ಬ್ರೆಜಿಲ್ : ಬ್ರೆಜಿಲ್ನಲ್ಲಿ ಭಾರೀ ವಿಮಾನ ದುರಂತ ಸಂಭವಿಸಿಸಿದೆ. ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ವಿಮಾನ ಇದ್ದಕ್ಕಿದ್ದಂತೆ ಪತನಗೊಂಡಿದೆ. ಟೇಕ್ ಆಫ್ ಆದ ಕೆಲವೇ ಸಮಯದಲ್ಲಿ ವಿಮಾನ ಭೂಮಿಗೆ ಅಪ್ಪಳಿಸಿದ್ದು, ಭೀಕರ ದುರಂತದಲ್ಲಿ ನಾಲ್ವರು ಸಿಬ್ಬಂದಿ, 58 ಪ್ರಯಾಣಿಕರು ಸೇರಿ ವಿಮಾನದಲ್ಲಿ ಎಲ್ಲರೂ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಈ ವಿಷಯವನ್ನು ಬ್ರೆಜಿಲ್ನ ರಾಷ್ಟ್ರೀಯ ಮಾಧ್ಯಮಗಳು ಖಚಿತಪಡಿಸಿವೆ.
ಪತನಗೊಂಡ ಕೆಲವೇ ಸೆಕೆಂಡ್ಗಳಲ್ಲಿ ವಿಮಾನದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಸುತ್ತಲೂ ಹೊಗೆ ಆವರಿಸಿತ್ತು. ಇದರಿಂದಾಗಿ ವಿಮಾನದಲ್ಲಿದ್ದ ಎಲ್ಲರೂ ಬೆಂಕಿಯಲ್ಲಿ ಸುಟ್ಟು ಕರಕಲಾಗಿದ್ದಾರೆ. ಏರ್ಬಸ್ ಮತ್ತು ಇಟಾಲಿಯನ್ ಏರ್ವೇಸ್ ಜಂಟಿ ಒಡೆತನದ “ATR 72-500 ಟರ್ಬೋಟಾಪ್”ವಿಮಾನವು ಬ್ರೆಜಿಲ್ನ ಸಾವೋ ಪೌಲೋದಲ್ಲಿ ಪತನಗೊಂಡಿದೆ. ವಿಮಾನವು ಬ್ರೆಜಿಲ್ನ ಪರಾನಾ ರಾಜ್ಯದ ಕ್ಯಾಸ್ಕಾವೆಲ್ನಿಂದ ಹೊರಟು ಸಾವೊ ಪಾಲೊ ರಾಜ್ಯದ ಗೌರುಲ್ಹೋಸ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳುತ್ತಿತ್ತು.
ಅಪಘಾತದ ಬಗ್ಗೆ ಬ್ರೆಜಿಲ್ ಅಧ್ಯಕ್ಷ ಲೂಯಿಜ್ ಇನಾಸಿಯೊ ಲುಲಾ ಡಾ ಸಿಲ್ವಾ ಆಘಾತ ವ್ಯಕ್ತಪಡಿಸಿದ್ದಾರೆ. ಅಪಘಾತ ಸಂಭವಿಸಿದ ತಕ್ಷಣ ಭದ್ರತಾ ಸಿಬ್ಬಂದಿ, ಪೊಲೀಸರು ಮತ್ತು ಸೇನಾ ಪಡೆಗಳು ರಕ್ಷಣಾ ಕ್ರಮಗಳನ್ನು ಕೈಗೊಂಡಿದ್ದು, ಕಾರ್ಯಚರಣೆ ಮುಂದುವರೆಸಿದೆ.
ಇದನ್ನೂ ಓದಿ : ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಭಾರತಕ್ಕೆ ಆರನೇ ಪದಕ – ಕುಸ್ತಿಯಲ್ಲಿ ಕಂಚು ಗೆದ್ದ ಅಮನ್ ಸೆಹ್ರಾವತ್..!