ನಾಳೆ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ!

ಬೆಂಗಳೂರು : ನಾಳೆ ದ್ವಿತೀಯ ಪಿಯುಸಿ ಪರೀಕ್ಷೆ 1ರ ಫಲಿತಾಂಶ ಪ್ರಕಟವಾಗಲಿದ್ದು, ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಗೊಳ್ಳಲಿದೆ.

ಈ ಮೊದಲು ಸುದ್ದಿಗೋಷ್ಠಿ ನಡೆಸಿ ಬಳಿಕ ಫಲಿತಾಂಶ ಪ್ರಕಟವಾಗುತ್ತಿತ್ತು. ಆದರೆ ಈ ಬಾರಿ ಮೊದಲು ವೈಬ್‌ಸೈಟ್‌ನಲ್ಲಿ ಫಲಿತಾಂಶ ಪ್ರಕಟವಾಗಲಿದೆ. ಬಳಿಕ ಸುದ್ದಿಗೋಷ್ಠಿ ನಡೆಯಲಿದೆ. ಚುನಾವಣೆ ನೀತಿ ಸಂಹಿತೆ ಹಿನ್ನೆಲೆ ಸಚಿವ ಮಧು ಬಂಗಾರಪ್ಪ ಅವರು ಸಂಜೆ 6:15ಕ್ಕೆ ಫಲಿತಾಂಶದ ಬಗ್ಗೆ ಸುದ್ದಿಗೋಷ್ಠಿ ನಡೆಸಲಿದ್ದಾರೆ.

ಇಲಾಖೆ ವೆಬ್‌ಸೈಟ್ https://karresults.nic.in ಫಲಿತಾಂಶ ಲಭ್ಯವಾಗಲಿದೆ. ಜೊತೆಗೆ Karnatakaone ಮೊಬೈಲ್ ಆಪ್ ಮೂಲಕ ಫಲಿತಾಂಶ ಪಡೆಯಬಹುದು ಹಾಗೂ ವಿದ್ಯಾರ್ಥಿಗಳ ನೋಂದಾಯಿತ ಮೊಬೈಲ್ ಸಂಖ್ಯೆಗೆ, ವಾಟ್ಸಪ್‌, SMS ಮೂಲಕವೂ ಫಲಿತಾಂಶ ರವಾನೆ ಆಗಲಿದೆ.

ಈ ವರ್ಷ ಪ್ರಥಮ ಬಾರಿಗೆ ವಿಶೇಷವಾಗಿ, ವಿದ್ಯಾರ್ಥಿಗಳ ಫಲಿತಾಂಶದ ಅಂಕಪಟ್ಟಿಯನ್ನು (Marks Card) ಡಿಜಿಲಾಕರ್ (DigiLocker) ಮೂಲಕ ನಾಳೆ ಮಧ್ಯಾಹ್ನ 3.00 ಗಂಟೆಗೆ ಲಭ್ಯವಾಗಲಿದೆ. https://www.digilocker.gov.in ಅನ್ನು ಬಳಸಿ ಅಂಕಪಟ್ಟಿಯನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ.

ಇದನ್ನೂ ಓದಿ : ಅಲ್ಲು ಅರ್ಜುನ್ ಅಭಿನಯದ “ರಾಕಾ” – ಅಟ್ಲೀ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಸೂಪರ್ ಫ್ಯಾಂಟಸಿ ಚಿತ್ರ!

Btv Kannada
Author: Btv Kannada

Leave a Comment

Read More

Read More