Download Our App

Follow us

Home » ಅಪರಾಧ » ಬೆಂಗಳೂರು : ಖೋ-ಖೋ ಫೀಲ್ಡ್​ನಲ್ಲೇ ಡ್ರ್ಯಾಗರ್​​​​​ ಹಿಡಿದು ಅಟ್ಟಹಾಸ ಮೆರೆದ ಪುಂಡರ ಗ್ಯಾಂಗ್ – FIR ದಾಖಲು..!

ಬೆಂಗಳೂರು : ಖೋ-ಖೋ ಫೀಲ್ಡ್​ನಲ್ಲೇ ಡ್ರ್ಯಾಗರ್​​​​​ ಹಿಡಿದು ಅಟ್ಟಹಾಸ ಮೆರೆದ ಪುಂಡರ ಗ್ಯಾಂಗ್ – FIR ದಾಖಲು..!

ಬೆಂಗಳೂರು : ಖೋ-ಖೋ ಫೀಲ್ಡ್​ನಲ್ಲೇ ಪುಡಿರೌಡಿಗಳು ಡ್ರ್ಯಾಗರ್​​​​​ ಹಿಡಿದು ಅಟ್ಟಹಾಸ ಮೆರೆದಿರುವ ಘಟನೆ ಬೆಂಗಳೂರಿನ ಕೊತ್ತನೂರು ಸ್ಕೂಲ್​​ ಬಳಿ ನಡೆದಿದೆ. ಪುಂಡರ ಗ್ಯಾಂಗ್ ಡ್ರ್ಯಾಗರ್, ವಿಕೆಟ್ ಕೈಯಲ್ಲಿಡಿದು ​​​ಬೆದರಿಸಿದೆ.

ಬುದ್ದಿವಾದ ಹೇಳಿದ್ದಕ್ಕೆ ವ್ಯಕ್ತಿ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ. ಟೂರ್ನಮೆಂಟ್​ಗೆ ಬಂದಿದ್ದ ಬೇರೆ ಊರಿನ ಯುವಕರು ಶಾಲಾ ಮಕ್ಕಳ ಮುಂದೆಯೇ ಮಾರಕಾಸ್ತ್ರ ಹಿಡಿದು ದಾಂಧಲೆ ನಡೆಸಿದ್ದಾರೆ. ಈ ಘಟನೆ ಕೊತ್ತನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಖೋ-ಖೋ ಆಟದ ವೇಳೆ ಪುಂಡರು ಗಲಾಟೆ ಮಾಡ್ತಿದ್ದರು. ಹಾಗಾಗಿ​​ ಸುಮ್ಮನಿರುವಂತೆ ಸೂಚಿಸಿದ್ದ ಅಂಪೈರ್ ಸುಲೇಮಾನ್ ಎಂಬುವವರಿಗೆ ಪುಂಡರ ಗ್ಯಾಂಗ್ ಮಾರಕಾಸ್ತ್ರದಿಂದ ಹಲ್ಲೆ ನಡೆಸಿದೆ.
ಹಲ್ಲೆ ಮಾಡಿ ಮೊಬೈಲ್​​ ಒಡೆದು ಹಾಕಿ ಪುಂಡರು ದಾಂಧಲೆ ನಡೆಸಿರೋದು ನಿನ್ನೆ ಸಂಜೆ 4.30ರ ಸುಮಾರಿಗೆ ಸಂಭವಿಸಿದೆ. ನಾಲ್ವರು ಪುಂಡರ ಗ್ಯಾಂಗ್​​​ ಝೆನ್​​ ಕಾರ್​​ನಲ್ಲಿ ಬಂದಿದ್ದರು. ಸುದೀಪ್​​​, ಪವನ್​ ಮತ್ತು ಗ್ಯಾಂಗ್​​ನಿಂದ ಹಲ್ಲೆ ನಡೆದಿದ್ದು, ಸುಲೆಮಾನ್​ ದೂರು ಆಧರಿಸಿ ಕೊತ್ತನೂರು ಠಾಣೆಯಲ್ಲಿ FIR ದಾಖಲಾಗಿದೆ.

ಇದನ್ನೂ ಓದಿ : GT ಮಾಲ್​​​​ ಹೆಸರಿಗೆ ಮಸಿ ಬಳಿಯೋ ಪ್ರಯತ್ನ ನಡೀತಾ? ಫ್ಯಾಕ್ಟ್​ಚೆಕ್​ನಲ್ಲಿ ಬಯಲಾಯ್ತು ಪಂಚೆ ರಹಸ್ಯ..!

Leave a Comment

DG Ad

RELATED LATEST NEWS

Top Headlines

ರೀಲ್ಸ್​​ಗಾಗಿ ಬಿಳಿ ಬಟ್ಟೆ ಹೊದ್ದು, ಮೂಗಿನೊಳಗೆ ಹತ್ತಿ ಇಟ್ಟು ಶವದಂತೆ ರಸ್ತೆಯಲ್ಲಿ ಮಲಗಿದ್ದ ವ್ಯಕ್ತಿ – ವಿಡಿಯೋ ವೈರಲ್..!

ಯುವಜನತೆ ರೀಲ್ಸ್​ ಹುಚ್ಚಿನಿಂದ ಅದೇನೋ ಸಾಹಸಗಳನ್ನು ಮಾಡಲು ಹೋಗಿ ಪ್ರಾಣವನ್ನೇ ಕಳೆದುಕೊಂಡಿರೋದನ್ನು ನೋಡಿದ್ದೇವೆ. ಆದರೆ ಇಲ್ಲೊಬ್ಬ ಯುವಕ ರೀಲ್ಸ್​​ಗಾಗಿ ಬಿಳಿಯ ಬಟ್ಟೆ ಹೊದ್ದು, ಮೂಗಿನೊಳಗೆ ಹತ್ತಿ ಇಟ್ಟು

Live Cricket

Add Your Heading Text Here