Download Our App

Follow us

Home » ಸಿನಿಮಾ » ಅಗ್ನಿಸಾಕ್ಷಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ತರುಣ್​ ಸುಧೀರ್​-ಸೋನಲ್..!

ಅಗ್ನಿಸಾಕ್ಷಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ತರುಣ್​ ಸುಧೀರ್​-ಸೋನಲ್..!

ಬೆಂಗಳೂರು : ಸ್ಯಾಂಡಲ್​ವುಡ್ ಸ್ಟಾರ್​ ಡೈರೆಕ್ಟರ್​​ ತರುಣ್ ಸುಧೀರ್ ಹಾಗೂ ಸೋನಾಲ್ ಮೊಂಥೆರೋ ದಾಂಪತ್ಯ ಜೀವಕ್ಕೆ ಕಾಲಿಟ್ಟಿದ್ದಾರೆ. ಮದುವೆಯಲ್ಲಿ ಗೋಲ್ಡನ್​ ಹಾಗೂ ರೆಡ್​ ಔಟ್​ಫಿಟ್​​ನಲ್ಲಿ ಮಿಂಚಿದ ತರುಣ್​​​ ಹಾಗೂ ಸೋನಾಲ್ ಗುರು ಹಿರಿಯರ ಸಮ್ಮುಖದಲ್ಲಿ ಸಪ್ತಪದಿ ತುಳಿದಿದ್ದಾರೆ.

ತುಲಾ ಲಗ್ನ ಮುಹೂರ್ತದಲ್ಲಿ ಮಾಂಗಲ್ಯದ ಧಾರಣೆ ನಡೆದಿದ್ದು, ಇವರ ಮದುವೆಗೆ ಸಿನಿಮಾರಂಗ ಹಾಗೂ ರಾಜಕಾರಣಿಗಳು ಸಾಕ್ಷಿ ಆಗಿದ್ದಾರೆ. ಹಿಂದೂ ಸಂಪ್ರದಾಯದಂತೆ ಈ ಜೋಡಿಯ ಮದುವೆ ನೆರವೇರಿದೆ. ತರುಣ್ ಸುಧೀರ್ ಅವರ ಸಂಪ್ರದಾಯದಂತೇ ಈ ಜೋಡಿ ಇದೀಗ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದೆ.

ಮದುಮಗಳ ಲುಕ್​​ನಲ್ಲಿ ಸೋನಾಲ್​​​ ಮಂತೆರೋ ಸಖತ್​​​​​ ಆಗಿ ಮಿಂಚಿದ್ದು, ಮದುವೆ ಮಂಟಪದಲ್ಲಿ ಕುಳಿತುಕೊಂಡು ಮದ್ವೆಯ ಶಾಸ್ತ್ರಗಳನ್ನು ನಟಿ ಸೋನಾಲ್​ ಮಾಡಿದ್ದಾರೆ. ಇನ್ನು ಸೋನಲ್ ಮಂಥೆರೋ ಕಳೆದ ವರ್ಷ ಬೇರೆ ರೀತಿ ಜನ್ಮ ದಿನ ಆಚರಿಸಿಕೊಂಡಿದ್ದರು. ಸ್ನೇಹಿತರು ಹಾಗೂ ಮನೆಯವರ ಜೊತೆಗೆ ತಮ್ಮ ಹುಟ್ಟುಹಬ್ಬವನ್ನ ಸೆಲೆಬ್ರೇಟ್ ಮಾಡಿಕೊಂಡಿದ್ದರು. ಆದರೆ, ಈ ಸಲ ಜನ್ಮ ದಿನದಂದೇ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದು, ವಿಶೇಷ.

ಇದನ್ನೂ ಓದಿ : ಇಂದು ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ ತರುಣ್-ಸೋನಲ್​​ : ಮದುವೆಗೆ ಸಿದ್ಧಗೊಂಡಿದೆ ಕಮಲದ ಮಂಟಪ..!

Leave a Comment

DG Ad

RELATED LATEST NEWS

Top Headlines

MLA ಮುನಿರತ್ನ ವಿರುದ್ಧ ರೇಪ್ ಆರೋಪದ ಬೆನ್ನಲ್ಲೇ ಮಾಜಿ ಕಾರ್ಪೊರೇಟರ್ ಪತಿಯ ಹನಿಟ್ರ್ಯಾಪ್ ವಿಡಿಯೋ ವೈರಲ್..!

ಬೆಂಗಳೂರು : ಮಹಿಳೆ ಮೇಲೆ ಅತ್ಯಾಚಾರ ಎಸಗಿದ ಆರೋಪದಡಿ ಬಿಜೆಪಿ ಶಾಸಕ ಮುನಿರತ್ನ ಸೇರಿ ಏಳು ಮಂದಿಯ ವಿರುದ್ಧ ರಾಮನಗರ ಜಿಲ್ಲಾ ವ್ಯಾಪ್ತಿಯ ಕಗ್ಗಲಿಪುರ ಪೊಲೀಸ್ ಠಾಣೆಯಲ್ಲಿ

Live Cricket

Add Your Heading Text Here