ಬೆಂಗಳೂರು : ಎಸ್ಎಸ್ಎಲ್ಸಿ ಪರೀಕ್ಷೆ-1 ಫಲಿತಾಂಶ ಪ್ರಕಟಗೊಂಡಿದ್ದು, ಇತಿಹಾಸದಲ್ಲಿ ಇದೇ ಮೊದಲಬಾರಿಗೆ ಶೇ.94.10 ರಷ್ಟು ಫಲಿತಾಂಶ ಪ್ರಕಟವಾಗಿದೆ.

ಈ ಬಾರಿಯೂ ದಕ್ಷಿಣ ಕನ್ನಡ ಜಿಲ್ಲೆ ಪ್ರಥಮ ಸ್ಥಾನ ಪಡೆದುಕೊಂಡಿದೆ. 98.40% ಉತ್ತೀರ್ಣ ಫಲಿತಾಂಶದೊಂದಿಗೆ ದಕ್ಷಿಣ ಕನ್ನಡ ಜಿಲ್ಲೆ ಪ್ರಥಮ ಸ್ಥಾನ ಪಡೆದಿದೆ.

ರಾಜ್ಯದಲ್ಲಿ 7 ವಿದ್ಯಾರ್ಥಿಗಳು 625ಕ್ಕೆ 625 ಅಂಕ ಪಡೆದು ಮೊದಲ ರ್ಯಾಂಕ್ ಪಡೆದುಕೊಂಡಿದ್ದಾರೆ. ಚಿಕ್ಕೋಡಿಯ ಕಟಗೇರಿ ಸರ್ಕಾರಿ ಶಾಲೆಯ ವಿದ್ಯಾರ್ಥಿನಿ ಪ್ರಾರ್ಥನಾ ನಾಗಪ್ಪ, ದಾವಣಗೆರೆಯ ಕಬ್ಬಳ ಗ್ರಾಮದ ಶ್ರೀ ವಿದ್ಯಾಲಕ್ಷ್ಮೀ ಕಾನ್ವೆಂಟ್ ಸ್ಕೂಲ್ ವಿದ್ಯಾರ್ಥಿ ಭರತ್, ಚಿಕ್ಕಮಗಳೂರು ಸೈಂಟ್ ಮೇರಿಸ್ ಹೈಸ್ಕೂಲ್ ವಿದ್ಯಾರ್ಥಿನಿ ಬೃಂದ ಎಂ ತಾಪ್ಸೆ 625ಕ್ಕೆ 625 ಅಂಕ ಪಡೆದು ಉತ್ತೀರ್ಣರಾಗಿದ್ದಾರೆ.

ಇನ್ನು ಬೆಂಗಳೂರು ಉತ್ತರ ಪೂರ್ಣ ಪ್ರಜ್ಞಾ ಎಜುಕೇಶನಲ್ ಸೆಂಟರ್ ವಿದ್ಯಾರ್ಥಿ ಧನುಶ್ ಸುಧೀರ್, ಉಡುಪಿ ಮದರ್ ತೆರೇಸಾ ಮೆಮೋ ಸ್ಕೂಲ್ ವಿದ್ಯಾರ್ಥಿ ಪ್ರೀತಮ್ ಜಿ ಪೂಜಾರಿ, ವಿಜಯಪುರ ಆಕ್ಸ್ಫರ್ಡ್ ಇಂಗ್ಲಿಷ್ ಮೀಡಿಯಂ ಹೈಸ್ಕೂಲ್ ವಿದ್ಯಾರ್ಥಿನಿ ಸೌಜನ್ಯ ಬಸವರಾಜ್ ಮತ್ತು ರಾಯಚೂರು ಬಿವಿಆರ್ ಇಂಗ್ಲಿಷ್ ಮೀಡಿಯಂ ಹೈಸ್ಕೂಲ್ ವಿದ್ಯಾರ್ಥಿ ಸುಕದೇವ 625ಕ್ಕೆ 625 ಅಂಕ ಪಡೆದು ಉತ್ತೀರ್ಣರಾಗಿದ್ದಾರೆ.



ಇದನ್ನೂ ಓದಿ : SSLC ಫಲಿತಾಂಶ ಪ್ರಕಟ – ದಕ್ಷಿಣ ಕನ್ನಡ ಜಿಲ್ಲೆ ಪ್ರಥಮ, ದ್ವಿತೀಯ ಉಡುಪಿ!









