೆದ ಏಪ್ರಿಲ್ 24 ರಂದು ಎಎಪಿ ತೊರೆದು ಬಿಜೆಪಿ ಸೇರಲು ನಿರ್ಧರಿಸಿದ್ದ ಪ್ರಮುಖ ನಾಯಕರು ಈಗ ಅಧಿಕೃತವಾಗಿ ಬಿಜೆಪಿ ಸಂಸದರಾಗಿ ಗುರುತಿಸಿಕೊಂಡಿದ್ದಾರೆ.
ಸಂಸದರಾದ ರಾಘವ್ ಚಡ್ಡಾ, ಅಶೋಕ್ ಕುಮಾರ್ ಮಿತ್ತಲ್, ಹರ್ಭಜನ್ ಸಿಂಗ್, ಸಂದೀಪ್ ಕುಮಾರ್ ಪಾಠಕ್, ಡಾ. ವಿಕ್ರಮಜಿತ್ ಸಿಂಗ್ ಸಾಹ್ನೆ, ಸ್ವಾತಿ ಮಲಿವಾಲ್ ಮತ್ತು ರಾಜಿಂದರ್ ಗುಪ್ತಾ ಅವರು ಈಗ ಬಿಜೆಪಿಯ 113 ರಾಜ್ಯಸಭಾ ಸಂಸದರ ಪಟ್ಟಿಯಲ್ಲಿದ್ದಾರೆ.
ಇದನ್ನೂ ಓದಿ : ಇಂದು ದೆಹಲಿಯಲ್ಲಿ RCB vs DC ಪಂದ್ಯ – ಇತಿಹಾಸ ರಚಿಸಲು ರೆಡಿಯಾದ ವಿರಾಟ್ ಕೊಹ್ಲಿ!








