ವಿಜಯಪುರ : ವಿಜಯಪುರದ ಆದರ್ಶ ನಗರ ಪೊಲೀಸ್ ಠಾಣಾ PSI ಸೀತಾರಾಮ್ ಲಮಾಣಿ ವಿರುದ್ಧ ಪೊಲೀಸ್ ಸಿಬ್ಬಂದಿಗಳು ರಾಜ್ಯಪಾಲರಿಗೆ ಪತ್ರ ಬರೆದಿದ್ದಾರೆ. PSI ಸೀತಾರಾಮ್ ಲಮಾಣಿ ಪ್ರತಿಯೊಂದು ಅಪರಾಧಕ್ಕೂ ನಿರ್ದಿಷ್ಟ ಹಣ ಫಿಕ್ಸ್ ಮಾಡಿರುವ ಆರೋಪ ಕೇಳಿಬಂದಿದೆ.
ಬಾರ್, ಡಾಬಾ, ಅಕ್ರಮ ಅಕ್ಕಿ ಸಾಗಾಟ, ಗ್ಯಾಸ್ ಮಾರಾಟ, ಸಿಗರೆಟ್ ಮತ್ತು ಮಾವಾ ಸೇರಿದಂತೆ ವಿವಿಧ ಅಕ್ರಮ ದಂಧೆಗಳಿಂದ 5.0 ರೇಟ್‌ನಲ್ಲಿ ಹಣ ವಸೂಲಿ ಮಾಡುತ್ತಿದ್ದಾರೆ. ಆದರ್ಶನಗರ ಠಾಣೆಗೆ ವರ್ಗಾವಣೆಗಾಗಿ ನೀಡಿದ್ದ ಹಣವನ್ನು ಮರಳಿ ಹೊಂದಿಸಲು ಈ ರೀತಿ ವಸೂಲಿಗೆ ಇಳಿದಿದ್ದಾರೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಅಷ್ಟೇ ಅಲ್ಲದೆ ತಮ್ಮ ಆತ್ಮೀಯ ಸಿಬ್ಬಂದಿಗಳಿಗೆ ಮಾತ್ರ PSI ಸೀತಾರಾಮ್ ಲಮಾಣಿ ರಜೆ ನೀಡುತ್ತಾರೆ ಎಂದು ನೊಂದ ಪೊಲೀಸರು ದೂರಿದ್ದಾರೆ. PSI ಭ್ರಷ್ಟಾಚಾರದಿಂದ ಬೇಸತ್ತು ಆದರ್ಶನಗರ ಪೊಲೀಸ್ ಸಿಬ್ಬಂದಿಗಳು ರಾಜ್ಯಪಾಲರು, ಸಿಎಂ, ಗೃಹಸಚಿವ, ಶಾಸಕ ಯತ್ನಾಳ್, ಪೊಲೀಸ್ ಮಹಾನಿರ್ದೇಶಕರು ಪತ್ರ ಬರೆದಿದ್ದಾರೆ.



Author: Btv Kannada
Post Views: 774









