ದ್ವಿತೀಯ PUC ಫಲಿತಾಂಶ ಪ್ರಕಟ – ದಕ್ಷಿಣ ಕನ್ನಡದ ದಿಶಾ ರಾಜ್ಯಕ್ಕೆ ಪ್ರಥಮ!

ಬೆಂಗಳೂರು : 2025-26ನೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ ಇಂದು ಮಧ್ಯಾಹ್ನ 3ಕ್ಕೆ ಪ್ರಕಟವಾಗಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಆಳ್ವಾಸ್ ಕಾಲೇಜು ವಿದ್ಯಾರ್ಥಿನಿ ದಿಶಾ 600ಕ್ಕೆ 600 ಅಂಕ ಪಡೆದು ರಾಜ್ಯದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ.

ಮೂಡಬಿದ್ರೆ ನಿವಾಸಿಯೂ ಆಗಿರುವ ದಿಶಾ ವಾಣಿಜ್ಯ ವಿಭಾಗದಲ್ಲಿ 600ಕ್ಕೆ 600 ಅಂಕ ಪಡೆದುಕೊಂಡಿದ್ದಾರೆ. ಇನ್ನೂ ವಿಜಯನಗರ ಕೊಟ್ಟೂರಿನ‌ ಇಂದೂ ಪಿಯು ಕಾಲೇಜಿನ ಇಬ್ಬರು ವಿದ್ಯಾರ್ಥಿನಿಯರಾದ ಸಂಗೀತಾ ಹಾಗೂ ಅರ್ಚನಾ ಕಲಾ ವಿಭಾಗದಲ್ಲಿ ತಲಾ 598 ಅಂಕ ಪಡೆದು ಸಾಧನೆ ಮಾಡಿದ್ದಾರೆ.

ಬಿಎಂಎಸ್ ಕಾಲೇಜಿನ ಹರ್ಷಿತಾ ಕೆ. ಗೌಡ ವಾಣಿಜ್ಯ ವಿಭಾಗದಲ್ಲಿ 600ಕ್ಕೆ 596 ಅಂಕ ಪಡೆದುಕೊಂಡಿದ್ದಾರೆ. ತೀರ್ಥಹಳ್ಳಿಯ ವಾಗ್ದೇವಿ ಪಿ.ಯು ಕಾಲೇಜಿನ ವಿದ್ಯಾರ್ಥಿನಿ ಪ್ರತೀಕ್ಷಾ ಆರ್. ವಿಜ್ಞಾನ ವಿಭಾಗದಲ್ಲಿ 583 ಅಂಕ ಪಡೆದಿದ್ದಾರೆ.

ಇದನ್ನೂ ಓದಿ : ಬೆಂಗಳೂರು ಜಲಮಂಡಳಿಯಲ್ಲಿ ತಾರತಮ್ಯ – BWSSB ಚೇರ್ಮನ್ ವಿರುದ್ಧ ಹಿರಿಯ ವಕೀಲ ಎಸ್. ಬಾಲನ್ ಕಿಡಿ!

Btv Kannada
Author: Btv Kannada

Leave a Comment

Read More