“ನಾವೀಗ ಇಬ್ಬರಲ್ಲ, ಮೂವರು” – ಮದುವೆಯಾಗಿ ಒಂದೇ ತಿಂಗಳಿಗೆ ಗುಡ್​ನ್ಯೂಸ್​ ಕೊಟ್ರಾ ರಶ್ಮಿಕಾ?

ನಟಿ ರಶ್ಮಿಕಾ ಮಂದಣ್ಣ – ವಿಜಯ್ ದೇವರಕೊಂಡ ಅವರು ಫೆಬ್ರವರಿ 26ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಇತ್ತೀಚೆಗೆ ಜೋಡಿ ಹನಿಮೂನ್‌ಗಾಗಿ ಥಾಯ್ಲೆಂಡ್‌ಗೆ ಹೋಗಿ ಬಂದಿದ್ದರು. ಇದೀಗ ಅವರು “ನಾವು ಈಗ ಇಬ್ಬರಲ್ಲ, ಮೂವರು” ಎಂದು ಹೇಳಿದ್ದು, ಈ ಹೇಳಿಕೆ ಈಗ ಭಾರೀ ವೈರಲ್‌ ಆಗ್ತಿದೆ.

ರಶ್ಮಿಕಾ ಮಂದಣ್ಣ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಒಂದು ವಿಡಿಯೋ ಹಂಚಿಕೊಂಡು, “ಈಗ ನಾನು, ನೀನು, ನಾವು ಅಷ್ಟೇ, ನಿನ್ನ ಸ್ನೇಹಿತರು” ಎಂದು ಹೇಳುವ ಫನ್‌ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಇದನ್ನು ನೋಡಿದ ಅನೇಕರು, ಇವರಿಬ್ಬರು ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರಾ? ಎಂದು ಕಾಮೆಂಟ್‌ ಮಾಡುತ್ತಿದ್ದಾರೆ. ಇನ್ನೂ ಕೆಲವರು ಕ್ಯೂಟ್‌ ಎಂದೆಲ್ಲ ಕಾಮೆಂಟ್‌ ಮಾಡುತ್ತಿದ್ದಾರೆ.

ರಶ್ಮಿಕಾ ಹಂಚಿಕೊಂಡಿರುವ ವಿಡಿಯೋ ಅಸಲಿ ಸತ್ಯವೇನೆಂದರೆ ರಶ್ಮಿಕಾ ಅವರು ಸೂರ್ಯಕಾಂತಿಯನ್ನು ತನ್ನ ಆಪ್ತ ಸ್ನೇಹಿತೆ ಎಂದು ಪರಿಗಣಿಸುತ್ತಾರೆ. ಅದಕ್ಕಾಗಿ ಅವರು ಇನ್‌ಸ್ಟಾಗ್ರಾಮ್‌ನಲ್ಲಿ (ರಶ್ಮಿಕಾರು) ವಿಶೇಷ ಖಾತೆಯನ್ನು ಸಹ ರಚಿಸಿದ್ದಾರೆ.

ಅದರಲ್ಲಿ, ಅವರು ಹೂವಿನೊಂದಿಗಿನ ತಮ್ಮ ಸಿಹಿ ಕ್ಷಣಗಳು ಮತ್ತು ಕಥೆಗಳನ್ನು ಅನಿಮೇಟೆಡ್ ಫೋಟೋಗಳು ಮತ್ತು ವಿಡಿಯೋಗಳ ಮೂಲಕ ಹಂಚಿಕೊಳ್ಳುತ್ತಾರೆ. ಈಗ, ಅವರು ವಿಜಯ್ ಅವರನ್ನು ಈ ಅನಿಮೇಷನ್ ಜಗತ್ತಿಗೆ ಆಹ್ವಾನಿಸುವ ಈ ಪೋಸ್ಟ್ ಮಾಡಿದ್ದಾರೆ. ಹೀಗಾಗಿ ನಾವೀಗ ಮೂವರು ಎಂದಿದ್ದಾರೆ. 

ಇದನ್ನೂ ಓದಿ : ‘ಮೃತ್ಯುದೇವತೆ’ ಚಿತ್ರದ ಟ್ರೇಲರ್ ರಿಲೀಸ್ – ಇದು ಸಿಡಿದೆದ್ದ ಹೆಣ್ಣಿನ ಕಥೆ!

Btv Kannada
Author: Btv Kannada

Leave a Comment

Read More