SSLC ಪರೀಕ್ಷೆಯಲ್ಲಿ ಕಡಿಮೆ ಅಂಕ – ಮನನೊಂದು ವಿದ್ಯಾರ್ಥಿ‌ ಆತ್ಮಹತ್ಯೆ!

ಚಿತ್ರದುರ್ಗ : SSLC ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದಿದ್ದಕ್ಕೆ ಮನನೊಂದು ವಿದ್ಯಾರ್ಥಿ‌ಯೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿತ್ರದುರ್ಗದ ಅಂಜುಮನ್ ಸರ್ಕಲ್ ಬಳಿ ನಡೆದಿದೆ.

ಡಾನ್ ಬಾಸ್ಕೊ ಶಾಲೆಯ ವಿದ್ಯಾರ್ಥಿ ಅಯಾನ್ ಬೇಗ್ ( 16 ) ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿ. ಅಯಾನ್ ಬೇಗ್ ಹೆಚ್ಚಿನ ಶೇಕಡವಾರು ನಿರೀಕ್ಷೆಯಲ್ಲಿದ್ದ, ಆದರೆ ಕೇವಲ 45% ಫಲಿತಾಂಶ ಬಂದ ಹಿನ್ನೆಲೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಈ ಸಂಬಂಧ ಚಿತ್ರದುರ್ಗ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ : ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ – 7 ವಿದ್ಯಾರ್ಥಿಗಳಿಗೆ 625ಕ್ಕೆ 625 ಅಂಕ!

Btv Kannada
Author: Btv Kannada

Leave a Comment

Read More

Read More