ಸ್ಯಾಂಡಲ್ವುಡ್ನಲ್ಲಿ ಸಾಕಷ್ಟು ವಿಭಿನ್ನ ಚಿತ್ರಗಳು ಬರುತ್ತಿವೆ. ಕೆಲವು ಸಿನಿಮಾಗಳು ಟೈಟಲ್ನಿಂದ ಗಮನ ಸೆಳೆದರೆ, ಇನ್ನು ಕೆಲವು ಚಿತ್ರಗಳು ಕಂಟೆಂಟ್ಗಳ ಮೂಲಕ ಗಮನ ಸೆಳೆಯುತ್ತವೆ. ಇದೀಗ ಈ ಸಾಲಿಗೆ ‘ಕುಬುಸ ‘ ಕೂಡ ಸೇರಿಕೊಂಡಿದೆ. ಈ ಚಿತ್ರದ ಟ್ರೈಲರ್ ಬಿಡುಗಡೆ ಕಾರ್ಯಕ್ರಮವನ್ನು ಬೆಂಗಳೂರಿನ ವಸಂತ ನಗರದಲ್ಲಿ ಹಮ್ಮಿಕೊಳ್ಳಲಾಗಿತ್ತು. ನಿರ್ಮಾಪಕಿ ಶ್ರೀಮತಿ ಅಶ್ವಿನಿ ಪುನೀತ್ ರಾಜಕುಮಾರ್ ‘ಕುಬುಸ ‘ ಟ್ರೈಲರ್ ಅನಾವರಣ ಮಾಡಿ ಇಡೀ ತಂಡಕ್ಕೆ ಶುಭ ಹಾರೈಸಿದ್ದಾರೆ.
ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ವೇದಿಕೆಯ ಮೇಲೆ ಕೇಂದ್ರ ಬಿಂದುವಾಗಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಮಾತಾ ಶ್ರೀ ಡಾಕ್ಟರ್ ಮಂಜಮ್ಮ ಜೋಗತಿರವರು ಮುಖ್ಯ ಅತಿಥಿಯಾಗಿ ಹೊಸಪೇಟೆಯ ಸಮಾಜ ಸೇವಕರಾದ ತಾಯಮ್ಮ ಶಕ್ತಿ ಸಂಘದ ಅಧ್ಯಕ್ಷರಾದ ಶ್ರೀಮತಿ ಕವಿತಾ ಈಶ್ವರ್ ಸಿಂಗ್ ಭಾಗಿಯಾಗಿದ್ದರು. ಈ ವೇಳೆ ಮಾತನಾಡಿದ ಅವರು, ಒಬ್ಬ ಮಹಿಳೆ ನಿರ್ಮಾಪಕರಾಗಿ ಉತ್ತಮ ಚಲನಚಿತ್ರವನ್ನು ಕಷ್ಟಪಟ್ಟು ನಿರ್ಮಿಸಿದ್ದಾರೆ. ನಾನು ಯಾವತ್ತಿಗೂ ಕಲಾವಿದರಿಗೆ ಬೆಂಬಲವಾಗಿ ಇರುತ್ತೇನೆ ಹಾಗೂ ಅಪ್ಪು ಅಭಿಮಾನಿಗಳಾದ ಯೂತ್ ಐಕಾನ್ ಎಂದು ಹೆಸರು ಪಡೆದಿರುವ ಸಮಾಜ ಸೇವಕರಾದ ಶ್ರೀಯುತ ಸಿದ್ದಾರ್ಥ್ ಸಿಂಗ್ರವರು ಅಪ್ಪು ಆದರ್ಶಗಳನ್ನು ಪಾಲಿಸಿಕೊಂಡು ಬರುವಂತೆ ಹಾಗೂ ಕಲಾವಿದರನ್ನು ಪ್ರೋತ್ಸಾಹಿಸುತ್ತಾ ಈ ಚಲನಚಿತ್ರ ಯಶಸ್ವಿಯಾಗಲೆಂದು ಹಾರೈಸಿದರು.
ಟ್ರೈಲರ್ ರಿಲೀಸ್ ಬಳಿಕ ಚಿತ್ರದ ಬಗ್ಗೆ ಅಭಿಪ್ರಾಯ ಹಂಚಿಕೊಂಡ ನಟರಾಜ್ ಎಸ್ ಭಟ್ ಅವರು, ಇಂತಹ ಚಲನಚಿತ್ರ ನಿರ್ಮಾಣ ಮಾಡಲು ವಿ ಶೋಭಾ ಆದಿ ನಾರಾಯಣರವರಂತಹ ಒಳ್ಳೆಯ ವ್ಯಕ್ತಿ ಮತ್ತೆ ಸಿಗುವುದಿಲ್ಲ. ಈ ರೀತಿ ಚಿತ್ರಗಳು ಗೆಲ್ಲಬೇಕು ಈ ಸಿನಿಮಾ ಗೆದ್ದಾಗ ನಿರ್ಮಾಪಕರು ಮತ್ತೆ ಸಿನಿಮಾ ಮಾಡಲು ಮುಂದಾಗುತ್ತಾರೆ. ಇಡೀ ತಂಡ ಈ ಚಿತ್ರಕ್ಕಾಗಿ ಬಹಳಷ್ಟು ಕೆಲಸ ಮಾಡಿದ್ದಾರೆ .ಚಿತ್ರ ತುಂಬಾ ಚೆನ್ನಾಗಿ ಮೂಡಿಬಂದಿದೆ ನಿಮ್ಮ ಸಹಕಾರ ಕುಬುಸ ಸಿನಿಮಾ ಮೇಲೆ ಇರಲಿ ಎಂದರು.
ಸಿನಿಮಾದ ಬಗ್ಗೆ ಮಾಹಿತಿ ಹಂಚಿಕೊಂಡ ನಿರ್ದೇಶಕ ರಘುರಾಮ ಚರಣ್, ಪುಟ್ಟ ಕನಸು ದೊಡ್ಡದಾಗುತ್ತಾ ಬಂತು, ಅದು ಈಗ ಸಿನಿಮಾ ರೂಪತಾಳಿದೆ. ಇದು ಯಾವ ಜಾನರ್ ಎಂದು ಹೇಳಲು ಆಗುವುದಿಲ್ಲ. ಕಥೆ ಬರೆಯುವಾಗ ಏನು ವಿಜ್ವಲ್ ಬಂತು ಅದನ್ನು ಶೂಟ್ ಮಾಡಿದ್ದೇವೆ. 1960ರ ಕಾಲಘಟ್ಟದಲ್ಲಿ ಬರುವ ಕಥೆ ಇದು. ಸಿನಿಮಾದಲ್ಲಿ ನಾಲ್ಕು ಹಾಡುಗಳಿವೆ ಎಂದು ಮಾಹಿತಿ ನೀಡಿದರು.
ಚಿತ್ರದ ಬಗ್ಗೆ ಮಾತನಾಡಿದ ವಿ.ಶೋಭಾ ಆದಿ ನಾರಾಯಣ ಅವರು, ಕುಬುಸ ಚಲನಚಿತ್ರದಲ್ಲಿ ಹಳ್ಳಿ ಸೊಗಡಿನ ಚಿತ್ರಕಥೆಯಾಗಿದ್ದು ಈ ಚಿತ್ರದಲ್ಲಿ ನನಗೆ ತುಂಬಾ ಅನುಭವವಾಗಿದ್ದು, ಜನರ ಮನಸ್ಸಿನಲ್ಲಿ ಉಳಿಯುವಂತಹ ಸಿನಿಮಾಗಳನ್ನು ಮುಂದಿನ ದಿನಗಳಲ್ಲಿ ನಿರ್ಮಾಣ ಮಾಡುತ್ತೇನೆ. ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು ಇದೇ ತಿಂಗಳು ಜುಲೈ 26ರಂದು ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಪ್ರೇಕ್ಷಕರು ಸಿನಿಮಾ ನೋಡಿ ಪ್ರೋತ್ಸಾಹಿಸಬೇಕು.
ಕಾರ್ಯಕ್ರಮದಲ್ಲಿ ಹೋಂ ಆಫ್ ಹೋಪ್ ಸಂಸ್ಥಾಪಕರಾದ ಆಟೋರಾಜ್ ರವರು ಡ್ಯಾನ್ಸ್ ಹರಿಪ್ರಸಾದ್, ಕೃಷ್ಣ ರಿತ್ತಿ ,ಯೂಸುಫ್ ,ಇಮ್ತಿಯಾಜ್, ರಾಜು ಉಪ್ಪರ್, ನಂದೀಶ ಇನ್ನು ಇತರರು ಉಪಸ್ಥಿತರಿದ್ದರು.
ಜನಪ್ರಿಯ ಲೇಖಕ ಕುಮ್ಮಿ ವೀರಭದ್ರಪ್ಪ ಅವರ ಕಥೆ ಆಧಾರಿಸಿದ ಸಿನಿಮಾ ‘ಕುಬುಸ’ ಬಿಡುಗಡೆಗೆ ಸಜ್ಜಾಗಿದೆ. ರಘುರಾಮ್ ಚರಣ್ ಹೂವಿನಹಡಗಲಿ ಈ ಚಿತ್ರ ನಿರ್ದೇಶಿಸಿದ್ದಾರೆ. ಆರ್ ಚಂದ್ರು ಅವರ ಗರಡಿಯಲ್ಲಿ ಪಳಗಿರುವ ರಘು ರಾಮ್ ಚರಣ್ ಹೂವಿನಹಡಗಲಿ ಇವರ ನಿರ್ದೇಶನದ ಮೊದಲ ಸಿನಿಮಾ.
ತಾಯಿ – ಮಗನ ಸೆಂಟಿಮೆಂಟ್ ಸಿನಿಮಾವೇ ಕುಬುಸ. ಈ ಸಿನಿಮಾದಲ್ಲಿ ರಾಮ ರಾಮ ರೇ ಖ್ಯಾತಿಯ ನಟರಾಜ್ ಎಸ್ ಭಟ್, ಮಂಜು ಆರ್ಯ ಮೈಸೂರ್, ರಂಗಭೂಮಿ ಕಲಾವಿದೆ ಹನುಮಕ್ಕ, ಮರಿಯಮ್ಮನಹಳ್ಳಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಜೋಗತಿ ಮಂಜಮ್ಮ ಕುಬುಸ ಸಿನಿಮಾದ ಪ್ರಮುಖ ಆಕರ್ಷಣೆ.
ಇನ್ನು ನಟರಾಜ್ ಎಸ್ ಭಟ್ , ಚಿತ್ರದಲ್ಲಿ ಎರಡು ಸೇಡ್ನಲ್ಲಿ ನಡೆಸಿದ್ದು, ಎರಡನೇ ನಾಯಕನಾಗಿ ಒಂದು ಸರಳ ಪ್ರೇಮಕಥೆ, ಪಟಾಕಿ, ಖ್ಯಾತಿಯ ನಾಯಕ ನಟನಾಗಿ ಮೈಸೂರಿನ ಮಂಜು ಆರ್ಯ, ಅನಿಕಾ ರಮ್ಯ, ಮಹಾಲಕ್ಷ್ಮಿ ಕೂಡ ಚಿತ್ರದ ಲೀಡ್ ರೋಲ್ ನಲ್ಲಿ ಬಣ್ಣ ಹಚ್ಚಿದ್ದಾರೆ. ಈ ಸಿನಿಮಾದಲ್ಲಿ ದೊಡ್ಡ ಪಾತ್ರ ಒಂದರಲ್ಲಿ ಅವರು ನಟಿಸಿದ್ದಾರೆ. ಕರ್ನಾಟಕ ರಾಜ್ಯ ಯುವ ಪ್ರಶಸ್ತಿ ಪುರಸ್ಕೃತರು ಹಾಗೂ ಮಕ್ಕಳ ಕಲ್ಯಾಣ ರಾಜ್ಯ ಪ್ರಶಸ್ತಿ ಪುರಸ್ಕೃತರು ಕಲ್ಯಾಣ ಕರ್ನಾಟಕ ಕಲಾವಿದರ ಒಕ್ಕೂಟದ ಅಧ್ಯಕ್ಷರಾದ ಶ್ರೀಯುತ ಗುಂಡಿ ರಮೇಶ್ ರವರು ಹಾಗೂ ಇವರ ಪತ್ನಿ ಗುಂಡಿ ಭಾರತಿ ವಿಶೇಷ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಉಳಿದಂತೆ ಹೊನ್ನೂರ್ ಸ್ವಾಮಿ, ಹುಲಿಗೆಪ್ಪ ಕಟ್ಟಿಮನಿ. ಟಿಬಿ ಡ್ಯಾಮ್ ಕನ್ನಡ ಕಲಾ ಸಂಘದ ಕಲಾವಿದರು ನಟಿಸಿದ್ದಾರೆ.
ಕುಬುಸ ಸಿನಿಮಾದ ಮೂಲ ಕತೆಯಲ್ಲಿ ಇರುವಂತೆ ಬಳ್ಳಾರಿಯ ಭಾಷಾ ಸೊಗಡನ್ನು ಕಾಣಬಹುದು. ಇದು ಮ್ಯೂಸಿಕಲ್ ಸಿನಿಮಾ ಕೂಡ ಆಗಿದ್ದು ,ಸನ್ನಿವೇಶಕ್ಕೆ ತಕ್ಕ ಹಾಗೆ ನಾಲ್ಕು ಹಾಡುಗಳಿವೆ. ಪ್ರದೀಪ್ ಚಂದ್ರರವರ ಸಂಗೀತ ಸಂಯೋಜನೆ ಚಿತ್ರಕಿದ್ದು, ಅರ್ಜುನ್ ಕಿಟ್ಟು ಸಂಕಲನ, ಚೇತನ್ ಶರ್ಮ ಎ ಕ್ಯಾಮರಾ, ಕುಬುಸ ಸಿನಿಮಾದ ಎಲ್ಲ ತಾಂತ್ರಿಕ ವರ್ಗದವರು, ಶಿವಮೂರ್ತಿ ದೋಣಿಮಲೆ ಸಹ ನಿರ್ದೇಶನ ಚಿತ್ರಕ್ಕಿದೆ. ಕುಬುಸ ಸಿನಿಮಾಗೆ ಶ್ರೀಮತಿ ವಿ ಶೋಭಾ ಆದಿನಾರಾಯಣರವರ ಚೊಚ್ಚಲ ನಿರ್ಮಾಣದ ಚಲನಚಿತ್ರವಾಗಿದೆ. ವಿ ಶೋಭಾ ಸಿನಿಮಾಸ್ ಬ್ಯಾನರ್ನಡಿ ಕುಬುಸ ಚಿತ್ರವನ್ನು ಅವರು ನಿರ್ಮಿಸಿದ್ದಾರೆ.
ಇದನ್ನೂ ಓದಿ : ನನ್ನ ವರ್ಚಸ್ಸು ಸಹಿಸಿಕೊಳ್ಳಲು ಬಿಜೆಪಿ ನಾಯಕರಿಗೆ ಆಗ್ತಿಲ್ಲ – ವಿಧಾನಪರಿಷತ್ನಲ್ಲಿ ವಿಪಕ್ಷಗಳಿಗೆ ಸಿಎಂ ಸಿದ್ದು ತಿರುಗೇಟು