RCB ಯುವತಿ ಆಕ್ರೋಶ ವ್ಯಕ್ತಪಡಿಸಿದ್ದು ಹೀಗೆ!

ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ IPL 2026 ರ 11ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡದ ವಿರುದ್ಧ ಭರ್ಜರಿ ಗೆಲುವು ಸಾಧಿಸಿತು. RCB 250 ರನ್ ಕಲೆಹಾಕಿ CSKಗೆ ಹೀನಾಯ ಸೋಲುಣಿಸಿತು. ಈ ಗೆಲುವು RCB ಅಭಿಮಾನಿಗಳ ನಿರೀಕ್ಷೆ ನಿಜವಾಗಿಸಿದ್ದು, CSKಗೆ ಹ್ಯಾಟ್ರಿಕ್ ಸೋಲಿನ ಆಘಾತ ನೀಡಿದೆ. ಪಂದ್ಯದಾದ್ಯಂತ RCB ಮೇಲುಗೈ ಸಾಧಿಸಿತು. RCB ಗೆಲುವು ಸಾಧಿಸಿದ್ದಕ್ಕೆ ಯುವತಿಯೊಬ್ಬಳು CSK ಅಭಿಮಾನಿಯನ್ನು ರುಬ್ಬಿದ್ದಾಳೆ. ಈ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

RCB ಭರ್ಜರಿ ಗೆಲುವು ಸಾಧಿಸಿದ್ದಕ್ಕೆ ಯುವತಿ CSK ಅಭಿಮಾನಿ ಮುಂದೆ ಜೋರಾಗಿ ಕಿರುಚಾಡುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾಳೆ. ಈ ವೇಳೆ CSK ಅಭಿಮಾನಿ ಬೇಜಾರಾಗಿ ಕೂತಿದ್ದಾನೆ. RCB ಯುವತಿ ಜೋರಾಗಿ ಕಿರುಚಾಡಿ, RCB ಫ್ಲಾಗ್ ಹಾರಿಸಿ ಸಂಭ್ರಮಿಸಿದ್ದು, ಇದಕ್ಕೆ CSK ಅಭಿಮಾನಿ ಸಾಕು ಸಾಕು ಎಂದು ಹೇಳಿದ್ದಾನೆ. RCB ಯುವತಿ ಆಕ್ರೋಶ ವ್ಯಕ್ತಪಡಿಸಿದ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಕಳೆದ ಆವೃತ್ತಿಯಲ್ಲಿ ತನ್ನ ತವರು ಮೈದಾನವಾದ ಎಂ ಚಿನ್ನಸ್ವಾಮಿಯಲ್ಲಿ ನಡೆದ ತನ್ನ ಮೊದಲ ಮೂರು ಪಂದ್ಯಗಳಲ್ಲಿ ಸೋತಿದ್ದ ಬೆಂಗಳೂರು ತಂಡ, ಈ ಬಾರಿ ಎರಡೂ ಪಂದ್ಯಗಳಲ್ಲಿ ಜಯ ಸಾಧಿಸಿತು. ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ 200 ಕ್ಕೂ ಹೆಚ್ಚು ರನ್‌ಗಳ ಯಶಸ್ವಿ ಚೇಸಿಂಗ್‌ನೊಂದಿಗೆ ಹೊಸ ಸೀಸನ್​ ಪ್ರಾರಂಭಿಸಿದ್ದ ಆರ್​ಸಿಬಿ, ಇದೀಗ ತನ್ನ ಬ್ಯಾಟಿಂಗ್ ಪರಾಕ್ರಮದಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಕೂಡ ಸೋಲಿಸಿತು. ಹಾಗಾಗಿ RCB ಅಭಿಮಾನಿಗಳು ಫುಲ್ ಖುಷಿಯಾಗಿದ್ದಾರೆ.

Btv Kannada
Author: Btv Kannada

Leave a Comment

Read More

Read More