ಚಿತ್ರದುರ್ಗ : ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್ ಆರೋಗ್ಯದಲ್ಲಿ ಏರುಪೇರಾಗಿದ್ದು, ಅವರಿಗೆ ಬೆಂಗಳೂರಿನ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಡಿ. ಸುಧಾಕರ್ ಶ್ವಾಸಕೋಶದ ಸೋಂಕಿನಿಂದ ಬಳಲುತ್ತಿದ್ದು, ಕಳೆದ ಹದಿನೈದು ದಿನಗಳಿಂದ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇದೀಗ ಅವರನ್ನು ಕಿಮ್ಸ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ.

ಈ ಹಿಂದೆ ಸಚಿವ ಡಿ. ಸುಧಾಕರ್ ಅವರು ಮಂಡಿ ನೊವಿನ ಶಸ್ತ್ರ ಚಿಕಿತ್ಸೆಗೆ ದಾಖಲಾಗಿದ್ದರು. ನಂತರ ಶ್ವಾಸಕೋಶದ ತೊಂದರೆ ಕಾಣಿಸಿಕೊಂಡಿತ್ತು. ಇದೀಗ ಡಿ. ಸುಧಾಕರ್ ಅವರು ತೀರ್ವ ನಿಗಾ ಘಟಕದಲ್ಲಿದ್ದು, ಹೈದರಾಬಾದ್ ಮೂಲದ ವೈದ್ಯರು ಚಿಕಿತ್ಸೆ ನೀಡುವ ಸಾಧ್ಯತೆಯಿದೆ. ಡಿ. ಸುಧಾಕರ್ ಅವರು ಬೇಗ ಗುಣಮುಖರಾಗಲು ಕಾರ್ಯಕರ್ತರು ಪ್ರಾರ್ಥನೆ ಮಾಡಿಕೊಳ್ಳುತ್ತಿದ್ದಾರೆ.
ಇದನ್ನೂ ಓದಿ : RCB ತವರು ನೆಲದಲ್ಲಿ ಇಂದು ಹೈ-ವೋಲ್ಟೇಜ್ ಫೈಟ್ – ಗುಜರಾತ್ ಟೈಟಾನ್ಸ್ ಸವಾಲಿಗೆ ರಾಯಲ್ ಚಾಲೆಂಜರ್ಸ್ ರೆಡಿ!
Author: Btv Kannada
Post Views: 382









