ವಿನಯ್ ಕುಲಕರ್ಣಿಗೆ ಜೀವಾವಧಿ ಶಿಕ್ಷೆ – ಶಾಸಕ ಸ್ಥಾನ ರದ್ದು!

ಬೆಂಗಳೂರು : ಯೋಗೇಶ್ ಗೌಡ ಕೊಲೆ ಪ್ರಕರಣದಲ್ಲಿ ಆರೋಪಿ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಜೀವಾವಧಿ ಶಿಕ್ಷೆ ಹಿನ್ನಲೆ ವಿನಯ್ ಕುಲಕರ್ಣಿಯ ಶಾಸಕ ಸ್ಥಾನ ರದ್ದಾಗಿದೆ.

ಕಾನೂನು ಪ್ರಕಾರ, ಯಾವುದೇ ಶಾಸಕನ ವಿರುದ್ಧ 2 ವರ್ಷಕ್ಕಿಂತ ಹೆಚ್ಚಿನ ವರ್ಷ ಜೈಲು ಶಿಕ್ಷೆ ಪ್ರಕಟವಾದರೆ ತಕ್ಷಣವೇ ಶಾಸಕ ಸ್ಥಾನ ರದ್ದಾಗುತ್ತದೆ. ಅದರಂತೆ ಇದೀಗ ವಿನಯ್ ಕುಲಕರ್ಣಿ ಶಾಸಕ ಸ್ಥಾನದಿಂದ ಅನರ್ಹಗೊಂಡಿದ್ದಾರೆ.

ಇನ್ನು ಈ ಕೇಸ್​​ನ ಆರೋಪಿಯಾದ ಪೊಲೀಸ್ ಇನ್ಸ್ಪೆಕ್ಟರ್ ಚನ್ನಕೇಶವ ಟಿಂಗರೀಕರ್​ಗೆ ಜೀವಾವಧಿ ಸಿಗದೆ 7 ವರ್ಷಗಳ ಜೈಲು ಮತ್ತು 30000 ದಂಡ ಪ್ರಕಟಿಸಲಾಗಿದೆ. ಇದರ ಜೊತೆಗೆ ಉಳಿದ ಅಪರಾಧಿಗಳಿಗೂ ಶಿಕ್ಷೆಯನ್ನು ಪ್ರಕಟ ಮಾಡಿದೆ. 16ಲಕ್ಷ ರೂ. ದಂಡದ ಮೊತ್ತ ವಿಧಿಸಲಾಗಿದ್ದು ಈ ಪರಿಹಾರವನ್ನು ಯೋಗೇಶ್ ಗೌಡ ಮಕ್ಕಳಿಗೆ ಹಾಗೂ ಸಹೋದರ ಗುರುನಾಥ್ ಗೌಡಗೆ ನೀಡಲು ಸೂಚನೆ ನೀಡಲಾಗಿದೆ.

ಕಾನೂನು ಏನು ಹೇಳುತ್ತೆ?

‘ಜನಪ್ರತಿನಿಧಿ ಕಾಯ್ದೆ 1951’ರ ಸೆಕ್ಷನ್ 8(3) ರ ಪ್ರಕಾರ, ಯಾವುದೇ ಶಾಸಕರು 2 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಅವಧಿಯ ಶಿಕ್ಷೆಗೆ ಗುರಿಯಾದರೆ ಅವರು ತಕ್ಷಣವೇ ತಮ್ಮ ಸ್ಥಾನವನ್ನು ಕಳೆದುಕೊಳ್ಳುತ್ತಾರೆ. 2013ರ ‘ಲಿಲಿ ಥಾಮಸ್ ವರ್ಸಸ್ ಯೂನಿಯನ್ ಆಫ್ ಇಂಡಿಯಾ’ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ತೀರ್ಪು ನೀಡಿದ್ದು, ಈ ತೀರ್ಪಿನ ಪ್ರಕಾರ ಮೇಲ್ಮನವಿ ಸಲ್ಲಿಸಲು ನೀಡಲಾಗುತ್ತಿದ್ದ 3 ತಿಂಗಳ ಕಾಲಾವಕಾಶವನ್ನು ರದ್ದುಪಡಿಸಲಾಗಿದೆ. ಹಾಗಾಗಿ, ಶಿಕ್ಷೆಯಾದ ತಕ್ಷಣ ಅನರ್ಹತೆ ಅನ್ವಯವಾಗುತ್ತದೆ.

ಇದನ್ನೂ ಓದಿ : ಯೋಗೀಶ್‌ ಗೌಡ ಕೊಲೆ ಕೇಸ್‌ – ವಿನಯ್‌ ಕುಲಕರ್ಣಿ ಸೇರಿ 16 ಮಂದಿಗೆ ಜೀವಾವಧಿ ಶಿಕ್ಷೆ!

Btv Kannada
Author: Btv Kannada

Leave a Comment

Read More

Read More