ಬೆಂಗಳೂರು : ಮಗನ ಸೋಲಿನ ಬೇಸರಲ್ಲಿದ್ದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಬಳಿ ಸಿಎಂ ಸಿದ್ದರಾಮಯ್ಯ ಕ್ಷಮೆ ಕೇಳಿದ್ದಾರೆ. ನಿನ್ನೆ ಸಿಎಂ ಭೇಟಿಗೆ ಕಾವೇರಿಗೆ ಬೆಳಗಾವಿ ಮುಖಂಡರು ಆಗಮಿಸಿದ್ದರು. ಬೆಳಗಾವಿ ಭಾಗದ ಸಚಿವರಾದ ಲಕ್ಷ್ಮಿ ಹೆಬ್ಬಾಳ್ಕರ್ ಹಾಗೂ ಸತೀಶ್ ಜಾರಕಿಹೊಳಿ ಮತ್ತು ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಬಂದಿದ್ದರು.
ಈ ವೇಳೆ ಲಕ್ಷ್ಮಿ ಹೆಬ್ಬಾಳ್ಕರ್ರನ್ನು ನೋಡಿ ಸಿಎಂ ಸಿದ್ದರಾಮಯ್ಯ ಸಾರಿ ಅಮ್ಮ ಎಂದಿದ್ದಾರೆ. ಸಿಎಂ ಸ್ವಾರಿ ಎಂದ ಕೂಡಲೇ ತುಂಬಾ ಭಾವುಕರಾಗಿ ಲಕ್ಷ್ಮಿ ಹೆಬ್ಬಾಳ್ಕರ್ ಮೌನಕ್ಕೆ ಶರಣಾದರು. ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಹೆಬ್ಬಾಳ್ಕರ್ ಪುತ್ರ ಮೃಣಾಲ್ ಅವರು 1,78,437 ಮತಗಳ ಅಂತರದಿಂದ ಸೋತಿದ್ದಾರೆ. ಬಿಜೆಪಿಯ ಜಗದೀಶ್ ಶೆಟ್ಟರ್ ಅವರಿಗೆ 7,62,029 ಮತಗಳು ಬಿದ್ದರೆ ಮೃಣಾಲ್ ಅವರಿಗೆ 5,83,592 ಮತಗಳು ಬಿದ್ದಿದ್ದವು. ಇನ್ನು ಚಿಕ್ಕೋಡಿಯ ವಿನ್ನರ್ ಪ್ರಿಯಾಂಕಗೆ ಸಿಎಂ ಸಿದ್ದರಾಮಯ್ಯ ವಿಶ್ ಮಾಡಿದ್ದಾರೆ.
ಇದನ್ನೂ ಓದಿ : ಇದು ಬಿಟಿವಿಯ ಬಿಗ್ ಇಂಪ್ಯಾಕ್ಟ್ : ಇಲಾಖೆಯ ಪರಿಶೀಲನೆಯಲ್ಲೇ ಗುಡ್ವಿಲ್ ಕಾಲೇಜ್ನ ಮಹಾವಂಚನೆ ಬಯಲು..!