ಬೆಂಗಳೂರು : ವಿಸಾ ಮಾಡಿ ಕೊಡ್ತೀವಿ ಎಂದು ವಂಚನೆ ಮಾಡ್ತಿದ್ದ ಕಿಲಾಡಿ ದಂಪತಿಗಳನ್ನು ಸೌತ್ ಈಸ್ಟ್ ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರು ಮೂಲದ ಸಕ್ಲೇನ್ ಸುಲ್ತಾನ್, ನಿಖಾತ್ ಸುಲ್ತಾನ ಬಂಧಿತ ಆರೋಪಿಗಳು.
ಈ ಕಿಲಾಡಿ ದಂಪತಿಗಳು ಪೇಸ್ಬುಕ್, ಇನ್ಸ್ಟಾಗ್ರಾಮ್ ಪೇಜ್ನಲ್ಲಿ ವಿಸಾ ಮಾಡಿಕೊಡ್ತೀನಿ ಎಂದು ಜಾಹೀರಾತು ನೀಡಿ ವಂಚನೆ ಮಾಡುತ್ತಿದ್ದರು. ಕುದುರೆ ಓಡಿಸುವ ಜಾಕಿಗಳನ್ನೇ ಟಾರ್ಗೆಟ್ ಮಾಡಿತ್ತಿದ್ದ ದಂಪತಿಗಳು, ವಿದೇಶದಲ್ಲಿ ಕುದುರೆ ಓಡಿಸುವ ಜಾಕಿಗಳಿಗೆ ಹೆಚ್ಚು ಬೇಡಿಕೆ ಇದೆ ಎಂದು ನಂಬಿಸಿ ವಂಚನೆ ಎಸಗುತ್ತಿದ್ದರು.
ಇದೇ ರೀತಿ ನಂಬಿಸಿ ಸುಮಾರು 53 ಜನ್ರಿಗೆ 2 ಕೋಟಿಗೂ ಅಧಿಕ ರೂ. ಮೋಸ ಮಾಡಿದ್ದರು. ಸದ್ಯ ಈ ಕಿಲಾಡಿ ದಂಪತಿಗಳನ್ನು ಪೊಲೀಸರು ಬಂಧಿಸಿದ್ದು, ಇವರಿಂದ 2 ಬೈಕ್, 2 ಕಾರು 66 ಲಕ್ಷ ನಗದು ಹಾಗೂ ಕೆಲ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.
Author: Btv Kannada
Post Views: 273









