ಬೆಂಗಳೂರು : ಕನ್ನಡ ನಾಮಫಲಕ ಬೆನ್ನಲ್ಲೇ ಕನ್ನಡಿಗರ ಉದ್ಯೋಗ ಮೀಸಲು ಕೂಗು ಕೇಳಿಬಂದಿದ್ದು, ಕರ್ನಾಟಕದಲ್ಲಿ ಕನ್ನಡಿಗರಿಗೆ ಉದ್ಯೋಗ ನೀಡುವಂತೆ ನಾಮಫಲಕ ಮಾದರಿಯಲ್ಲೇ ಹೋರಾಟ ನಡೆಸಲು ಕರವೇ ಸಜ್ಜಾಗಿದೆ.
ಕನ್ನಡಿಗರಿಗೆ ಕಡ್ಡಾಯ ಉದ್ಯೋಗ ಮೀಸಲಾತಿ ನೀಡಲು ಕರ್ನಾಟಕ ರಕ್ಷಣಾ ವೇದಿಕೆ ಒತ್ತಾಯಿಸಲಿದ್ದು, ರಾಜ್ಯದಲ್ಲಿ ಕನ್ನಡಿಗರಿಗೆ ಮೊದಲ ಆದ್ಯತೆ ನೀಡುವಂತೆ ಪಟ್ಟು ಹಿಡಿಯಲಿದೆ. ಕನ್ನಡಿಗರಿಗೆ ಉದ್ಯೋಗ ಮೀಸಲು ನೀಡುವಂತೆ ಟಿ.ಎ.ನಾರಾಯಣಗೌಡರ ಆಗ್ರಹಿಸಿದ್ದಾರೆ. ಬಲಿಷ್ಠ ಕಾನೂನೂ ರೂಪಿಸಿ ಕನ್ನಡಿಗರಿಗೆ ಉದ್ಯೋಗ ಮೀಸಲು ನೀಡಬೇಕು, ಖಾಸಗಿ ಸಂಸ್ಥೆಗಳ C ಮತ್ತು D ದರ್ಜೆ ಹುದ್ದೆಗಳಲ್ಲಿ ಶೇ.100ರಷ್ಟು ಕನ್ನಡಿಗರಿಗೆ ಕೊಡ್ಬೇಕು ಎಂದು ಕರವೇ ಪಟ್ಟು ಹಿಡಿಯಲಿದೆ.
ಅಷ್ಟೆ ಅಲ್ಲದೆ ಖಾಸಗಿ ಸಂಸ್ಥೆಗಳ ಇತರೆ ಹುದ್ದೆಯಲ್ಲಿ ಶೇ.80ರಷ್ಟನ್ನು ಕನ್ನಡಿಗರಿಗೆ ಮೀಸಲಿಡಬೇಕು, ರಾಜ್ಯ ಸರ್ಕಾರಿ ಸಂಸ್ಥೆ, ಸಾರ್ವಜನಿಕ ವಲಯದಲ್ಲಿ ಶೇ.100ರಷ್ಟು ಮೀಸಲು ಕೊಡ್ಬೇಕು,
ನಿಯಮ ಪಾಲಿಸದ ಸಂಸ್ಥೆಗಳ ಲೈಸೆನ್ಸ್ ರದ್ದು ಮಾಡುವಂತೆ ನಾರಾಯಣಗೌಡರು ಆಗ್ರಹಿಸಿದ್ದಾರೆ.
ಕರವೇ ಬೇಡಿಕೆಗಳೇನು..?
- ಬಲಿಷ್ಠ ಕಾನೂನೂ ರೂಪಿಸಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ನೀಡ್ಬೇಕು
- ಖಾಸಗಿ ಸಂಸ್ಥೆಗಳ C ಮತ್ತು D ದರ್ಜೆ ಹುದ್ದೆ ಶೇ.100ರಷ್ಟು ಕನ್ನಡಿಗರಿಗೆ ಕೊಡಿ
- ಖಾಸಗಿ ಸಂಸ್ಥೆಗಳ ಇತರೆ ಹುದ್ದೆಯಲ್ಲಿ ಶೇ.80ರಷ್ಟು ಕನ್ನಡಿಗರಿಗೆ ಮೀಸಲಿಡಬೇಕು
- 14 ವರ್ಷ ರಾಜ್ಯದಲ್ಲಿದ್ರೆ ಕನ್ನಡಿಗರೆಂದು ಪರಿಗಣಿಸುವ ನಿಯಮ ಜಾರಿ ಆಗ್ಬೇಕು
- ಕನ್ನಡ ಪರೀಕ್ಷೆ ನಡೆಸಿ ಉತ್ತೀರ್ಣರಾದ್ರೆ ಮಾತ್ರ ಕನ್ನಡಿಗರೆಂದು ಪರಿಗಣಿಸಬೇಕು
- ನಿಯಮ ಪಾಲಿಸದ ಸಂಸ್ಥೆಗಳ ಲೈಸೆನ್ಸ್ ರದ್ದು ಮಾಡ್ಬೇಕು
- ಸರ್ಕಾರ ನೀಡಿರುವ ಭೂಮಿ, ಸವಲತ್ತು ವಾಪಸ್ ಪಡೆದು ಕ್ರಿಮಿನಲ್ ಕೇಸ್ ಹಾಕ್ಬೇಕು
- ರಾಜ್ಯ ಸರ್ಕಾರಿ ಸಂಸ್ಥೆ ಮತ್ತು ಸಾರ್ವಜನಿಕ ವಲಯದಲ್ಲಿ 100%ಕನ್ನಡಿಗರಿಗೆ ಮೀಸಲಾತಿ
- ಕೇಂದ್ರ ಸರ್ಕಾರದ ಇಲಾಖೆಗಳ ಗ್ರೂಪ್ ಸಿ ಹಾಗೂ ಡಿ ಹುದ್ದೆ ಕನ್ನಡಿಗರಿಗೇ ಕೊಡ್ಬೇಕು
- ಕೇಂದ್ರದ ಇಲಾಖೆಗಳಲ್ಲಿ ಗ್ರೂಪ್ ಸಿ,ಡಿ ಹೊರತಾದ ಹುದ್ದೆಗಳಲ್ಲಿ ಶೇ.90 ಮೀಸಲಿಡಿ
- ಕನ್ನಡಿಗರಿಗೆ ಮೀಸಲಾತಿ ಕಲ್ಪಿಸದ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ನೀತಿ ರೂಪಿಸಿ
- ಈ ಕಾನೂನು ಜಾರಿ ಮಾಡಲು ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಅಧಿಕಾರ ನೀಡ್ಬೇಕು
ಇದನ್ನೂ ಓದಿ : ಸದ್ದಿಲ್ಲದೇ ಮೊದಲ ಹಂತದ ಶೂಟಿಂಗ್ ಮುಗಿಸಿದ ‘ಹೇ ಪ್ರಭು’ ಚಿತ್ರ..!