ಬೆಂಗಳೂರು : ರಾಜ್ಯ ನ್ಯಾಯಾಂಗ ವ್ಯವಸ್ಥೆಯಲ್ಲಿ ಮಹತ್ವದ ಬೆಳವಣಿಗೆಯಾಗಿದ್ದು, ಸಾರ್ವಜನಿಕ ಹಿತದೃಷ್ಟಿ ಹಾಗೂ ಆಡಳಿತಾತ್ಮಕ ಕಾರಣಗಳಿಗಾಗಿ ಕರ್ನಾಟಕ ಹೈಕೋರ್ಟ್ ಒಟ್ಟು 368 ನ್ಯಾಯಾಧೀಶರನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.

ವಿನಯ್ ಕುಲಕರ್ಣಿ, ಪ್ರಜ್ವಲ್ ರೇವಣ್ಣ ಸೇರಿ ಹಲವು ಹೈಪ್ರೊಫೈಲ್ ಪ್ರಕರಣಗಳಲ್ಲಿ ದಿಟ್ಟ ತೀರ್ಪು ನೀಡಿದ್ದ ಸಂತೋಷ್ ಗಜಾನನ ಭಟ್ ಅವರ ವರ್ಗಾವಣೆ ಈಗ ರಾಜ್ಯಾದ್ಯಂತ ಚರ್ಚೆಗೆ ಕಾರಣವಾಗಿದೆ. 114 ಜಿಲ್ಲಾ ನ್ಯಾಯಾಧೀಶರು, 115 ಹಿರಿಯ ಸಿವಿಲ್ ನ್ಯಾಧೀಶರು, 139 ಸಿವಿಲ್ ನ್ಯಾಯಾಧೀಶರು ಸೇರಿದಂತೆ ಒಟ್ಟು 368 ನ್ಯಾಯಾಧೀಶರನ್ನು ವರ್ಗಾವಣೆ ಮಾಡಲಾಗಿದೆ. ಇನ್ನೂ ಈ ಎಲ್ಲಾ ವರ್ಗಾವಣೆಗಳು ಜೂನ್ 1 ರಿಂದ ಜಾರಿಗೆ ಬರಲಿವೆ.
ಸಂತೋಷ್ ಗಜಾನನ ಭಟ್ ಅವರು 81ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸತ್ರ ನ್ಯಾಯಾಧೀಶರಾಗಿದ್ದು, ಅವರು ಅತ್ಯಾಚಾರ ದೌರ್ಜನ್ಯ ಪ್ರಕರಣದಲ್ಲಿ ಪ್ರಜ್ವಲ್ ರೇವಣ್ಣಗೆ ಜೀವಾವಧಿ ಶಿಕ್ಷೆ ವಿಧಿಸಿದ್ದಾರೆ. ಅಷ್ಟೇ ಅಲ್ಲದೆ ಕೊಲೆ ಕೇಸ್‌ನಲ್ಲಿ ವಿನಯ್ ಕುಲಕರ್ಣಿ ದೋಷಿ ಎಂದು ಸಂತೋಷ್ ಗಜಾನನ ಭಟ್ ಅವರು ತೀರ್ಪು ನೀಡಿದ್ದಾರೆ. ಇದೀಗ ಅವರನ್ನು ವರ್ಗಾವಣೆ ಮಾಡಲಾಗಿದ್ದು, ಕರ್ನಾಟಕ ಮಧ್ಯಸ್ಥಿಕೆ ಕೇಂದ್ರ ಬೆಂಗಳೂರಿನ ನಿರ್ದೇಶಕರಾಗಿ ನೇಮಿಸಲಾಗಿದೆ.

ಇನ್ನು ಹೈಕೋರ್ಟ್‌ನ ಹಾಲಿ ರಿಜಿಸ್ಟ್ರಾರ್ ಜನರಲ್ ಆಗಿದ್ದ ಕೆ.ಎಸ್. ಭರತ್ ಕುಮಾರ್ ಅವರನ್ನು ಬೆಂಗಳೂರಿನ ಪ್ರಧಾನ ಸಿಟಿ ಸಿವಿಲ್ ನ್ಯಾಯಾಧೀಶರಾಗಿ ವರ್ಗಾಯಿಸಲಾಗಿದ್ದು, ಅವರ ಜಾಗಕ್ಕೆ ಎಂ. ಚಂದ್ರಶೇಖರ್ ರೆಡ್ಡಿ ಅವರನ್ನು ನೂತನ ರಿಜಿಸ್ಟ್ರಾರ್ ಜನರಲ್ ಆಗಿ ನೇಮಿಸಲು ಪ್ರಸ್ತಾಪಿಸಲಾಗಿದೆ. ಇದರೊಂದಿಗೆ ಹೈಕೋರ್ಟ್‌ನ ವಿಜಿಲೆನ್ಸ್, ಜ್ಯುಡಿಷಿಯಲ್ ಮುಂತಾದ ವಿಭಾಗಗಳ ರಿಜಿಸ್ಟ್ರಾರ್‌ಗಳನ್ನು ಸಹ ಬದಲಾಯಿಸಲಾಗಿದೆ.
| ನ್ಯಾಯಾಧೀಶರ ಹೆಸರು | ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಸ್ಥಳ | ವರ್ಗಾವಣೆಗೊಂಡ ಸ್ಥಳ |
| ಮಾರುತಿ ಬಗಡೆ | ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು, ರಾಯಚೂರು | ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು, ಕೊಡಗು-ಮಡಿಕೇರಿ |
| ಕೆ.ಎಸ್. ಭರತ್ ಕುಮಾರ್ | ಒಒಡಿ (OOD), ರಿಜಿಸ್ಟ್ರಾರ್ ಜನರಲ್, ಹೈಕೋರ್ಟ್, ಬೆಂಗಳೂರು | ಪ್ರಧಾನ ಸಿಟಿ ಸಿವಿಲ್ ಮತ್ತು ಸತ್ರ ನ್ಯಾಯಾಧೀಶರು, ಬೆಂಗಳೂರು ನಗರ |
| ನೇರಳೆ ವೀರಭದ್ರಯ್ಯ ವಿಜಯ್ | ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು, ಬಾಗಲಕೋಟೆ | ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು, ಧಾರವಾಡ |
| ರವೀಂದ್ರ ಹೆಗಡೆ | ಒಒಡಿ, ರಿಜಿಸ್ಟ್ರಾರ್ (ವಿಜಿಲೆನ್ಸ್), ಹೈಕೋರ್ಟ್, ಬೆಂಗಳೂರು | ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು, ಚಿಕ್ಕಮಗಳೂರು |
| ಸರಸ್ವತಿ ವಿಷ್ಣು ಕೋಸಂದರ್ | ಒಒಡಿ, ರಿಜಿಸ್ಟ್ರಾರ್ (ಜ್ಯುಡಿಷಿಯಲ್), ಹೈಕೋರ್ಟ್, ಬೆಂಗಳೂರು | ನಿರ್ದೇಶಕರು, ಕರ್ನಾಟಕ ನ್ಯಾಯಾಂಗ ಅಕಾಡೆಮಿ, ಬೆಂಗಳೂರು |
| ಎಂ. ಚಂದ್ರಶೇಖರ್ ರೆಡ್ಡಿ | ಪ್ರಧಾನ ಸಿಟಿ ಸಿವಿಲ್ ಮತ್ತು ಸತ್ರ ನ್ಯಾಯಾಧೀಶರು, ಬೆಂಗಳೂರು ನಗರ | ಒಒಡಿ, ರಿಜಿಸ್ಟ್ರಾರ್ ಜನರಲ್, ಹೈಕೋರ್ಟ್, ಬೆಂಗಳೂರು |
| ಹೆಚ್.ಆರ್. ರಾಧಾ | ಒಒಡಿ, ನಿರ್ದೇಶಕರು, ಕರ್ನಾಟಕ ನ್ಯಾಯಾಂಗ ಅಕಾಡೆಮಿ, ಬೆಂಗಳೂರು | ರಿಜಿಸ್ಟ್ರಾರ್ (ವಿಜಿಲೆನ್ಸ್ ಮತ್ತು ಮೂಲಸೌಕರ್ಯ), ಹೈಕೋರ್ಟ್, ಬೆಂಗಳೂರು |
| ರಾನ್ ವಾಸುದೇವ್ | ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು, ಚಿತ್ರದುರ್ಗ | ಒಒಡಿ, ರಿಜಿಸ್ಟ್ರಾರ್ (ಜ್ಯುಡಿಷಿಯಲ್), ಹೈಕೋರ್ಟ್, ಬೆಂಗಳೂರು |
| ಮಹಾವರ್ಕರ್ ಗುಲ್ಜಾರ್‌ಲಾಲ್ | 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು, ರಾಯಚೂರು | ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು, ಚಿತ್ರದುರ್ಗ |
| ಎಸ್. ಗೋಪಾಲಪ್ಪ | ಒಒಡಿ, ನಿರ್ದೇಶಕರು, ಕರ್ನಾಟಕ ಮಧ್ಯಸ್ಥಿಕೆ ಕೇಂದ್ರ, ಬೆಂಗಳೂರು | ಸದಸ್ಯರು, ಕರ್ನಾಟಕ ಮೇಲ್ಮನವಿ ನ್ಯಾಯಮಂಡಳಿ (KAT), ಬೆಂಗಳೂರು |
| ಸಂತೋಷ್ ಗಜಾನನ ಭಟ್ | 81ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸತ್ರ ನ್ಯಾಯಾಧೀಶರು, ಬೆಂಗಳೂರು | ಒಒಡಿ, ನಿರ್ದೇಶಕರು, ಕರ್ನಾಟಕ ಮಧ್ಯಸ್ಥಿಕೆ ಕೇಂದ್ರ, ಬೆಂಗಳೂರು |
| ಸುಧೀಂದ್ರನಾಥ್ ಎಸ್. | ಪ್ರಧಾನ ನ್ಯಾಯಾಧೀಶರು, ಕೌಟುಂಬಿಕ ನ್ಯಾಯಾಲಯ, ಬೆಂಗಳೂರು | ಒಒಡಿ, ಹೆಚ್ಚುವರಿ ರಿಜಿಸ್ಟ್ರಾರ್ ಜನರಲ್, ಹೈಕೋರ್ಟ್ ಪೀಠ, ಧಾರವಾಡ |
| ಮಾಸ್ಟರ್ RKGMM ಮಹಾಸ್ವಾಮೀಜಿ | ಸದಸ್ಯರು, ಕರ್ನಾಟಕ ಮೇಲ್ಮನವಿ ನ್ಯಾಯಮಂಡಳಿ (KAT), ಬೆಂಗಳೂರು | ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು, ಬಾಗಲಕೋಟೆ |
| ವಿನೀತಾ ಪ್ರೇಮನಾಥ್ ಶೆಟ್ಟಿ | ಒಒಡಿ, ಲೀವ್ ರಿಸರ್ವ್, ಹೈಕೋರ್ಟ್, ಬೆಂಗಳೂರು | ಪ್ರಧಾನ ನ್ಯಾಯಾಧೀಶರು, ಕೌಟುಂಬಿಕ ನ್ಯಾಯಾಲಯ, ಬೆಂಗಳೂರು |
| ಕೆ.ಎಲ್. ಅಶೋಕ್ | ಒಒಡಿ, ಹೆಚ್ಚುವರಿ ಕಾರ್ಯದರ್ಶಿ, ಕಾನೂನು ಇಲಾಖೆ, ವಿಧಾನಸೌಧ | ಹಿರಿಯ ಅಧ್ಯಾಪಕರು, ಕರ್ನಾಟಕ ನ್ಯಾಯಾಂಗ ಅಕಾಡೆಮಿ, ಬೆಂಗಳೂರು |
| ಬಸಪ್ಪ ಬಾಲಪ್ಪ ಜಕಾತಿ | 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು, ರಾಯಚೂರು | ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು, ರಾಯಚೂರು |
| ಗೋಪಾಲ್ ಕೃಷ್ಣ ರೈ ಟಿ. | 25ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸತ್ರ ನ್ಯಾಯಾಧೀಶರು, ಬೆಂಗಳೂರು | ಒಒಡಿ, ಹೆಚ್ಚುವರಿ ಕಾರ್ಯದರ್ಶಿ, ಕಾನೂನು ಇಲಾಖೆ, ವಿಧಾನಸೌಧ, ಬೆಂಗಳೂರು |
| ಬಿ. ಪುಷ್ಪಾಂಜಲಿ | ಪ್ರಿಸೈಡಿಂಗ್ ಆಫೀಸರ್, 1ನೇ ಹೆಚ್ಚುವರಿ ಕೈಗಾರಿಕಾ ನ್ಯಾಯಮಂಡಳಿ | 19ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸತ್ರ ನ್ಯಾಯಾಧೀಶರು, ಬೆಂಗಳೂರು |
| ಹೆಚ್.ಎ. ಮೋಹನ್ | 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು, ವಿಜಯಪುರ | 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು, ಬಳ್ಳಾರಿ |
| ಲೋಕಪ್ಪ ಎನ್.ಆರ್. | ಒಒಡಿ, ಹೆಚ್ಚುವರಿ ರಿಜಿಸ್ಟ್ರಾರ್, ಕರ್ನಾಟಕ ಲೋಕಾಯುಕ್ತ, ಬೆಂಗಳೂರು | 30ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸತ್ರ ನ್ಯಾಯಾಧೀಶರು, ಬೆಂಗಳೂರು |
| ಆರ್.ವೈ. ಶಶಿಧರ | ಒಒಡಿ, ಹೆಚ್ಚುವರಿ ರಿಜಿಸ್ಟ್ರಾರ್, ಕರ್ನಾಟಕ ಲೋಕಾಯುಕ್ತ, ಬೆಂಗಳೂರು | 29ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸತ್ರ ನ್ಯಾಯಾಧೀಶರು, ಬೆಂಗಳೂರು |
| ಎಸ್.ಎ. ಹಿದಾಯತುಲ್ಲಾ ಶರೀಫ್ | 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು, ಹಾಸನ | 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು, ರಾಮನಗರ |
| ಮೊಹಮದ್ ಅಶ್ರಫ್ ಅರಿಸ್ | ಪ್ರಧಾನ ನ್ಯಾಯಾಧೀಶರು, ಕೌಟುಂಬಿಕ ನ್ಯಾಯಾಲಯ, ಹಾಸನ | 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು, ತುಮಕೂರು |
| ಶಿವಪ್ರಸಾದ್ ಕೆ.ಬಿ. | 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು, ಮಂಡ್ಯ | 81ನೇ ಹೆಚ್ಚುವರಿ ಸಿಟಿ ಸಿವಿಲ್ ನ್ಯಾಯಾಧೀಶರು (MP/MLA ವಿಶೇಷ ನ್ಯಾಯಾಲಯ), ಬೆಂಗಳೂರು |
| ಅಬ್ದುಲ್ ರಹಿಮಾನ್ ನಂದಗಡಿ | 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು, ವಿಜಯಪುರ | 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು, ವಿಜಯಪುರ |
ಇದನ್ನೂ ಓದಿ : ಗಾನ ವೇದಿಕೆಯಲ್ಲಿ ಪುಟ್ಟ ಗಾಯಕರ ವೈಭವ ‘ಸರಿಗಮಪ ಲಿಟಲ್ ಚಾಂಪ್ಸ್’ – ಇದೇ ಏ.18 ರಿಂದ ಜೀ ಕನ್ನಡದಲ್ಲಿ!









