ಬೆಂಗಳೂರು : ಸ್ಯಾಂಡಲ್ವುಡ್ ಸ್ಟಾರ್ ಡೈರೆಕ್ಟರ್ ತರುಣ್ ಸುಧೀರ್ ಹಾಗೂ ಸೋನಾಲ್ ಮೊಂಥೆರೋ ದಾಂಪತ್ಯ ಜೀವಕ್ಕೆ ಕಾಲಿಟ್ಟಿದ್ದಾರೆ. ಮದುವೆಯಲ್ಲಿ ಗೋಲ್ಡನ್ ಹಾಗೂ ರೆಡ್ ಔಟ್ಫಿಟ್ನಲ್ಲಿ ಮಿಂಚಿದ ತರುಣ್ ಹಾಗೂ ಸೋನಾಲ್ ಗುರು ಹಿರಿಯರ ಸಮ್ಮುಖದಲ್ಲಿ ಸಪ್ತಪದಿ ತುಳಿದಿದ್ದಾರೆ.
ತುಲಾ ಲಗ್ನ ಮುಹೂರ್ತದಲ್ಲಿ ಮಾಂಗಲ್ಯದ ಧಾರಣೆ ನಡೆದಿದ್ದು, ಇವರ ಮದುವೆಗೆ ಸಿನಿಮಾರಂಗ ಹಾಗೂ ರಾಜಕಾರಣಿಗಳು ಸಾಕ್ಷಿ ಆಗಿದ್ದಾರೆ. ಹಿಂದೂ ಸಂಪ್ರದಾಯದಂತೆ ಈ ಜೋಡಿಯ ಮದುವೆ ನೆರವೇರಿದೆ. ತರುಣ್ ಸುಧೀರ್ ಅವರ ಸಂಪ್ರದಾಯದಂತೇ ಈ ಜೋಡಿ ಇದೀಗ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದೆ.
ಮದುಮಗಳ ಲುಕ್ನಲ್ಲಿ ಸೋನಾಲ್ ಮಂತೆರೋ ಸಖತ್ ಆಗಿ ಮಿಂಚಿದ್ದು, ಮದುವೆ ಮಂಟಪದಲ್ಲಿ ಕುಳಿತುಕೊಂಡು ಮದ್ವೆಯ ಶಾಸ್ತ್ರಗಳನ್ನು ನಟಿ ಸೋನಾಲ್ ಮಾಡಿದ್ದಾರೆ. ಇನ್ನು ಸೋನಲ್ ಮಂಥೆರೋ ಕಳೆದ ವರ್ಷ ಬೇರೆ ರೀತಿ ಜನ್ಮ ದಿನ ಆಚರಿಸಿಕೊಂಡಿದ್ದರು. ಸ್ನೇಹಿತರು ಹಾಗೂ ಮನೆಯವರ ಜೊತೆಗೆ ತಮ್ಮ ಹುಟ್ಟುಹಬ್ಬವನ್ನ ಸೆಲೆಬ್ರೇಟ್ ಮಾಡಿಕೊಂಡಿದ್ದರು. ಆದರೆ, ಈ ಸಲ ಜನ್ಮ ದಿನದಂದೇ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದು, ವಿಶೇಷ.
ಇದನ್ನೂ ಓದಿ : ಇಂದು ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ ತರುಣ್-ಸೋನಲ್ : ಮದುವೆಗೆ ಸಿದ್ಧಗೊಂಡಿದೆ ಕಮಲದ ಮಂಟಪ..!