ಬೆಂಗಳೂರು : ತನ್ನ ತಾಯಿಯ ಚಿನ್ನ ಕದ್ದು ಪ್ರಶ್ನಿಸಿದ್ದಕ್ಕೆ ಸ್ನೇಹಿತನನ್ನೇ ಕೊಲೆ ಮಾಡಿರುವ ಘಟನೆ ಕೋಣನಕುಂಟೆಯ ಕೃಷ್ಣಪ್ಪ ಲೇಔಟ್ನಲ್ಲಿ ನಡೆದಿದೆ. ಸ್ನೇಹಿತ ಪ್ರೀತಂ ಎಂಬಾತ ಹತ್ಯೆಗೈದಿದ್ದು, ರಾಹುಲ್ ಕೊಲೆಯಾದ ಯುವಕ.

ರಾಹುಲ್ ಹಾಗೂ ಪ್ರೀತಂ ಇಬ್ಬರು ಸ್ನೇಹಿತರು. 10 ದಿನದ ಹಿಂದೆ ಪ್ರೀತಂ ತಾಯಿಯ 3 ಗ್ರಾಂ ಚಿನ್ನ ಕಳ್ಳತನವಾಗಿತ್ತು. ಆ ಚಿನ್ನ ಕದ್ದಿದ್ದು ಯಾರು ಅನ್ನೋದು ಗೊಂದಲವಾಗಿತ್ತು,
ರಾಹುಲ್ ಕದ್ದಿದ್ದಾನೆಂದು ಪ್ರೀತಂ ಹೇಳ್ತಿದ್ದ. ಪ್ರೀತಂ ಕದ್ದಿದ್ದಾನೆ ಎಂದು ರಾಹುಲ್ ಆರೋಪಿಸ್ತಿದ್ದ, ಕಳೆದ ಶನಿವಾರ ಪ್ರೀತಂ ಬ್ಯಾಗ್ನಲ್ಲಿಯೇ ರಾಹುಲ್ ಚಿನ್ನ ನೋಡಿದ್ದ. ನಿನ್ನ ಮಗನೇ ಚಿನ್ನ ಕದ್ದಿದ್ದು ಎಂದು ಪ್ರೀತಂ ತಾಯಿಗೆ ರಾಹುಲ್ ಹೇಳಿದ್ದ. ಇದರಿಂದ ಕೋಪಗೊಂಡು ರಾಹುಲ್ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ.

ಈ ಸಂಬಂಧ ಕೋಣನಕುಂಟೆ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದ್ದು, ಆರೋಪಿ ಪ್ರೀತಂ ಅನ್ನು ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ.
ಇದನ್ನೂ ಓದಿ : ಮಗಳಂತೆ ನೋಡಿಕೊಂಡ ಮನೆಯವ್ರಿಗೆ ಇಟ್ಳು ಗುನ್ನ – ಅನ್ನ ಹಾಕಿದ ಮನೆಗೆ ಕನ್ನ ಹಾಕಿದ ಖತರ್ನಾಕ್ ಯುವತಿ ಅರೆಸ್ಟ್!







