SSLC ಪರೀಕ್ಷೆಯಲ್ಲಿ ಹಿಂದಿಗೆ ಗ್ರೇಡ್ ಬೇಡ, ಅಂಕ ಕೊಡಿ – ಹೈಕೋರ್ಟ್​ ಆದೇಶ!

ಬೆಂಗಳೂರು : ಪ್ರಸಕ್ತ ಸಾಲಿನಿಂದಲೇ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ (KSEAB) ನಡೆಸುವ SSLC ಪರೀಕ್ಷೆಯಲ್ಲಿ ಹಿಂದಿ ಸೇರಿದಂತೆ ತೃತೀಯ ಭಾಷೆ ವಿಷಯಗಳಿಗೆ ಗ್ರೇಡ್ ಬದಲಿಗೆ ಅಂಕಗಳನ್ನು ನೀಡುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶಿಸಿದೆ.

ಇದುವರೆಗೆ SSLCಯಲ್ಲಿ ಎಲ್ಲಾ ಭಾಷೆಗಳಿಗೆ ಅಂಕ ನೀಡಲಾಗುತ್ತಿತ್ತು. ಆದರೆ ರಾಜ್ಯ ಸರ್ಕಾರ ಅಂಕದ ಬದಲಿಗೆ ಗ್ರೇಡ್​ ನೀಡುವ ಪ್ರಸ್ತಾಪ ಮಾಡಿತ್ತು. ಈ ಹಿನ್ನೆಲೆಯಲ್ಲಿ ಇನ್ನು ಮುಂದೆ ಹಿಂದಿಗೆ ಅಂಕ ನೀಡಬೇಕೇ ಅಥವಾ ಗ್ರೇಡ್ ಸಾಕೇ ಎಂಬ ಪ್ರಶ್ನೆ ಕಾನೂನು ಮಟ್ಟಕ್ಕೆ ಹೋಗಿತ್ತು. ಇದೀಗ ಹೈಕೋರ್ಟ್​​ ಈ ಬಗ್ಗೆ ಮಹತ್ವದ ಆದೇಶ ಹೊರಡಿಸಿದೆ.

ಗ್ರೇಡ್ ನೀಡುವ ಬಗ್ಗೆ ಪ್ರಶ್ನಿಸಿ ಮೂವರು ವಿದ್ಯಾರ್ಥಿಗಳು ತಕರಾರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಇ.ಎಸ್.ಇಂದಿರೇಶ್ ಅವರ ಏಕಸದಸ್ಯ ಪೀಠವು ಗ್ರೇಡ್ ಬದಲಿಗೆ ಅಂಕಗಳನ್ನು ನೀಡುವಂತೆ ಸರ್ಕಾರಕ್ಕೆ ಸೂಚಿಸಿ, ಅರ್ಜಿ ಇತ್ಯರ್ಥಪಡಿಸಿದೆ.

ಹೈಕೋರ್ಟ್ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, 2025-26 ಶೈಕ್ಷಣಿಕ ವರ್ಷದ SSLC ಪರೀಕ್ಷೆಯಿಂದ ಆರಂಭಿಸಿ ತೃತೀಯ ಭಾಷೆಯಾದ ಹಿಂದಿಗೆ ಗ್ರೇಡಿಂಗ್ ಮಾತ್ರ ನೀಡದೆ, ನೇರವಾಗಿ ಅಂಕಗಳನ್ನು ನೀಡುವಂತೆ ಸರ್ಕಾರಕ್ಕೆ ಸೂಚನೆ ನೀಡಿದೆ. ಅಂದರೆ, ಮುಂದಿನ ವರ್ಷಗಳಿಂದ SSLC ಮಾರ್ಕ್ಸ್ ಕಾರ್ಡ್‌ನಲ್ಲಿ ಹಿಂದಿಗೂ ಸ್ಪಷ್ಟ ಅಂಕಗಳು ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಾಗಿದೆ.

ಇದನ್ನೂ ಓದಿ : ಆಟಗಾರರಿಗೆ ಅವಮಾನ ಆರೋಪ – RCB ವಿರುದ್ಧ ದೂರು ದಾಖಲಿಸಿದ CSK!

Btv Kannada
Author: Btv Kannada

Leave a Comment

Read More