Download Our App

Follow us

Home » ಅಪರಾಧ » ಮಾಜಿ ಮಂತ್ರಿ ನಾಗೇಂದ್ರ ಅರೆಸ್ಟ್? ತೀವ್ರ ವಿಚಾರಣೆ ಬಳಿಕ ಕರೆದೊಯ್ದ ED ಅಧಿಕಾರಿಗಳು..!

ಮಾಜಿ ಮಂತ್ರಿ ನಾಗೇಂದ್ರ ಅರೆಸ್ಟ್? ತೀವ್ರ ವಿಚಾರಣೆ ಬಳಿಕ ಕರೆದೊಯ್ದ ED ಅಧಿಕಾರಿಗಳು..!

ಬೆಂಗಳೂರು : ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣಕ್ಕೆ ಸಂಬಂಧಿಸಿದಂತೆ ED ಅಧಿಕಾರಿಗಳು ಇಂದು ಬೆಳ್ಳಂಬೆಳಗ್ಗೆ ಡಾಲರ್ಸ್ ಕಾಲೋನಿಯಲ್ಲಿರುವ ನಾಗೇಂದ್ರ ನಿವಾಸ ಸೇರಿದಂತೆ ವಿವಿಧೆಡೆ ದಾಳಿ ನಡೆಸಿದ್ದರು. ದಾಳಿ ನಡೆಸಿದ ED ಅಧಿಕಾರಿಗಳು ಕಾಂಗ್ರೆಸ್‌ ಮಾಜಿ ಸಚಿವ ಬಿ.ಎನ್‌ ನಾಗೇಂದ್ರ ಅವರ ಮೊಬೈಲ್​​ ವಶಕ್ಕೆ ಪಡೆದು ಸುಮಾರು 2 ಗಂಟೆಯಿಂದ ವಿಚಾರಣೆ ನಡೆಸಿದ್ದರು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತೀವ್ರ ವಿಚಾರಣೆ ನಡೆಸಿದ ED ಅಧಿಕಾರಿಗಳು ಇದೀಗ ಮಾಜಿ ಮಂತ್ರಿ ನಾಗೇಂದ್ರ ಅರೆಸ್ಟ್ ಮಾಡಿದ್ದಾರೆ ಎನ್ನಲಾಗಿದೆ. ನಾಗೇಂದ್ರ  ಸೇರಿದಂತೆ PA ಚೇತನನ್ನು ಕೂಡಾ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ವಾಲ್ಮೀಕಿ ಹಗಣರದಲ್ಲಿ ಅರೆಸ್ಟ್ ಮಾಡಿರುವ ನಾಗೇಂದ್ರರನ್ನು ED ಅಧಿಕಾರಿಗಳು ಕಾರಿನಲ್ಲಿ ಕರೆದೊಯ್ಯತ್ತಿದ್ದಾರೆ.

ಇದನ್ನೂ ಓದಿ : ಇನ್ನೂ 8 ದಿನ ದರ್ಶನ್​ಗೆ ಮನೆ ಊಟ ಸಿಗಲ್ಲ – ಜು.18ಕ್ಕೆ ಅರ್ಜಿ ವಿಚಾರಣೆ ಮುಂದೂಡಿದ ಹೈಕೋರ್ಟ್​..! 

Leave a Comment

DG Ad

RELATED LATEST NEWS

Top Headlines

ವಿದ್ಯುತ್ ಸಂಪರ್ಕ ನೀಡಲು 16.5 ಲಕ್ಷ ರೂ. ಲಂಚಕ್ಕೆ ಬೇಡಿಕೆ – ರೆಡ್​ ಹ್ಯಾಂಡ್​ ಆಗಿ ಲೋಕಾಯುಕ್ತ ಬಲೆಗೆ ಬಿದ್ದ ಬೆಸ್ಕಾಂ AEE-JE ಅಧಿಕಾರಿಗಳು..!

ಬೆಂಗಳೂರು : ಲಂಚ ಸ್ಚೀಕರಿಸುವಾಗ AEE, JE ರೆಡ್ ಹ್ಯಾಂಡಾಗಿ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ನಡೆದಿದೆ. ಅವಲಹಳ್ಳಿ ಬೆಸ್ಕಾಂ AEE ರಮೇಶ್ ಬಾಬು, JE ನಾಗೇಶ್

Live Cricket

Add Your Heading Text Here