ಬೆಂಗಳೂರು : ಬೆಂಗಳೂರಿನ ಚಿನ್ನಸ್ವಾಮಿಯಲ್ಲಿ ನಡೆಯಲಿರುವ RCB vs CSK ಪಂದ್ಯದ IPL ಟಿಕೆಟ್ ಪಡೆಯಲು ಹೋಗಿ ವಂಚನೆಗೊಳಗಾಗಿ ಟೆಕ್ಕಿಯೊಬ್ಬರು 1.46 ಲಕ್ಷ ರೂ. ಕಳೆದುಕೊಂಡಿದ್ದಾರೆ. ಈ ಸಂಬಂಧ ಮಹದೇವಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಟೆಕ್ಕಿ ಐಪಿಎಲ್ ಟಿಕೆಟ್ಗೆ ಸಂಬಂಧಿಸಿದಂತೆ ಇನ್ಸ್ಟಾಗ್ರಾಮ್ನಲ್ಲಿ ಹಾಕಲಾಗಿದ್ದ ಒಂದು ಪೋಸ್ಟ್ ಅನ್ನು ನೋಡಿದ್ದಾರೆ. ಆ ಪೋಸ್ಟ್ ನೋಡಿ ಆಮಿಷಕ್ಕೆ ಒಳಗಾದ ಅವರು, ಪೋಸ್ಟ್ ಹಾಕಿದ ವಂಚಕನನ್ನು ಸಂಪರ್ಕಿಸಿದ್ದಾರೆ. ವಂಚಕ ಪಂದ್ಯದ ಟಿಕೆಟ್ಗಳು, ಊಟದ ಕೂಪನ್ಗಳು ಮತ್ತು IPL ಸೌಲಭ್ಯಗಳನ್ನು ಹೊಂದಿರುವ ಟಿಕೆಟ್ಗಳನ್ನು ನೀಡುವುದಾಗಿ ಆಮಿಷ ಒಡ್ಡಿದ್ದಾನೆ. ಇದನ್ನು ನಂಬಿದ ಟೆಕ್ಕಿ, ತಾನು ಮತ್ತು ತನ್ನ ತಾಯಿಯ ಬ್ಯಾಂಕ್ ಖಾತೆಗಳಿಂದ ಹಣವನ್ನು ಪಾವತಿಸಿದ್ದಾರೆ.
ಟಿಕೆಟ್ ಕೌಂಟರ್ ಮೇಲ್ವಿಚಾರಕ ಎಂದು ನಂಬಿಸಿ ವಂಚನೆ ಮಾಡಿದ್ದು, ವಂಚಕನು ಕೂಪನ್ಗಳು ಮತ್ತು ಭದ್ರತಾ ಠೇವಣಿ ಹೆಸರಿನಲ್ಲಿ ಹೆಚ್ಚಿನ ಹಣವನ್ನು ವಸೂಲಿ ಮಾಡಿದ್ದಾನೆ. ಬೇರೆ ಬೇರೆ ಖಾತೆಗಳಿಗೆ ಹಂತ ಹಂತವಾಗಿ ಒಟ್ಟು 1.46 ಲಕ್ಷ ರೂ. ಹಣವನ್ನು ಟೆಕ್ಕಿಯಿಂದ ವರ್ಗಾಯಿಸಿಕೊಂಡಿದ್ದಾನೆ.
ನಂತರ ತಾನು ವಂಚನೆಗೆ ಒಳಗಾಗಿರುವುದನ್ನು ಅರಿತ ಟೆಕ್ಕಿ, ತಕ್ಷಣವೇ ಸೈಬರ್ ಕಂಟ್ರೋಲ್ಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ನಂತರ ಮಹದೇವಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಇದನ್ನೂ ಓದಿ : http://RCB vs CSK ಹೈವೋಲ್ಟೇಜ್ ಕದನ – ಕ್ರಿಕೆಟ್ ಫ್ಯಾನ್ಸ್ಗೆ BMTC, ಮೆಟ್ರೋದಿಂದ ಭರ್ಜರಿ ಗಿಫ್ಟ್!








