ಬೆಂಗಳೂರು : ಧಾರವಾಡದ ಜಿ.ಪಂ ಮಾಜಿ ಸದಸ್ಯ ಯೋಗೀಶ್ ಗೌಡ ಕೊಲೆ ಪ್ರಕರಣದಲ್ಲಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ. ಈ ಕೇಸ್ನ A 19 ಆರೋಪಿ ಇನ್ಸ್ಪೆಕ್ಟರ್ ಚೆನ್ನಕೇಶವ ಟಿಂಗರೀಕರಗೆ ಕೋರ್ಟ್ ಏಳು ವರ್ಷ ಜೈಲು ಶಿಕ್ಷೆ ಆಗಿದೆ.

ವಿನಯ್ ಕುಲಕರ್ಣಿ ಹೇಳಿದ ಹಾಗೆಯೇ ಪೊಲೀಸ್ ಇನ್ಸ್ಪೆಕ್ಟರ್ ಚೆನ್ನಕೇಶವ ಟಿಂಗರೀಕರ ಕೇಸ್ ಮುಚ್ಚಿ ಹಾಕಿದ್ದಾನೆ. MLA ವಿನಯ್ ಕುಲಕರ್ಣಿ ಸೂಚನೆಯಂತೆ ನಡೆದುಕೊಂಡು, ನಿಜವಾದ ಆರೋಪಿಗಳನ್ನು ರಕ್ಷಣೆ ಮಾಡಿದ್ದ ಚೆನ್ನಕೇಶವ ಟಿಂಗರೀಕರನನ್ನು ಇಂದು ಸಿಬಿಐ ಪೊಲೀಸರು ಏಳು ವರ್ಷ ಜೈಲಿಗೆ ಕಳುಹಿಸಿದ್ದಾರೆ.
2016ರ ಜೂನ್ 15ರಂದು ಯೋಗೀಶ್ ಗೌಡ ಕೊಲೆ ನಡೆದಾಗ ಧಾರವಾಡ ಉಪನಗರ ಠಾಣೆ ಇನ್ಸ್ಪೆಕ್ಟರ್ ಆಗಿದ್ದ ಟಿಂಗರಿಕರ್, ವಿರುದ್ಧ ಸಾಕ್ಷಿ ನಾಶ ಹಾಗೂ ಭ್ರಷ್ಟಾಚಾರ ಆರೋಪ ಕೇಳಿಬಂದಿತ್ತು. ಬಳಿಕ ಧಾರವಾಡ ಹೈಕೋರ್ಟ್ನಿಂದ ನಿರೀಕ್ಷಣಾ ಜಾಮೀನು ಪಡೆದಿದ್ದ ಟಿಂಗರಿಕರ್, ಎಫ್ಐಆರ್ಗೆ ತಡೆ ತರಲು ಯತ್ನಿಸಿದ್ದರು. ತನ್ನ ವಿರುದ್ಧ ದಾಖಲಾದ ಎಫ್ಐಆರ್ಗೆ ತಡೆ ನೀಡುವಂತೆ ಕೋರಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು.

ವಿಚಾರಣೆ ನಡೆಸಿದ ಕೋರ್ಟ್, ಅರ್ಜಿ ವಜಾಗೊಳಿಸಿತ್ತು. ಅಲ್ಲದೇ, ಆ ಸಮಯದಲ್ಲಿ ಜನಪ್ರತಿನಿಧಿಗಳ ಕೋರ್ಟ್ನಲ್ಲಿ ನಡೆದ ವಿಚಾರಣೆ ವೇಳೆ ಟಿಂಗರಿಕರ್ ಗೈರಾಗಿದ್ದರು. ಹೀಗಾಗಿ ಕೋರ್ಟ್ ಜಾಮೀನು ರಹಿತ ವಾರೆಂಟ್ ಅನ್ನು ಈ ಹಿಂದೆ ಕೂಡ ಜಾರಿ ಮಾಡಿತ್ತು. ಕೋರ್ಟ್ ವಾರೆಂಟ್ ಜಾರಿ ಮಾಡಿದ ಬೆನ್ನಲ್ಲೇ ಚೆನ್ನಕೇಶವ ಟಿಂಗರಿಕರ್ ಅವರನ್ನು ಬಂಧಿಸಲು ಸಿಬಿಐ ಅಧಿಕಾರಿಗಳ ಟಿಂಗರಿಕರ್ ಮನೆ ಮೇಲೆ ದಾಳಿ ನಡೆಸಿದ್ದರು. ಈ ವಿಚಾರ ತಿಳಿಯುತ್ತಿದ್ದಂತೆ ಟಿಂಕರಿಗರ್ ಮನೆಯಿಂದ ಪರಾರಿಯಾಗಿದ್ದರು.
ಇಂದು ವಾದ ಪ್ರತಿವಾದ ಆಲಿಸಿದ ನ್ಯಾಯಾಧೀಶರು ಇನ್ಸ್ಪೆಕ್ಟರ್ ಚೆನ್ನಕೇಶವ ಟಿಂಗರೀಕರಗೆ ಏಳು ವರ್ಷ ಜೈಲು ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದ್ದಾರೆ. ಶಾಸಕರು ಹೇಳಿದಂತೆ ಕೇಳಿಕೊಂಡು ಸುಳ್ಳು ಕೇಸ್ ಹಾಕುವ ಮತ್ತು ಗಂಭೀರ ಹಗರಣಗಳನ್ನು ಮುಚ್ಚಿಹಾಕುವ ಅಧಿಕಾರಿಗಳಿಗೆ ಈ ತೀರ್ಪು ಒಂದು ಪಾಠವಾಗಲಿದೆ.
ಇದನ್ನೂ ಓದಿ : ವಿನಯ್ ಕುಲಕರ್ಣಿಗೆ ಜೀವಾವಧಿ ಶಿಕ್ಷೆ – ಶಾಸಕ ಸ್ಥಾನ ರದ್ದು!









