ನ್ಯೂಯಾರ್ಕ್ : ನಿನ್ನೆ ನಡೆದ ಬಹುನಿರೀಕ್ಷಿತ 2024ರ ಐಸಿಸಿ ಮೆಗಾ ಟೂರ್ನಿ ಟಿ20 ವಿಶ್ವಕಪ್ ಹೈವೋಲ್ಟೇಜ್ ಪಂದ್ಯದಲ್ಲಿ ಯುಎಸ್ಎ ವಿರುದ್ಧ ಭಾರತ ಗೆಲುವು ಸಾಧಿಸಿದ್ದು, ಈ ಮೂಲಕ ಸೂಪರ್-8 ಹಂತಕ್ಕೆ ಅರ್ಹತೆ ಪಡೆದಿದೆ.
ನ್ಯೂಯಾರ್ಕ್ ನಸ್ಸೌ ಕೌಂಟಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಯುಎಸ್ಎ ತಂಡ 20 ಓವರ್ನಲ್ಲಿ 8 ವಿಕೆಟ್ ನಷ್ಟಕ್ಕೆ 110 ರನ್ ಗಳಿಸಿದ್ರು. ಈ ಮೂಲಕ ಭಾರತ ತಂಡಕ್ಕೆ 111 ರನ್ಗಳ ಗುರಿ ನೀಡಿತ್ತು.
ಯುಎಸ್ಎ ನೀಡಿದ ಸಾಧಾರಣ ಮೊತ್ತದ ಗುರಿ ಬೆನ್ನತ್ತಿದ ಭಾರತ ತಂಡ ಆರಂಭದಲ್ಲೇ ವಿರಾಟ್ ಕೊಹ್ಲಿ ಮತ್ತು ಕ್ಯಾಪ್ಟನ್ ರೋಹಿತ್ ಶರ್ಮಾ ವಿಕೆಟ್ ಕಳೆದುಕೊಂಡಿತ್ತು. ಬ್ಯಾಕ್ ಟು ಬ್ಯಾಕ್ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಭಾರತದ ಪರ ಪಂತ್ ಕೆಲ ಹೊತ್ತು ಕ್ರೀಸ್ನಲ್ಲಿ ನಿಂತು 18 ರನ್ ಕಲೆ ಹಾಕಿದ್ರು.
ಇನ್ನು, ಬಳಿಕ ಕೊನೆವರೆಗೂ ಕ್ರೀಸ್ನಲ್ಲೇ ನಿಂತು ಆಡಿದ ಸೂರ್ಯಕುಮಾರ್ ಯಾದವ್ ಮತ್ತು ಶಿವಂ ದುಬೆ ಉತ್ತಮ ಜೊತೆಯಾಟ ಆಡಿದ್ರು. ಸೂರ್ಯಕುಮಾರ್ ಯಾದವ್ 49 ಬಾಲ್ನಲ್ಲಿ 2 ಭರ್ಜರಿ ಸಿಕ್ಸರ್, 2 ಫೋರ್ ಸಮೇತ 50 ರನ್ ಗಳಿಸಿದ್ರು. ಇವರಿಗೆ ಸಾಥ್ ನೀಡಿದ ಶಿವಂ ದುಬೆ 1 ಫೋರ್, 1 ಸಿಕ್ಸರ್ ಸಮೇತ 31 ರನ್ ಚಚ್ಚಿ ಗೆಲುವಿನಲ್ಲಿ ನಿರ್ಣಾಯಕ ಪಾತ್ರವಹಿಸಿದ್ರು. ಭಾರತ 18.2 ಓವರ್ಗಳಲ್ಲಿ 3 ವಿಕೆಟ್ ನಷ್ಟಕ್ಕೆ 111 ರನ್ ಕಲೆ ಹಾಕಿ ಗೆದ್ದು ಬೀಗಿತು.
ಇದನ್ನೂ ಓದಿ : ರಜನಿ ಎಕ್ಸ್ಪ್ರೆಸ್ ಯೂಟ್ಯೂಬ್ ಚಾನೆಲ್ ವಿರುದ್ಧ ಆಕ್ರೋಶ ಹೊರಹಾಕಿದ ದರ್ಶನ್ ಅಭಿಮಾನಿ ಬಳಗದ ಜಿಲ್ಲಾಧ್ಯಕ್ಷ..!