ಹಾಸನ : ಹಾಸನಾಂಬೆ ದರ್ಶನಕ್ಕೆ ಲಕ್ಷಾಂತರ ಭಕ್ತರು ಆಗಮಿಸಿದ್ದು, ಜನರ ನಿಯಂತ್ರಣಕ್ಕೆ ಪರದಾಡುವಂತಾಗಿದೆ. ಜನರನ್ನು ನಿಯಂತ್ರಿಸಲು 1,000 ರೂ.ನ ನೇರ ದರ್ಶನದ ಟಿಕೆಟ್ ಮಾರಾಟ ರದ್ದು ಮಾಡಲಾಗಿದೆ.
ವರ್ಷಕ್ಕೆ ಒಮ್ಮೆ ದರ್ಶನ ನೀಡುವ ಹಾಸನಾಂಬೆ ದರ್ಶನ ಪಡೆಯಲು ದೇಶ, ವಿದೇಶದಿಂದ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ಈ ಹಿನ್ನಲೆಯಲ್ಲಿ ಜಿಲ್ಲಾಡಳಿತ ಎರಡೂವರೆ ಲಕ್ಷ ಪಾಸ್ ಹಂಚಿದೆ. ಅಷ್ಟೇ ಅಲ್ಲದೆ VIP ಪಾಸ್ ಜೊತೆಗೆ ಎಂಟ್ರಿ ಟಿಕೆಟ್ ಕೂಡ ನೀಡಿದೆ. ಆದರೆ ಹಾಸನಾಂಬೆ ದರ್ಶನಕ್ಕೆ ಸಾವಿರಾರು ರೂಪಾಯಿ ಕೊಟ್ಟು ಬಂದ ಸಹಸ್ರಾರು ಭಕ್ತರು ಸರತಿ ಸಾಲಿನಲ್ಲಿ ಗಂಟೆಗಟ್ಟಲೆ ನಿಂತು, ಸುಡು ಬಿಸಿಲಲ್ಲಿ ಬಳಲಿ ಬೆಂಡಾದರು. ಇನ್ನು VIPಗಳ ಆಡಂಬೋಲ ಕಂಡು ಜನರ ರೌದ್ರಾವತಾರ ತಾಳಿದ್ದಾರೆ.
ಇನ್ನು ಲಕ್ಷಾಂತರ ಪಾಸ್ ಕೊಟ್ಟಿದ್ದರಿಂದ ಹಾಸನಾಂಬೆ ದೇಗುಲದಲ್ಲಿ ಅವಾಂತರ ಸೃಷ್ಠಿಯಾಗಿದೆ. ರಾತ್ರಿ-ಹಗಲು ಕಾದರು ಜನಸಾಮಾನ್ಯರಿಗೆ ದರ್ಶನವಿಲ್ಲ ಕಾರಣ ಭಕ್ತರು ಬ್ಯಾರಿಕೇಡ್ ಕಿತ್ತೆಸೆದು ಒಳನುಗ್ಗಿದ್ದಾರೆ.
ಜನಾಕ್ರೋಶಕ್ಕೆ ಮಣಿದ ಜಿಲ್ಲಾಡಳಿತ, 300, 1,000 ಟಿಕೆಟ್ ಎಂಟ್ರಿ ರದ್ದುಗೊಳಿಸಿದೆ. ಅಷ್ಟೇ ಅಲ್ಲದೆ, ಹಾಸನ ಸುತ್ತಮುತ್ತಲ ಪ್ರದೇಶಗಳಿಂದ 500 ಬಸ್ ರದ್ದುಗೊಳಿಸಲಾಗಿದೆ. ರೇವಣ್ಣ ಕೂಡ ಖುದ್ದು ಟಿಕೆಟ್ ಖರೀದಿಸಿ ಹಾಸನಾಂಬೆ ದರ್ಶನ ಪಡೆಯಲು ಕ್ಯೂ ನಿಂತಿದ್ದಾರೆ. ಇನ್ನು ಸರಿಯಾಗಿ ವ್ಯವಸ್ಥೆ ಮಾಡದ ಜಿಲ್ಲಾಡಳಿತಕ್ಕೆ ಜನರು ಹಿಡಿಶಾಪ ಹಾಕಿದ್ದಾರೆ.
ಇದನ್ನೂ ಓದಿ : ದರ್ಶನ್ ರಿಲೀಸ್ ಆಗಿದ್ಕೆ ಈ ಜೀವಕ್ಕೆ ಮಾತ್ರ ಎಲ್ಲಿಲ್ಲದ ನೋವು..!