ದರ್ಶನ್ ಜೈಲು ಸೇರಿ 365 ದಿನಗಳು ಕಂಪ್ಲೀಟ್ – ಬೇಲ್ ಯಾವಾಗ?

ರೇಣುಕಾಸ್ವಾಮಿ ಕೊಲೆ ಆರೋಪಿ ದರ್ಶನ್ ಎರಡನೇ ಬಾರಿ ಜೈಲು ಸೇರಿ ಬಹುತೇಕ ಎಂಟು ತಿಂಗಳು ಕಳೆಯುತ್ತಿವೆ. ನಟ ದರ್ಶನ್ ಇನ್ನೊಂದು ದಿನ ಕಳೆದರೆ ಒಂದು ವರ್ಷ ಜೈಲು ಶಿಕ್ಷೆ ಅನುಭವಿಸಿದಂತಾಗುತ್ತದೆ. 

ಕೊಲೆ ಕೇಸಲ್ಲಿ ದರ್ಶನ್ ಮೊದಲ ಬಾರಿ 2024 ಜೂನ್ 11 ರಂದು ಅರೆಸ್ಟ್ ಆಗಿದ್ದ.  2024 ಅಕ್ಟೋಬರ್ 30ರ ತನಕ ಅಂದರೆ 131 ದಿನಗಳ ಕಾಲ ಜೈಲು ವಾಸ ಅನುಭವಿಸಿದ್ದರು.

ನಂತರ ದರ್ಶನ್ ಸೇರಿ ಉಳಿದ ಎಲ್ಲಾ ಆರೋಪಿಗಳು ಜಾಮೀನು ಪಡೆದು ಹೊರಬಂದಿದ್ದರು. ಆ ಬಳಿಕ ಸರ್ಕಾರದ ಮಟ್ಟದಲ್ಲಿ ಚರ್ಚೆ ಮಾಡಿದ ಪೊಲೀಸರು ಗೃಹ ಇಲಾಖೆಯ ಅನುಮತಿ ಪಡೆದು ಸುಪ್ರೀಂನಲ್ಲಿ ಕೆಳ ನ್ಯಾಯಾಲಯ ನೀಡಿದ ಜಾಮೀನು ರದ್ದು ಮಾಡುವಂತೆ ಸೂಕ್ತ ಸಾಕ್ಷ್ಯಾಧಾರಗಳನ್ನು ನ್ಯಾಯಾಲಯಕ್ಕೆ ಸಲ್ಲಿಕೆ ಮಾಡಿದ್ದರು.

ಪೊಲೀಸರ ತನಿಖೆಯ ವೇಳೆ ಲಭ್ಯವಾಗಿದ್ದ ಎಲ್ಲಾ ಸಾಕ್ಷ್ಯಾಧಾರಗಳನ್ನು ಪರಿಶೀಲನೆ ನಡೆಸಿದ ನ್ಯಾಯಾಲಯ ಆರೋಪಿ ದರ್ಶನ್ ಸೇರಿದಂತೆ ಏಳು ಜನ ಆರೋಪಿಗಳ ಜಾಮೀನು ರದ್ದು ಮಾಡಿ ಬಂಧನಕ್ಕೆ ಸೂಚಿಸಿತ್ತು. ಸುಪ್ರೀಂ ಆದೇಶದಂತೆ ಪೊಲೀಸರು ಜಾಮೀನು ಪಡೆದು ಹೊರಗಿದ್ದ ನಟ ದರ್ಶನನ್ನು 14 ಆಗಸ್ಟ್ 2025ರಂದು ಬಂಧನ ಮಾಡಿ ಪರಪ್ಪನ ಅಗ್ರಹಾರಕ್ಕೆ ಬಿಡಲಾಗಿತ್ತು.

ನಟ ದರ್ಶನ್ ಎರಡನೇ ಬಾರಿ ಬಂಧನಕ್ಕೆ ಒಳಗಾಗಿ ಬಹುತೇಕ 226 ದಿನಗಳು ಕಳೆಯುತ್ತಿವೆ. ಮೊದಲ ಬಾರಿ ಮತ್ತು ಎರಡನೇ ಬಾರಿ ಬಂಧನವಾಗಿದ್ದು ಸೇರಿ ಒಂದು ವರ್ಷ ಅಂದರೆ 365 ದಿನಗಳನ್ನು ಕಳೆಯಲಿದ್ದಾರೆ.

ಇದನ್ನೂ ಓದಿ : ಚಿನ್ನ-ಬೆಳ್ಳಿ ದರ ಮತ್ತೆ ಏರಿಕೆ – ಇವತ್ತಿನ ರೇಟ್ ಎಷ್ಟು?

Btv Kannada
Author: Btv Kannada

Leave a Comment

Read More