Download Our App

Follow us

Home » ಸಿನಿಮಾ » ಸದ್ದಿಲ್ಲದೇ ಮೊದಲ ಹಂತದ ಶೂಟಿಂಗ್ ಮುಗಿಸಿದ ‘ಹೇ ಪ್ರಭು’ ಚಿತ್ರ..!

ಸದ್ದಿಲ್ಲದೇ ಮೊದಲ ಹಂತದ ಶೂಟಿಂಗ್ ಮುಗಿಸಿದ ‘ಹೇ ಪ್ರಭು’ ಚಿತ್ರ..!

ನಿರ್ದೇಶಕ ವೆಂಕಟ್ ಭಾರದ್ವಾಜ್​​ರವರು ವಿನೂತನ ಶೀರ್ಷಿಕೆ ಮತ್ತು ವಿಭಿನ್ನ ಪ್ರಯೋಗಗಳಿಗೆ ಹೆಸರಾಗಿದ್ದು, ಇವರ 13ನೇ ಹೊಸ ಚಿತ್ರ “ಹೇ ಪ್ರಭು” ಸದ್ದಿಲ್ಲದೆ ಮೊದಲ ಹಂತದ ಶೂಟಿಂಗ್ ಮುಗಿಸಿದೆ. “ಹೇ ಪ್ರಭು “, ಈ ಹೆಸರು ಕೇಳಿದ ತಕ್ಷಣ ದೇವರು ಇರಬಹುದಾ ಅಥವಾ “ಪ್ರಭು” ಅಂದರೇ ನಮ್ಮ ನಾಡ ಪ್ರಭು ಕೆಂಪೇಗೌಡರಿರಬಹುದಾ ಎಂಬ ಕುತೂಹಲ ಮೂಡಿಸುತ್ತದೆ. ಸದ್ಯಕ್ಕೆ ಚಿತ್ರ ತಂಡ ಶೀರ್ಷಿಕೆ ವಿನ್ಯಾಸ (ಟೈಟಲ್ ಲೋಗೋ) ಅನಾವರಣಗೊಳಿಸಿದ್ದು, ಇದರಲ್ಲಿ ಕೆಂಪೇಗೌಡರ ಚಿತ್ರವಿರುವುದು ಸ್ವಲ್ಪ ಕುತೂಹಲ ಹುಟ್ಟಿಸಿದೆ.

ಇನ್ನು 5 ದಿನಗಳ ಶೂಟಿಂಗ್ ಮುಗಿದರೆ ಚಿತ್ರಕರಣ ಮುಕ್ತಾಯವಾಗುತ್ತದೆ ಎಂದು ತಂಡ ಹೇಳಿಕೊಂಡಿದೆ. ಜೊತೆಜೊತೆಯಾಗಿ ಸಂಕಲನ ಕಾರ್ಯಕೂಡ ಪ್ರಗತಿಯಲ್ಲಿದ್ದು, ನಿರ್ದೇಶಕರು ಮೊದಲ ಪ್ರತಿಯನ್ನು ಶೀಘ್ರದಲ್ಲಿ ತರುವುದಕ್ಕೆ ಮುಂದಾಗಿದ್ದಾರೆ.

ಪ್ರಮೋದ್ ಭಾರತೀಯ ಛಾಯಾಗ್ರಹಣ, ಡ್ಯಾನ್ನಿ ಆಂಡರ್ಸನ್, ಸಂಗೀತ, ಚಂದನ್ ಪಿ, ಶಮೀಕ್ ಭಾರದ್ವಾಜ್ ಮತ್ತು ಲಾರೆನ್ಸ್ ಪ್ರೀತಮ್ ತಾಂತ್ರಿಕ ಕೆಲಸದಲ್ಲಿ ಕಾರ್ಯವಹಿಸುತ್ತಿದ್ದಾರೆ. ಮಹೇಶ್ ಮತ್ತು ಪ್ರವೀಣ್ ರವರ ಸಂಭಾಷಣೆ, ಅರಸು ಅಂತಾರೆ ಮತ್ತು ಮನೋಜ್ ರಾವ್ ರವರ ಸಾಹಿತ್ಯ ಈ ಚಿತ್ರಕ್ಕಿದೆ. 24 Reels ಮತ್ತು Amrutha Film Center ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದು, ಕಥೆ ಚಿತ್ರಕಥೆ ವೆಂಕಟ್ ಭಾರದ್ವಾಜ್​​ರದ್ದಾಗಿದೆ.

ತಮಿಳಿನ ಖ್ಯಾತ ಸಂಗೀತ ನಿರ್ದೇಶಕ ಸ್ಯಾಮ್ಸನ್ ಜೈಪಾಲ್ ರವರ ಪುತ್ರ ಡ್ಯಾನ್ನಿ ಆಂಡರ್ಸನ್ ರವರನ್ನು ಚಿತ್ರ ರಂಗಕ್ಕೆ ಸಂಗೀತ ನಿರ್ದೇಶಕರಾಗಿ ಚಿತ್ರರಂಗಕ್ಕೆ ವೆಂಕಟ್ ಭಾರಾದ್ವಾಜ್ ಪರಿಚಯಿಸುತ್ತಿದ್ದಾರೆ. ತಾರಾಬಳಗದಲ್ಲಿ ಜಯ್, ಸೂರ್ಯ ರಾಜ್, ಲಕ್ಷ್ಮಣ್ ಶಿವಶಂಕರ್ (ಕೆಂಪಿರ್ವೇ ಖ್ಯಾತಿ), ಸಂಹಿತ ವಿನ್ಯಾಸ , ಗಜಾನನ ಹೆಗಡೆ , ನಿರಂಜನ್ ಪ್ರಸಾದ್, ಹರಿ ಧನಂಜಯ, ಪ್ರಮೋದ್ ರಾಜ್, ದಿಲೀಪ್ ದೇವ್, ನೇತ್ರ ಗೋಪಾಲ್, ಸುಚಿತ್ರ ದಿನೇಶ್, ಸಾಧನ ಭಟ್, ಮನೋಹರ್, ಶಶಿರ್ ರಾಜು, ಹಾಗೂ ಇತರರು ಈ ಸಿನಿಮಾದಲ್ಲಿ ನಟಿಸಿದ್ದಾರೆ.

ಶೀಘ್ರದಲ್ಲೇ ಚಿತ್ರತಂಡ “ಹೇ ಪ್ರಭು” ಸಿನಿಮಾದ ಫಸ್ಟ್ ಲುಕ್​​ನ್ನು ರಿಲೀಸ್ ಮಾಡಲಿದ್ದು, ಸದ್ಯಕ್ಕೆ ವೆಂಕಟ್ ಭಾರದ್ವಾಜ್ ರವರ ಹೈನ ಮತ್ತು ಆಹತ ಎರಡು ಚಿತ್ರ ಆಗಸ್ಟ್ ಮತ್ತು ಅಕ್ಟೋಬರ್ ತಿಂಗಳಿನಲ್ಲಿ ಬಿಡುಗಡೆಯಾಗಲಿದೆ.

ಇದನ್ನೂ ಓದಿ : ಕೊಲೆ ಆರೋಪಿ ದರ್ಶನ್​ಗೆ IT ಶಾಕ್ ​​​- 70 ಲಕ್ಷ ಹಣದ ತನಿಖೆಗಾಗಿ ಐಟಿಗೆ ಪತ್ರ ಬರೆದ ಕಾಮಾಕ್ಷಿಪಾಳ್ಯ ಪೊಲೀಸರು..!

Leave a Comment

DG Ad

RELATED LATEST NEWS

Top Headlines

ಮೈಸೂರು-ಬೆಂಗಳೂರು ಎಕ್ಸ್‌ಪ್ರೆಸ್‌ ವೇನಲ್ಲಿ ಡಿವೈಡರ್​​ಗೆ ಡಿಕ್ಕಿ ಹೊಡೆದ ಕಾರು – ತಾಯಿ, ಮಗ ಸ್ಥಳದಲ್ಲೇ ಸಾವು..!

ಮಂಡ್ಯ : ಮೈಸೂರು-ಬೆಂಗಳೂರು ಎಕ್ಸ್​ಪ್ರೆಸ್​ ವೇ ನಲ್ಲಿ ಭೀಕರ ರಸ್ತೆ ಅಪಘಾತಕ್ಕೆ ತಾಯಿ ಮಗ ಬಲಿಯಾಗಿರುವ ಘಟನೆ ನಡೆದಿದೆ. ರುದ್ರಾಕ್ಷಿಪುರ ಗ್ರಾಮದ ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ಕಾರಿನಲ್ಲಿ

Live Cricket

Add Your Heading Text Here