ಚಾಮರಾಜನಗರ : ನನ್ನ ಸಾವಿಗೆ ಪೊಲೀಸರೆ ಕಾರಣ ಎಂದು ಆರೋಪಿಸಿ ಯುವಕನೋರ್ವ ವಿಡಿಯೋ ಹರಿಬಿಟ್ಟಿದ್ದಾನೆ. ಚಾಮರಾಜನಗರ ಸೆನ್ DySP ಪವನ್ ಕುಮಾರ್ ವಿರುದ್ಧ ಬೆಂಗಳೂರು ಮೂಲದ ಬ್ಯಾಡ್ಮಿಂಟನ್ ಕೋಚ್ ಗಂಭೀರ ಆರೋಪ ಮಾಡಿದ್ದಾನೆ.

ನಾನು ಅವರಿಗೆ ಫ್ರೀ ಕೋಚಿಂಗ್ ಕೊಟ್ಟಿದ್ದೇನೆ, ಅವರ ಬಳಿ ಹಣ ಕೂಡ ಪಡೆದಿದ್ದೇನೆ. ಇದೀಗ ನನಗೆ ತುಂಬಾ ಕಿರುಕುಳ ಕೊಡ್ತಿದ್ದಾರೆ, ನಾನು ಸತ್ತ ಮೇಲೆ ನಮ್ಮ ತಾಯಿನಾ ನೀವೆ ನೊಡ್ಕೊಳ್ಳಿ. ನನ್ನ ಬಿಟ್ಟರೆ ಯಾರೂ ನೋಡಿಕೊಳ್ಳುವವರು ಇಲ್ಲ, ಮುಂದಿನ ಜನ್ಮದಲ್ಲಿ ನಾನು ನಿಮ್ಮ ಸಾಲ ತಿರೀಸ್ತಿನಿ ಎಂದು ಯುವಕ ಹೇಳಿದ್ದಾನೆ.

ನಮ್ಮ ಅತ್ತೆ ಮನೆಗೆ ಹೇಳ್ತೀನಿ ಅಂತೀರಾ, ಇದೆಲ್ಲಾ ಬೇಡ ಸರ್. ನಾನು ಸತ್ತರೆ ಹೆಂಡ್ತಿ ಮಕ್ಕಳನ್ನು ನೀವು ಸಾಕುತ್ತಿರಾ, 23 ಜನರ ಪೊಲೀಸರಿಗೆ ಒಂದು ರೂಪಾಯಿ ಪಡೆಯದೆ ಕೋಚಿಂಗ್ ಕೊಟ್ಟಿದ್ದೇನೆ ಎಂದು ಬೆಂಗಳೂರು ಮೂಲದ ಬ್ಯಾಡ್ಮಿಂಟನ್ ಕೋಚ್ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹರಿಬಿಟ್ಟಿದ್ದಾನೆ.
ಇದನ್ನೂ ಓದಿ : ಸ್ವಂತ ಮಗನನ್ನೇ ಬಳಸಿಕೊಂಡು ಮ್ಯಾರೇಜ್ ದೋಖಾ ಬ್ಯುಸಿನೆಸ್ – ಹುಮೇರಾ, ಅಕ್ಬರ್ ದಂಪತಿ ವಿರುದ್ಧ FIR!







