ಕೆವಿಎನ್-ಶಿವಣ್ಣ ಕಾಂಬಿನೇಷನ್ ಸಿನಿಮಾದ ಟೈಟಲ್ ರಿವೀಲ್ – ಹೊಸ ಅವತಾರದಲ್ಲಿ ಹ್ಯಾಟ್ರಿಕ್ ಹೀರೋ!

ದಕ್ಷಿಣ ಭಾರತದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ಕೆವಿಎನ್ ಮೊದಲ ಬಾರಿಗೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಜೊತೆ ಕೈ ಜೋಡಿಸಿರುವುದು ಗೊತ್ತೇ ಇದೆ. ನಿರ್ದೇಶಕ ಪವನ್‌ ಒಡೆಯರ್‌ ಸಾರಥ್ಯದಲ್ಲಿ ಮೂಡಿ ಬರ್ತಿರುವ ಈ ಬಹುನಿರೀಕ್ಷಿತ ಸಿನಿಮಾದ ಫಸ್ಟ್ ಲುಕ್ ಹಾಗೂ ಟೈಟಲ್​ನ್ನು ಇಂದು ಅಣ್ಣಾವ್ರ ಜನ್ಮೋತ್ಸವದ ಅಂಗವಾಗಿ ಅನಾವರಣ ಮಾಡಲಾಗಿದೆ.

ವೆಂಕಟ್ ಕೆ ನಾರಾಯಣ್, ಶಿವಣ್ಣ ಹಾಗೂ ಪವನ್ ಒಡೆಯರ್ ಕಾಂಬೋದ ಈ ಸಿನಿಮಾಗೆ ಬೇಲ್ ಎಂಬ ಟೈಟಲ್ ಇಡಲಾಗಿದೆ. ಮಳೆ‌ಯಲ್ಲಿ ಛತ್ರಿ ಹಿಡಿದು ಶಿವಣ್ಣ‌‌ ನಿಂತಿರುವ ಪೋಸ್ಟರ್ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚುವಂತೆ ಮಾಡಿದೆ.

ಈ ಮಹತ್ವಾಕಾಂಕ್ಷೆ ಪ್ರಾಜೆಕ್ಟ್ ನ್ನು ವೆಂಕಟ್ ಕೆ ನಾರಾಯಣ್ ಅವರು ತಮ್ಮದೇ ಕೆವಿಎನ್ ಪ್ರೊಡಕ್ಷನ್ ಬ್ಯಾನರ್ ನಡಿ ನಿರ್ಮಾಣ ಮಾಡುತ್ತಿದ್ದಾರೆ. ಗೋವಿಂದಾಯ ನಮಃ, ಗೂಗ್ಲಿ, ರಣವಿಕ್ರಮ, ನಟಸಾರ್ವಭೌಮ, ರೇಮೋ ಸೇರಿದಂತೆ ಅನೇಕ‌ ಸೂಪರ್ ಹಿಟ್ ಚಿತ್ರ ಕೊಟ್ಟಿರುವ ಪವನ್ ಒಡೆಯರ್ ನಿರ್ದೇಶನ ಮಾಡುತ್ತಿದ್ದಾರೆ. ಈ ಮೂಲಕ ಪವನ್ ಶಿವಣ್ಣಗೆ ಆಕ್ಷನ್ ಕಟ್ ಹೇಳಬೇಕೆಂಬ ಬಹುದಿನಗಳ ಕನಸನ್ನು ಈಡೇರಿಸಿಕೊಳ್ಳುತ್ತಿದ್ದಾರೆ.

ನಿರ್ದೇಶಕ ಪವನ್ ಒಡೆಯರ್ ಅವರು, “ಇದು ನನಗೂ ಮತ್ತು ನಿರ್ಮಾಣ ಸಂಸ್ಥೆಗೂ ಅತ್ಯಂತ ವಿಶೇಷವಾದ ಸಿನಿಮಾವಾಗಲಿದೆ. ನಿಮಗಾಗಿ ನಾವು ಬಹಳಷ್ಟು ಕಾಯ್ದಿರಿಸಿದ್ದೇವೆ ಮತ್ತು ಶೀಘ್ರದಲ್ಲೇ ಟೀಸರ್ ಅನ್ನು ಘೋಷಿಸುತ್ತೇವೆ. ಶಿವಣ್ಣ ಅವರೊಂದಿಗೆ ಕೆಲಸ ಮಾಡುವುದು ನನ್ನ ಕನಸು ನನಸಾಗಿದೆ. ಅವರು ದಶಕಗಳಿಂದ ಐಕಾನ್ ಆಗಿದ್ದಾರೆ ಮತ್ತು ಹಿಂದೆಂದೂ ಮಾಡದ ರೀತಿಯಲ್ಲಿ ಅವರನ್ನು ಪ್ರಸ್ತುತಪಡಿಸುತ್ತಿರುವುದು ನನಗೆ ತುಂಬಾ ಸಂತೋಷ ತಂದಿದೆ” ಎಂದರು.

‘ಬೇಲ್’ ನಮಗೆ ಬಹಳ ವಿಶೇಷವಾದ ಯೋಜನೆಯಾಗಿದ್ದು, ಇದು ಬಲವಾದ ಕಥೆ ಹೇಳುವಿಕೆಯನ್ನು ವಿಶಿಷ್ಟ ಸಿನಿಮೀಯ ದೃಷ್ಟಿಕೋನದೊಂದಿಗೆ ಸಮತೋಲನಗೊಳಿಸುತ್ತದೆ. ಪವನ್ ಒಡೆಯರ್ ಅವರಂತಹ ಸಾಬೀತಾದ ಕಥೆಗಾರರೊಂದಿಗೆ ಕೈ ಜೋಡಿಸುವುದು ಮತ್ತು ಶಿವಣ್ಣ ಅವರಂತಹ ಐಕಾನ್ ಜೊತೆಗೆ ಕೆಲಸ ಮಾಡುವುದು ಸಂಪೂರ್ಣ ಗೌರವವಾಗಿದೆ ಮತ್ತು ಅರ್ಥಪೂರ್ಣ ಸಿನಿಮಾವನ್ನು ನೀಡುವ ನಮ್ಮ ಉದ್ದೇಶದೊಂದಿಗೆ ಸಂಪೂರ್ಣವಾಗಿ ಹೊಂದಿಕೆಯಾಗುತ್ತದೆ. ಪ್ರೇಕ್ಷಕರು ಇಲ್ಲಿಯವರೆಗೆ ನೋಡಿರದ ಹೊಸ ದೃಷ್ಟಿಕೋನದಲ್ಲಿ ಶಿವಣ್ಣ ಅವರನ್ನು ಪ್ರಸ್ತುತಪಡಿಸಲು ನಾವು ವಿಶೇಷವಾಗಿ ಎದುರು ನೋಡುತ್ತಿದ್ದೇವೆ’ ವೆಂಕಟ್ ಕೆ‌ ಕೊನಂಕಿ ಹೇಳಿದ್ದಾರೆ.

ಇದನ್ನೂ ಓದಿ : ಅಮೆರಿಕದಿಂದ ವಾಪಸ್ ಬರಲು ಸಜ್ಜಾದ ಲಕ್ಷ ಭಾರತೀಯರು – MS ಸೇರಿದಂತೆ ಉನ್ನತ ವ್ಯಾಸಂಗ ಮಾಡಿಸಿ ಅಮೆರಿಕಗೆ ಕಳುಹಿಸಲು ಸಜ್ಜಾಗಿರುವ ಪೋಷಕರೇ ಈ ಸ್ಟೋರಿ ನೋಡಿ!

Btv Kannada
Author: Btv Kannada

Leave a Comment

Read More

Read More