ಎರಡು ವಿಮಾನಗಳು ಪರಸ್ಪರ ಡಿಕ್ಕಿ – ತಪ್ಪಿದ ಭಾರೀ ಅನಾಹುತ.. ವಿಡಿಯೋ ವೈರಲ್‌!

ಎರಡು ಡೆಲ್ಟಾ ವಿಮಾನಗಳು ಪರಸ್ಪರ ಡಿಕ್ಕಿ ಹೊಡೆದಿರುವ ಘಟನೆ ನ್ಯೂಯಾರ್ಕ್‌ನ ಲಾಗಾರ್ಡಿಯಾ ವಿಮಾನ ನಿಲ್ದಾಣದ ರನ್​ವೇನಲ್ಲಿ ನಡೆದಿದೆ. ಡೆಲ್ಟಾ ಏರ್‌ಲೈನ್ಸ್‌ನ ಎರಡು ವಾಣಿಜ್ಯ ವಿಮಾನಗಳು ಡಿಕ್ಕಿ ಹೊಡೆದ ಪರಿಣಾಮ ಒಂದು ವಿಮಾನದ ರೆಕ್ಕೆ ಬೇರ್ಪಟ್ಟಿದೆ.

ಎರಡೂ ವಿಮಾನಗಳು ಡೆಲ್ಟಾ ಏರ್‌ಲೈನ್ಸ್‌ಗೆ ಸೇರಿದ್ದಾಗಿವೆ. ಒಂದು ವಿಮಾನವು ರನ್‌ವೇಗೆ ತೆರಳುವಾಗ ಅದರ ಮುಂಭಾಗ ಮತ್ತೊಂದು ವಿಮಾನದ ರೆಕ್ಕೆಗೆ ಬಡಿದಿದೆ. ಇದರಿಂದ ವಿಮಾನದ ರೆಕ್ಕೆ ಮುರಿದಿದೆ. ಅಲ್ಲದೇ ಡಿಕ್ಕಿ ಹೊಡೆದ ವಿಮಾನದ ಮುಂಭಾಗಕ್ಕೆ ಹಾನಿಯಾಗಿದೆ ಎಂದು ತಿಳಿದುಬಂದಿದೆ. ವಿಮಾನ ಡಿಕ್ಕಿಯಾದ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್‌ ಆಗಿದೆ.

ಈ ಅಪಘಾತದಲ್ಲಿ ಒಬ್ಬರು ಗಾಯಗೊಂಡಿದ್ದಾರೆ. ಅದೃಷ್ಟವಶಾತ್‌ ಯಾವುದೇ ಪ್ರಾಣಾಪಾಯ ಹಾಗೂ ಭಾರೀ ಅವಘಡ ಸಂಭವಿಸಿಲ್ಲ. ಈ ಬಗ್ಗೆ ಡೆಲ್ಟಾ ಏರ್‌ಲೈನ್ಸ್ ಯಾವುದೇ ಹೇಳಿಕೆ ನೀಡಿಲ್ಲ.

ಈ ವರ್ಷ ಮಾರ್ಚ್‌ನಲ್ಲಿ ಲಾಗಾರ್ಡಿಯಾ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್‌ ವೇಳೆ ಡೆಲ್ಟಾ ವಿಮಾನದ ರೆಕ್ಕೆ ರನ್‌ವೇಗೆ ಡಿಕ್ಕಿಯಾಗಿತ್ತು. ಈ ಬಗ್ಗೆ ಫೆಡರಲ್ ಏವಿಯೇಷನ್ ​​ಅಡ್ಮಿನಿಸ್ಟ್ರೇಷನ್ ತನಿಖೆ ನಡೆಸಿತ್ತು. ಡೆಲ್ಟಾ ವಿಮಾನ ಅಪಘಾತ ಪದೇ ಪದೇ ಸಂಭವಿಸುತ್ತಿರುವುದು ಸುರಕ್ಷತೆ ಬಗ್ಗೆ ಹಲವಾರು ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಇದನ್ನೂ ಓದಿ : ಬೆಳ್ಳಂಬೆಳಗ್ಗೆ ಬೆಂಗಳೂರಲ್ಲಿ ಭಾರೀ ಅಗ್ನಿ ಅವಘಡ – ಸುಟ್ಟು ಕರಕಲಾದ 19 ಇವಿ ಬೈಕ್‌ಗಳು!

Btv Kannada
Author: Btv Kannada

Read More