Download Our App

Follow us

Home » ಮೆಟ್ರೋ » GT ಮಾಲ್​​​​ ಹೆಸರಿಗೆ ಮಸಿ ಬಳಿಯೋ ಪ್ರಯತ್ನ ನಡೀತಾ? ಫ್ಯಾಕ್ಟ್​ಚೆಕ್​ನಲ್ಲಿ ಬಯಲಾಯ್ತು ಪಂಚೆ ರಹಸ್ಯ..!

GT ಮಾಲ್​​​​ ಹೆಸರಿಗೆ ಮಸಿ ಬಳಿಯೋ ಪ್ರಯತ್ನ ನಡೀತಾ? ಫ್ಯಾಕ್ಟ್​ಚೆಕ್​ನಲ್ಲಿ ಬಯಲಾಯ್ತು ಪಂಚೆ ರಹಸ್ಯ..!

ಬೆಂಗಳೂರು : ಬೆಂಗಳೂರಿನ ಮಾಗಡಿ ರಸ್ತೆಯಲ್ಲಿರುವ ಜಿಟಿ ಮಾಲ್​ನಲ್ಲಿ ಪಂಚೆ ಧರಿಸಿದ್ದಾರೆ ಎಂಬ ಒಂದೇ ಒಂದು ಕಾರಣಕ್ಕೆೆ ಫಕೀರಪ್ಪ ಎನ್ನುವವರಿಗೆ ಮಾಲ್ ಒಳಗಡೆ ಚಲನಚಿತ್ರ ವೀಕ್ಷಣೆಗೆ ಮಾಲ್ ಸಿಬ್ಬಂದಿ ಪ್ರವೇಶ ನಿರಾಕರಿಸಿದ್ದರು. ಈ ಘಟನೆಗೆ ಭಾರಿ ವಿರೋಧ ವ್ಯಕ್ತವಾದ ಹಿನ್ನಲೆಯಲ್ಲಿ ಬಂದ್ ಮಾಡಲಾಗಿದ್ದ, ಜಿಟಿ ಮಾಲ್ ಮತ್ತೆ ಓಪನ್ ಆಗಿದೆ. ಆದರೆ ಇದೀಗ CCTV ಕ್ಯಾಮೆರಾದಲ್ಲಿ ಪಂಚೆ ರಹಸ್ಯ ಸೆರೆಯಾಗಿದ್ದು, ಜಿಟಿ ಮಾಲ್​ ವಿರುದ್ಧ ನಡೆದ ಪಿತೂರಿಯನ್ನು BTV ಬಯಲು ಮಾಡಿದೆ.

ಐದು ದಿನಗಳ ಹಿಂದೆ ಫಕೀರಪ್ಪ PVRನಲ್ಲಿ ಸಿನಿಮಾ ನೋಡಲು ಬಂದಿದ್ರು. ಫಕೀರಪ್ಪ ಬಂದಾಗ ಪರಿಶೀಲನೆಗೆ ಅಂತಾ ಸಿಬ್ಬಂದಿ ತಡೆದು ನಿಲ್ಲಿಸಿದ್ದರು. ಈ ವೇಳೆ ಕೋಪಗೊಂಡ ಫಕೀರಪ್ಪ ಅವರ ಪುತ್ರ ಪ್ರಶ್ನೆ ಮಾಡಿದ್ದನು. ಆನಂತರ ಮಾಲ್​ ಒಳಗೆ ಬಿಟ್ಟಿಲ್ಲ ಅಂತಾ ಎಲ್ಲೆಡೆ ವಿಡಿಯೋ ವೈರಲ್​​ ಆಯ್ತು. ಈ ಮೂಲಕ GT ಮಾಲ್​​ ರೈತ ವಿರೋಧಿ ಎಂದು ಬಿಂಬಿಸಲು ಪ್ರಯತ್ನಿಸಿದರು.

ಆದರೆ ಫಕೀರಪ್ಪರನ್ನು ಮಾಲ್​​ನವರು ಪರಿಶೀಲನೆ ಮಾಡಿದ್ದೇಕೆ ಎಂಬುದು ಇದೀಗ ಬಯಲಾಗಿದೆ. ಕೆಲ ದಿನಗಳ ಹಿಂದೆ ಪಂಚೆ ಧರಿಸಿದ್ದ ವ್ಯಕ್ತಿ ಮಾಲ್​ಗೆ ಬಂದಿದ್ರು. ಗ್ರೌಂಡ್​ಫ್ಲೋರ್​​ನಲ್ಲಿ ಈವೆಂಟ್​ ನಡೀತಿದ್ರೆ ಆ ವ್ಯಕ್ತಿ ಫಸ್ಟ್ ಫ್ಲೋರ್​ಗೆ ಹೋಗಿದ್ರು. ಒಳ ಉಡುಪು ಹಾಕ್ದೆ ವ್ಯಕ್ತಿ ನಿಂತಿದ್ದು ನೋಡಿ ಮಹಿಳೆಯೊಬ್ರು ಈ ಸಂಬಂಧ  ದೂರು ನೀಡಿದ್ದರು. ಕೂಡ್ಲೇ ಮಾಲ್​​ ಮ್ಯಾನೇಜರ್​ ಆ ವ್ಯಕ್ತಿಯನ್ನು ಹೊರಗೆ ಕಳಿಸಿದ್ದರು.

ಅವತ್ತಿನಿಂದ ಪಂಚೆ ಧರಿಸಿ ಯಾರೇ ಬಂದ್ರೂ ಸಿಬ್ಬಂದಿ ವಿಚಾರಿಸುತ್ತಿದ್ದರು. ಆದರೆ ಮಹಿಳೆಯರ ದೂರಿನ ಹಿನ್ನೆಲೆಯಲ್ಲಿ GT ಮಾಲ್​​ ಮುನ್ನೆಚ್ಚರಿಕೆ ವಹಿಸಿದ್ದೇ ತಪ್ಪಾ. GT ಮಾಲ್​​​​ ಹೆಸರಿಗೆ ಮಸಿ ಬಳಿಯೋ ಪ್ರಯತ್ನ ನಡೀತಾ ಎಂಬ ಪ್ರಶ್ನೆಹುಟ್ಟಿಕೊಂಡಿದೆ.

ಇದನ್ನೂ ಓದಿ : ಡಿಸಿಎಂ ಡಿ.ಕೆ ಶಿವಕುಮಾರ್​ನ್ನು ಭೇಟಿಯಾದ ದರ್ಶನ್​​ ಪತ್ನಿ ವಿಜಯಲಕ್ಷ್ಮಿ..!

Leave a Comment

DG Ad

RELATED LATEST NEWS

Top Headlines

ಮಂಗಳೂರಲ್ಲಿ ಕಿಡಿಗೇಡಿಗಳಿಂದ ಪ್ರಾರ್ಥನಾ ಸ್ಥಳದ ಮೇಲೆ ಕಲ್ಲೆಸೆತ – ಕರಾವಳಿಯ ಅಲ್ಲಲ್ಲಿ ಪರಿಸ್ಥಿತಿ ಉದ್ವಿಗ್ನ..!

ಮಂಗಳೂರು : ಮಂಗಳೂರಿನ ಹೊರವಲಯದ ಸುರತ್ಕಲ್ ಬಳಿಯ ಕಾಟಿಪಳ್ಳದಲ್ಲಿ ನಿನ್ನೆ ರಾತ್ರಿ ಪ್ರಾರ್ಥನಾ ಸ್ಥಳದ ಮೇಲೆ ಕಿಡಿಗೇಡಿಗಳು ಕಲ್ಲು ತೂರಾಟ ಮಾಡಿದ ಘಟನೆ ನಡೆದಿದೆ. ಕಾಟಿಪಳ್ಳ 3ನೇ

Live Cricket

Add Your Heading Text Here