‘ದಾಸ’ನಿಗೆ ನರಕವಾಯ್ತು ಕ್ವಾರಂಟೈನ್ ಜೈಲು.. ಹಾಸಿಗೆ, ದಿಂಬು ಕೊಡದಿದ್ರೂ ಪರವಾಗಿಲ್ಲ ಇಲ್ಲಿಂದ ಶಿಫ್ಟ್ ಮಾಡಿ, ನೆಲದಲ್ಲಾದ್ರೂ ಮಲಗ್ತೀನಿ – ದರ್ಶನ್ ಅಳಲು!

ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಮತ್ತೆ ಜೈಲು ಪಾಲಾಗಿರುವ ನಟ ದರ್ಶನ್ ಅವರು ಜೈಲಿನಲ್ಲಿ ತಮಗೆ ಕನಿಷ್ಠ ಸೌಲಭ್ಯ ನಿರಾಕರಿಸಲಾಗಿದೆ ಎಂದು ಆರೋಪಿಸಿ ಕೋರ್ಟ್ ಮೆಟ್ಟಿಲೇರಿದ್ದು, ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ಅಕ್ಟೋಬರ್ 9ಕ್ಕೆ ತೀರ್ಪು ಕಾಯ್ದಿರಿಸಿದೆ.

ಸದ್ಯ ದರ್ಶನ್​ನ್ನು ಕ್ವಾರಂಟೈನ್ ಸೆಲ್‌ನಲ್ಲಿ ಇರಿಸಲಾಗಿದ್ದು, ಈ ಕ್ವಾರಂಟೈನ್ ಜೈಲು ದರ್ಶನ್​ಗೆ ಅಕ್ಷರಶಃ ನರಕವಾಗಿದೆ. ಇದೀಗ ಹಾಸಿಗೆ, ದಿಂಬು ಕೊಡದಿದ್ರೂ ಓಕೆ ಇಲ್ಲಿಂದ ಶಿಫ್ಟ್ ಮಾಡಿ, ನೆಲದಲ್ಲಾದ್ರೂ ಮಲಗ್ತೀನಿ ಬೇರೆ ಬ್ಯಾರೆಕ್​ಗೆ ಹಾಕಿ ಎಂದು ದರ್ಶನ್ ಅಳಲು ತೋಡಿಕೊಂಡಿದ್ದಾರೆ.

ಕ್ವಾರಂಟೈನ್ ಜೈಲಿನಲ್ಲಿ ಇರೋಕಾಗದೆ ದರ್ಶನ್ ಒದ್ದಾಡುತ್ತಿದ್ದು, ಸೆಷನ್ಸ್ ಕೋರ್ಟ್​ನಲ್ಲಿ ದರ್ಶನ್ ಗೆ ಹಿನ್ನೆಡೆ ಮೇಲೆ ಹಿನ್ನೆಡೆಯಾಗುತ್ತಿದೆ.  ಇದೀಗ ಕ್ವಾರಂಟೈನ್ ಕಾಟ ತಾಳದೆ ದರ್ಶನ್ ಮಾನವ ಹಕ್ಕುಗಳ ಮೊರೆ ಹೋಗಲು ನಿರ್ಧಾರ ಮಾಡಿದ್ದಾರೆ. ಪ್ರತಿಯೊಂದಕ್ಕೂ ನಿಯಮ ಅಂತಿರೋ ಜೈಲಾಧಿಕಾರಿಗಳ ವಿರುದ್ಧ ದರ್ಶನ್  ತೀವ್ರ ಅಸಮಧಾನ ಹೊರ ಹಾಕ್ತಿದ್ದಾರೆ.

ಜೈಲಾಧಿಕಾರಿಗಳು ಅಮಾನವೀಯವಾಗಿ ನಡೆಸಿಕೊಳ್ತಿದ್ದಾರೆ ಎಂದು ದರ್ಶನ್ ಆರೋಪಿಸಿದ್ದಾರೆ. ಮಾನವಹಕ್ಕುಗಳ ಉಲ್ಲಂಘನೆ ಎಂದು ಆಯೋಗ ಹಾಗೂ ಹೈಕೋರ್ಟ್ ಸುಪ್ರೀಂ ಕೋರ್ಟ್ ಮೊರೆ ಹೋಗಲು ದರ್ಶನ್ ನಿರ್ಧಾರ ಮಾಡಿದ್ದು, ಕೋರ್ಟ್​ನ ಮುಂದಿನ ಆದೇಶದ ನಂತರ ಮಾನವ ಹಕ್ಕುಗಳ ಆಯೋಗ, ಹೈಕೋರ್ಟ್, ಸುಪ್ರೀಂ ಕೋರ್ಟ್ ಮೊರೆ ಹೋಗಲಿದ್ದಾರೆ. ಈ ಬಗ್ಗೆ ದರ್ಶನ್, ವಕೀಲ ಸುನೀಲ್ ಜೊತೆ ಚರ್ಚೆ ಮಾಡ್ತಿದ್ದಾರೆ.

ಇದನ್ನೂ ಓದಿ : ಬೆಂಗಳೂರಲ್ಲಿ ಆಯುಧಪೂಜೆ ಖರೀದಿ ಜೋರು – ಮಾರ್ಕೆಟ್​​ನಲ್ಲಿ ಹೂವುಗಳ ಬೆಲೆ ಭಾರೀ ಏರಿಕೆ.. ರೇಟ್ ಎಷ್ಟು?

Btv Kannada
Author: Btv Kannada

Read More