ಬೆಂಗಳೂರು : ಮೈಸೂರು ಪಾದಯಾತ್ರೆ ಕೈಗೊಂಡಿರುವ ಬಿಜೆಪಿ ಮತ್ತು ಜೆಡಿಎಸ್ಗೆ ಟಕ್ಕರ್ ಕೊಡಲು ಕಾಂಗ್ರೆಸ್ ಜನಾಂದೋಲ ಕಾರ್ಯಕ್ರಮ ನಡೆಸುತ್ತಿದ್ದು, ಇಂದು ರಾಮನಗರ ಜಿಲ್ಲೆಯ ಬಿಡದಿಯಲ್ಲಿ ನಡೆದ ಜನಾಂದೋಲ ಸಭೆಯಲ್ಲಿ ಡಿಸಿಎಂ ಡಿಕೆ ಶಿವಕುಮಾರ್, ಬಿಜೆಪಿ-ಜೆಡಿಎಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಕುಮಾರಸ್ವಾಮಿ ನಿನ್ನ ಆಸ್ತಿ ಎಷ್ಟು..? ನೀನು ಹುಟ್ಟಿದಾಗ ನಿಮ್ಮ ತಂದೆಗೆ ಇದ್ದ ಆಸ್ತಿ ಎಷ್ಟು..? ದೇವಗೆರೆ, ಕುಂಬಳಗೋಡು ಬಳಿಯ 200 ಎಕರೆ ಕತೆ ಏನು..? ದೊಡ್ಡಗುಬ್ಬಿ, ಚಿಕ್ಕಗುಬ್ಬಿ, ಯಲಹಂಕ, ನೆಲಮಂಗಲದಲ್ಲಿ ಎಷ್ಟಿದೆ..? ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಪ್ರಶ್ನಿಸಿದ್ದಾರೆ.
ಈ ಬಗ್ಗೆ ಬೆಂಗಳೂರಲ್ಲಿ ಡಿ.ಕೆ. ಶಿವಕುಮಾರ್ ಮಾತನಾಡಿ, ಏರ್ಪೋರ್ಟ್ ರಸ್ತೆಯಲ್ಲಿರೋ ಆಸ್ತಿ ಎಷ್ಟು..? ಕೇತಗಾನಹಳ್ಳಿ ಭೂಮಿ ಹೇಗೆ ಬಂತು..? ಹಾಸನದಲ್ಲಿ ಎಷ್ಟಿದೆ..? ಮೈನಿಂಗ್ನಿಂದ ನಿಮಗೆ ಬಂದಿರೋದೆಷ್ಟು..? ನಿನ್ನ ಸೋದರ ಬಾಲಕೃಷ್ಣೇಗೌಡರ ಆಸ್ತಿ ಎಷ್ಟು..? ಸರ್ಕಾರಿ ನೌಕರನಿಗೆ ಸಾವಿರಾರು ಕೋಟಿ ಎಲ್ಲಿಂದ ಬಂತು..? ನಿಮ್ಮ ಆಸ್ತಿ ಲಿಸ್ಟ್ ನನ್ನ ಬಳಿಯೂ ಇದೆ.. ಎಲ್ಲಾ ಬಿಚ್ಚಿಡ್ತೀನಿ ಎಂದಿದ್ದಾರೆ.
ವಿಜಯೇಂದ್ರ ಅವರೇ ನಿಮ್ಮ ಬಂಡವಾಳವೂ ನನ್ನ ಬಳಿ ಇದೆ, ತಾಕತ್ತಿದ್ರೆ ನಿಮಗೆ ಕುಮ್ಮಕ್ಕು ಕೊಟ್ಟ ಕಾಂಗ್ರೆಸ್ ಲೀಡರ್ ಹೆಸರೇಳಿ ಎಂದು ಡಿ.ಕೆ. ಶಿವಕುಮಾರ್ ವಿಜಯೇಂದ್ರಗೆ ಸವಾಲ್ ಹಾಕಿದ್ದಾರೆ.
ಇದನ್ನೂ ಓದಿ : 21 ದೇಶ.. 13 ಭಾಷೆ.. ಭಾರತೀಯ ಚಿತ್ರರಂಗದಲ್ಲೇ ಮೊಟ್ಟ ಮೊದಲ ಬಾರಿಗೆ ಗ್ಲೋಬಲ್ ಲೆವೆಲ್ನಲ್ಲಿ “ಮಾರ್ಟಿನ್” ಪ್ರೆಸ್ಮೀಟ್..!