ಬೆಂಗಳೂರು : ವಿಜಯೇಂದ್ರ ಅವರೇ ನಿಮ್ಮ ಬಂಡವಾಳ ನನ್ನ ಬಳಿ ಇದೆ, ತಾಕತ್ತಿದ್ರೆ ನಿಮಗೆ ಕುಮ್ಮಕ್ಕು ಕೊಟ್ಟ ಕಾಂಗ್ರೆಸ್ ಲೀಡರ್ ಹೆಸರೇಳಿ ಎಂದು ಡಿ.ಕೆ ಶಿವಕುಮಾರ್ ಸವಾಲ್ ಎಸೆದಿದ್ದರು. ಇದೀಗ ಈ ಸಂಬಂಧ ಬಿ.ವೈ.ವಿಜಯೇಂದ್ರ ತಿರುಗೇಟು ಕೊಟ್ಟಿದ್ದಾರೆ. ಡಿ.ಕೆ. ಶಿವಕುಮಾರ್ ಭ್ರಷ್ಟಾಚಾರದ ಪಿತಾಮಹ, ಭ್ರಷ್ಟಾಚಾರದ ಬಗ್ಗೆ ಡಿಕೆಶಿ ಏನ್ ಮಾತಾಡೋದು..? ಡಿಕೆಶಿ ಮಾತನ್ನು ಗಂಭೀರವಾಗಿ ತೆಗೆದುಕೊಳ್ಳಬೇಡಿ. ಡಿಕೆಶಿ ಬಾಯಲ್ಲಿ ಭ್ರಷ್ಟಾಚಾರದ ಮಾತು ಬರದಿದ್ರೆ ಒಳ್ಳೇದು ಎಂದಿದ್ದಾರೆ.
ಈ ಬಗ್ಗೆ ಬೆಂಗಳೂರಿನಲ್ಲಿ ಬಿ.ವೈ.ವಿಜಯೇಂದ್ರ ಮಾತನಾಡಿ, ನಮ್ಮ ಹೋರಾಟ ಯಾವುದೇ ವ್ಯಕ್ತಿ ವಿರುದ್ಧ ಅಲ್ಲ. ಸರ್ಕಾರದ ಅಕ್ರಮಗಳ ವಿರುದ್ಧ ಹೋರಾಟ ಮಾಡ್ತಿದ್ದೇವೆ, ನಾಳೆ ಬೃಹತ್ ಪಾದಯಾತ್ರೆಗೆ ಚಾಲನೆ ನೀಡುತ್ತಿದ್ದೇವೆ. ಮಾಜಿ ಸಿಎಂ ಬಿಎಸ್ವೈ, ಕೇಂದ್ರ ಸಚಿವ ಹೆಚ್ಡಿಕೆ ಚಾಲನೆ ನೀಡ್ತಾರೆ, ನಾಳೆ ಬೆಳಗ್ಗೆ 8.30ಕ್ಕೆ ಕೆಂಗೇರಿ ಕೆಂಪಮ್ಮ ದೇಗುಲದಿಂದ ಆರಂಭವಾಗಲಿದೆ.
ಬಿಜೆಪಿ-ಜೆಡಿಎಸ್ ನಾಯಕರು ಜಂಟಿಯಾಗಿ ಪಾದಯಾತ್ರೆ ಮಾಡ್ತೇವೆ ಎಂದಿದ್ದಾರೆ.
ನಿನ್ನೆ ಸಿಎಂ ಇಲ್ಲದೇ ಸಂಪುಟ ಸಭೆ ಮಾಡಿ ಇತಿಹಾಸ ರಚಿಸಿದ್ದಾರೆ, ಸಂಪುಟ ನಿರ್ಣಯ ಮೂಲಕ ರಾಜ್ಯಪಾಲರ ಪ್ರಶ್ನಿಸೋ ಪ್ರಯತ್ನ ಮಾಡಿದ್ದಾರೆ. ನಿನ್ನೆ ಬಹಳಷ್ಟು ಹಿರಿಯ ಸಚಿವರ ಮುಖದಲ್ಲಿ ಮಂದಹಾಸ ನೋಡಿದ್ದೇವೆ, ಸಿಎಂ ಜೊತೆ ಎಷ್ಟು ಸಚಿವರಿದ್ದಾರೆ ಅನ್ನೋದಕ್ಕಿಂತ ಹಿಂದೆ ಏನ್ ಆಗ್ತಿದೆ ನೋಡಿಕೊಳ್ಳಲಿ. ಪಾದಯಾತ್ರೆಗೆ ಯಾವುದೇ ಷರತ್ತು ಹಾಕಿಲ್ಲ, ನಿನ್ನೆ ದೆಹಲಿಯಲ್ಲಿ ಚರ್ಚಿಸಿದ್ದೇವೆ, ಕಾಂಗ್ರೆಸ್ ಮಾಡ್ತಿರೋದು ಪಶ್ಚಾತ್ತಾಪ ಯಾತ್ರೆ ಎಂದು ವಿಜಯೇಂದ್ರ ಹೇಳಿದ್ದಾರೆ.
ಇದನ್ನೂ ಓದಿ : ವಿಜಯೇಂದ್ರ ಅವರೇ ತಾಕತ್ತಿದ್ರೆ ನಿಮಗೆ ಕುಮ್ಮಕ್ಕು ಕೊಟ್ಟ ಕಾಂಗ್ರೆಸ್ ಲೀಡರ್ ಹೆಸರೇಳಿ – ಡಿಸಿಎಂ ಡಿಕೆಶಿ ಸವಾಲ್..!