Download Our App

Follow us

Home » ಸಿನಿಮಾ » ‘ಹಾಯ್ ಫ್ರೆಂಡ್ಸ್’ ಎನ್ನುತ್ತ ಕನ್ನಡ ಕಿರುತೆರೆಗೆ ಎಂಟ್ರಿ ಕೊಟ್ಟ ರೀಲ್ಸ್ ರೇಷ್ಮಾ ಧೀಡಿರ್ ಆಸ್ಪತ್ರೆಗೆ ದಾಖಲು : ಆಗಿದ್ದೇನು ಗೊತ್ತಾ?

‘ಹಾಯ್ ಫ್ರೆಂಡ್ಸ್’ ಎನ್ನುತ್ತ ಕನ್ನಡ ಕಿರುತೆರೆಗೆ ಎಂಟ್ರಿ ಕೊಟ್ಟ ರೀಲ್ಸ್ ರೇಷ್ಮಾ ಧೀಡಿರ್ ಆಸ್ಪತ್ರೆಗೆ ದಾಖಲು : ಆಗಿದ್ದೇನು ಗೊತ್ತಾ?

ಸೋಶಿಯಲ್ ಮೀಡಿಯಾದಲ್ಲಿ ‘ಹಾಯ್‌ ಫ್ರೆಂಡ್ಸ್‌…. ಏನ್ ಗೊತ್ತಾ ಇವತ್ತು ಅಂತ’ ವಿಡಿಯೋ ಮಾಡಿ ಫೇಮಸ್​​​ ಆದ ರೇಷ್ಮಾ ಯಾಸಿನ್ ಅವರಿಗೆ 1 ಲಕ್ಷಕ್ಕೂ ಅಧಿಕ ಫಾಲೋವರ್ಸ್ ಇದ್ದಾರೆ. ಈಗ ಗಿಚ್ಚಿ ಗಿಲಿ ಗಿಲಿ ಸೀಸನ್ 3ರ ಸ್ಪರ್ಧಿಯಾಗಿ ಇಡೀ ಕರ್ನಾಟಕದ ಮನೆಮಾತಾಗಿದ್ದಾರೆ. ದಿನದಿಂದ ದಿನಕ್ಕೆ ರೇಷ್ಮಾ ಅದ್ಭುತವಾಗಿ ಪಾತ್ರಗಳನ್ನು ನಿರ್ವಹಿಸುವ ಮೂಲಕ ತೀರ್ಪುಗಾರ ಮೆಚ್ಚುಗೆಯನ್ನು ಪಡೆಯುತ್ತಿದ್ದರು. ಕಳೆದ ಎಪಿಸೋಡ್‌ನಲ್ಲಿ ರೇಶ್ಮಾ ಕಾಣಿಸಲಿಲ್ಲ. ಹೀಗಾಗಿ ಹಲವರು ಮೆಸೇಜ್ ಮಾಡಿದ ಕಾರಣ ಇದೀಗ ರೇಷ್ಮಾ ತಮ್ಮ ಆರೋಗ್ಯದ ಬಗ್ಗೆ ವಿಡಿಯೋ ಮಾಡಿ ಮಾಹಿತಿ ಹಂಚಿಕೊಂಡಿದ್ದಾರೆ.

ಕಳೆದ 20 ದಿನಗಳಿಂದ ವಿಪರೀತ ಚಳಿ ಜ್ವರ ಕಾಣಿಸಿಕೊಳ್ಳುತ್ತಿದ್ದು ಆಗಾಗ ಡಾಕ್ಟರ್ ಬಳಿ ಹೋಗಿ ಇಂಜೆಕ್ಷನ್ ತೆಗೆದುಕೊಂಡು ಬರುತ್ತಿದ್ದ ರೇಶ್ಮಾ ಆರೋಗ್ಯದ ಬಗ್ಗೆ ತೀರಾ ನಿರ್ಲಕ್ಷ್ಯೆ ಮಾಡುತ್ತಿದ್ದರಂತೆ. ಈ ಸಮಯದಲ್ಲಿ ಹೊಟ್ಟೆ ನೋವು ಕೂಡ ಕಾಣಿಸಿಕೊಂಡಿದೆ, ಒಂದು ದಿನ ತಡೆಯಲಾಗದೆ ಪತಿಯನ್ನು ಕರೆದುಕೊಂಡು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಹೋಗಿ ದಾಖಲಾಗಿದ್ದಾರೆ. ಅಲ್ಲಿ ಮೊದಲು ಜ್ವರ ಚೆಕ್ ಮಾಡಿ ಆನಂತರ ಹೊಟ್ಟೆ ಸ್ಕ್ಯಾನ್ ಮಾಡಿದ್ದಾರಂತೆ. ಮೂತ್ರನಾಳದ ಸೋಂಕು ಕಾಣಿಸಿಕೊಂಡಿದೆ ಎಂದು ವೈದ್ಯರು ಹೇಳಿದ್ದಾರೆ.

ವಿಡಿಯೋ ಮಾಡುವ ಮೂಲಕ ಆರೋಗ್ಯದ ಸ್ಥಿತಿಗತಿ ಬಗ್ಗೆ ಮಾಹಿತಿ ಹಂಚಿಕೊಂಡ ರೇಷ್ಮಾ ಅವರು, ನಾನು ಸಣ್ಣ ಆಗಬೇಕು ಎಂದು ವಿಪರೀತ ಡಯಟ್ ಮಾಡುತ್ತಿದ್ದೆ. ಅನ್ನ ತಿನ್ನುವುದನ್ನು ಬಿಟ್ಟುಬಿಟ್ಟಿದ್ದೆ. ಸಣ್ಣ ಆಗಿದ್ದೀನಿ ಅನ್ನೋ ಖುಷಿ ಇತ್ತು ಆದರೆ ನನ್ನ ದೇಹದ ಒಳಗೆ ಈ ರೀತಿ ಆಗುತ್ತಿದೆ ಎಂದು ಗೊತ್ತಿರಲಿಲ್ಲ. ಇದರಿಂದ ತುಂಬಾ ಬೇಸರ ಆಗಿದೆ. ಡಯಟ್ ಬಗ್ಗೆ ತಿಳಿದುಕೊಂಡವರು ಅಥವಾ ಮತ್ತೊಬ್ಬರಿಂದ ಸಲಹೆ ಪಡೆದು ಮಾತ್ರ ಡಯಟ್ ಮಾಡಬೇಕು ನಮ್ಮಂತವರು ಡಯಟ್ ಮಾಡಬಾರದು. ಈ ರೀತಿ ಆಸ್ಪತ್ರೆಗೆ ಬಂದು ಸೇರಿಕೊಳ್ಳುವಂತೆ ಆಯ್ತು. ಮೂರ್ನಾಲ್ಕು ದಿನ ಆಸ್ಪತ್ರೆಯಲ್ಲಿ ಚೆಕಿತ್ಸೆ ಪಡೆದು ಆಮೇಲೆ ಮನೆಗೆ ಹೋಗುತ್ತೀನಿ’ ಎಂದು ವಿಡಿಯೋದಲ್ಲಿ ರೇಶ್ಮಾ ತಿಳಿಸಿದ್ದಾರೆ.

ಇದನ್ನೂ ಓದಿ : 3 ದಿನಗಳ ಹಿಂದೆಯೇ ರೇಡ್​ಗೆ ನಡೆದಿತ್ತು ಮೆಗಾ ಪ್ಲಾನ್ – ವಾಲ್ಮೀಕಿ ಹಗರಣದ ಬಯಲಿಗೆ ED ಸೈಲೆಂಟ್ ಆಪರೇಷನ್..!

Leave a Comment

DG Ad

RELATED LATEST NEWS

Top Headlines

MLA ಮುನಿರತ್ನ ವಿರುದ್ಧ ರೇಪ್ ಆರೋಪದ ಬೆನ್ನಲ್ಲೇ ಮಾಜಿ ಕಾರ್ಪೊರೇಟರ್ ಪತಿಯ ಹನಿಟ್ರ್ಯಾಪ್ ವಿಡಿಯೋ ವೈರಲ್..!

ಬೆಂಗಳೂರು : ಮಹಿಳೆ ಮೇಲೆ ಅತ್ಯಾಚಾರ ಎಸಗಿದ ಆರೋಪದಡಿ ಬಿಜೆಪಿ ಶಾಸಕ ಮುನಿರತ್ನ ಸೇರಿ ಏಳು ಮಂದಿಯ ವಿರುದ್ಧ ರಾಮನಗರ ಜಿಲ್ಲಾ ವ್ಯಾಪ್ತಿಯ ಕಗ್ಗಲಿಪುರ ಪೊಲೀಸ್ ಠಾಣೆಯಲ್ಲಿ

Live Cricket

Add Your Heading Text Here