Download Our App

Follow us

Home » ಕ್ರೀಡೆ » ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಆರನೇ ಪದಕ – ಕುಸ್ತಿಯಲ್ಲಿ ಕಂಚು ಗೆದ್ದ ಅಮನ್ ಸೆಹ್ರಾವತ್..!

ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಆರನೇ ಪದಕ – ಕುಸ್ತಿಯಲ್ಲಿ ಕಂಚು ಗೆದ್ದ ಅಮನ್ ಸೆಹ್ರಾವತ್..!

2024ರ ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಭಾರತ ಆರನೇ ಪದಕ ಗೆದ್ದಿದೆ. ಪುರುಷರ 57 ಕೆಜಿ ವಿಭಾಗದ ಕುಸ್ತಿಯಲ್ಲಿ ಭಾರತದ ಯುವ ಕುಸ್ತಿಪಟು ಅಮನ್ ಸೆಹ್ರಾವತ್ ಕಂಚಿನ ಪದಕಕ್ಕೆ ಕೊರಳೊಡ್ಡಿದ್ದಾರೆ. ಇದು ಈ ಬಾರಿಯ ಒಲಿಂಪಿಕ್ಸ್‌ ಕುಸ್ತಿಯಲ್ಲಿ ಭಾರತದ ಮೊದಲನೇ ಪದಕವಾಗಿದೆ. ಈಗಾಗಲೇ ಶೂಟಿಂಗ್​ನಲ್ಲಿ 3 ಕಂಚು, ಹಾಕಿಯಲ್ಲಿ ಒಂದು ಕಂಚು, ಜಾವಲಿನ್ ಥ್ರೋನಲ್ಲಿ ಬೆಳ್ಳಿ ಪದಕ ಭಾರತಕ್ಕೆ ದಕ್ಕಿದೆ.

ಅಮನ್ ಸೆಹ್ರಾವತ್ ಪೋರ್ಟೊ ರಿಕೊದ ಡೇರಿಯನ್ ಟೊಯಿ ಕ್ರೂಜ್ ವಿರುದ್ಧ ಗೆದ್ದು ಕಂಚಿನ ಪದಕವನ್ನು ತನ್ನದಾಗಿಸಿಕೊಂಡಿದ್ದಾರೆ. 21ವರ್ಷದ ಹರಿಯಾಣದ ಯುವಕ ಅಮನ್‌ ಈ ರೋಚಕ ಗೆಲುವಿನೊಂದಿಗೆ ತಮ್ಮ ಚೊಚ್ಚಲ ಒಲಿಂಪಿಕ್ಸ್‌ನಲ್ಲೇ ಪದಕ ಗೆದ್ದ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಈ ಪದಕವನ್ನು ದೇಶಕ್ಕೆ, ತಂದೆ ತಾಯಿಗೆ ಅರ್ಪಿಸುವುದಾಗಿ ಪಂದ್ಯದ ಬಳಿಕ ಅಮನ್‌ ತಿಳಿಸಿದ್ದಾರೆ.

2008ರ ಒಲಿಂಪಿಕ್ಸ್‌ನಿಂದಲೂ ಭಾರತೀಯ ಕುಸ್ತಿಪಟುಗಳು ಪದಕವಿಲ್ಲದೇ ದೇಶಕ್ಕೆ ಮರಳಿಲ್ಲ. ಅದರಲ್ಲೂ ಈ ಬಾರಿ ಕುಸ್ತಿಯಲ್ಲಿ ಫೈನಲ್ ತಲುಪಿದ್ದ ವಿನೇಶ್‌ ಫೋಗಟ್‌ ಅನರ್ಹಗೊಂಡ ಬಳಿಕ ಭಾರತಕ್ಕೆ ಪದಕದ ಕೊರತೆಯಾಗುವ ಭೀತಿಯಿತ್ತು. ಆದರೆ, ಅಮನ್‌ ಅದಕ್ಕೆ ಅವಕಾಶ ನೀಡಿಲ್ಲ. ಕುಸ್ತಿಯಲ್ಲಿ ಪದಕ ಗೆದ್ದು ಆ ಕೊರತೆಯನ್ನು ನೀಗಿಸಿದ್ದಾರೆ.

ಪ್ರಧಾನಿ ಮೋದಿ ಮೆಚ್ಚುಗೆ : ಇನ್ನು ಕುಸ್ತಿಯಲ್ಲಿ ಭಾರತಕ್ಕೆ ಮೊದಲ ಪದಕ ಹಾಗೂ ಒಟ್ಟಾರೆ ಭಾರತಕ್ಕೆ 6ನೇ ಪದಕವನ್ನು ಗೆದ್ದುಕೊಟ್ಟ ಕುಸ್ತಿಪಟು ಅಮಾನ್ ಅವರನ್ನು ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿದ್ದು, “ನಮ್ಮ ಕುಸ್ತಿಪಟುಗಳು ನಮಗೆ ಇನ್ನಷ್ಟು ಹೆಮ್ಮೆ ತಂದಿದ್ದಾರೆ! ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಪುರುಷರ ಫ್ರೀಸ್ಟೈಲ್ 57 ಕೆಜಿ ವಿಭಾಗದಲ್ಲಿ ಕಂಚಿನ ಪದಕ ಗೆದ್ದಿದ್ದಕ್ಕಾಗಿ ಅಮನ್ ಸೆಹ್ರಾವತ್ ಅವರಿಗೆ ಅಭಿನಂದನೆಗಳು. ಅವರ ಸಮರ್ಪಣೆ ಮತ್ತು ದೃಢತೆ ಸ್ಪಷ್ಟವಾಗಿ ಗೋಚರಿಸುತ್ತದೆ. ಇಡೀ ರಾಷ್ಟ್ರವು ಈ ಅದ್ಭುತ ಸಾಧನೆಯನ್ನು ಆಚರಿಸುತ್ತಿದೆ ಎಂದು ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಇದನ್ನೂ ಓದಿ : ಸಿಎಂ ಸಿದ್ದರಾಮಯ್ಯ ವಿರುದ್ಧ ಖಾಸಗಿ ದೂರು ಪ್ರಕರಣ – ಆದೇಶ ಕಾಯ್ದಿರಿಸಿದ ಕೋರ್ಟ್..!

Leave a Comment

DG Ad

RELATED LATEST NEWS

Top Headlines

ಮೈಸೂರಿನಲ್ಲಿ ಹಾಡಹಗಲೇ ಮನೆ ಕಳ್ಳತನಕ್ಕೆ ಯತ್ನ – ದೃಶ್ಯ ಸಿಸಿಟಿವಿಯಲ್ಲಿ ಸೆರೆ..!

ಮೈಸೂರು : ಮೈಸೂರಿನಲ್ಲಿ ಹಾಡುಹಗಲೇ ಮನೆಗಳ್ಳತನಕ್ಕೆ ಯತ್ನಿಸಿದ್ದ ಖದೀಮನ ಕಳ್ಳತನದ ಯತ್ನ ವಿಫಲವಾಗಿದೆ. ಜಿಲ್ಲೆಯ ಬನ್ನೂರಿನ ರಾಮದೇವರ ಬೀದಿಯಲ್ಲಿ ಜಯಮ್ಮ ಎಂಬುವರಿಗೆ ಸೇರಿದ ಮನೆಯಲ್ಲಿ ಕಳ್ಳತನದ ಯತ್ನ

Live Cricket

Add Your Heading Text Here