ಕೆ.ಎನ್.ರಾಜಣ್ಣ ನಡೆಗೆ ಹೈಕಮಾಂಡ್​ ಆಕ್ರೋಶ.. ಖಡಕ್​​ ವಾರ್ನಿಂಗ್ ಕೊಟ್ಟ ಮಲ್ಲಿಕಾರ್ಜುನ ಖರ್ಗೆ!

ಬೆಂಗಳೂರು : ಸಿಎಂ ಬದಲಾವಣೆ ವಿಚಾರ, ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ವಿಚಾರವಾಗಿ ಯಾವುದೇ ಹೇಳಿಕೆಗಳನ್ನು ನೀಡಬೇಡಿ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಹೈಕಮಾಂಡ್ ನಾಯಕರು ರಾಜ್ಯ ಕಾಂಗ್ರೆಸ್ ನಾಯಕರಿಗೆ ಎಚ್ಚರಿಕೆ ನೀಡಿದ್ದಾರೆ. ಆದಾಗ್ಯೂ ಸಚಿವ ಕೆ.ಎನ್ ರಾಜಣ್ಣ ಮಾಧ್ಯಮಗಳ ಮುಂದೆ ಹೇಳಿಕೆಗಳನ್ನು ನೀಡುತ್ತಿದ್ದಾರೆ.

ಇದೀಗ ಡಿಸಿಎಂ ಡಿಕೆಶಿ ವಿರುದ್ಧ ಮಾತನಾಡ್ತಿರೋ ಕೆ.ಎನ್ ರಾಜಣ್ಣಗೆ ‘ಕೈ’ ಹೈಕಮಾಂಡ್‌ ಎಚ್ಚರಿಕೆ ಸಂದೇಶ ರವಾನೆ ಮಾಡಿದೆ ಎಂದು ತಿಳಿದುಬಂದಿದೆ. ಸಚಿವ ಕೆ.ಎನ್.ರಾಜಣ್ಣಗೆ ಕಾಂಗ್ರೆಸ್ ಹೈಕಮಾಂಡ್​ ಖಡಕ್​​ ವಾರ್ನಿಂಗ್​​ ಕೊಟ್ಟಿದ್ದು, ನಾಯಕರ ವಿರುದ್ಧ ಬಹಿರಂಗ ಹೇಳಿಕೆ‌ ನೀಡದಂತೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತೊಮ್ಮೆ ಸೂಚನೆ ನೀಡಿದ್ದಾರೆ.

ಪದೆ ಪದೇ ಸಚಿವ ಕೆ.ಎನ್. ರಾಜಣ್ಣ ಪಕ್ಷದ ಶಿಸ್ತಿನ ವಿರುದ್ಧ ಹೇಳಿಕೆ ನೀಡ್ತಿದ್ದು, ಡಿಸಿಎಂ ಡಿಕೆಶಿ ವಿರುದ್ಧ ಬಹಿರಂಗ ವಾಗ್ದಾಳಿ ನಡೆಸ್ತಿದ್ದಾರೆ. ಹೀಗಾಗಿ ರಾಜಣ್ಣ ನಡೆಯ ಬಗ್ಗೆ ಡಿಕೆಶಿ ಟೀಂ ತೀವ್ರ ಆಕ್ರೋಶ ಹೊರ ಹಾಕಿತ್ತು. ಅಷ್ಟೇ ಅಲ್ಲದೇ ಮೊನ್ನೆ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿಯಾಗಿ ಮಾಜಿ ಸಂಸದ ಡಿ.ಕೆ ಸುರೇಶ್ ಅವರು ಈ ಕುರಿತು ದೂರು ಕೊಟ್ಟಿದ್ರು. ಇದರ ಬೆನ್ನಲ್ಲೇ ಇದೀಗ ರಾಜಣ್ಣಗೆ ಎಐಸಿಸಿ ಅಧ್ಯಕ್ಷರು ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.

ಈಗಾಗಲೇ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಮೇಲೆ ಬಲವಾದ ಕಣ್ಣಿಟ್ಟಿರುವ ಸಚಿವ ಜಾರಕಿಹೊಳಿ, ಸಚಿವ ಕೆ.ಎನ್ ರಾಜಣ್ಣ, ಪೂರ್ಣ ಪ್ರಮಾಣದ ಅಧ್ಯಕ್ಷರ ನೇಮಕಕ್ಕೆ 6 ತಿಂಗಳಿಂದ ಪಟ್ಟು ಹಿಡಿದಿದ್ದಾರೆ. ಇದೆಲ್ಲದರ ಮಧ್ಯೆ ಕೆ.ಎನ್. ರಾಜಣ್ಣ ಯಾರ ಮಾತಿಗೂ ಬಗ್ಗುವಂತೆ ಕಾಣ್ತಿರಲಿಲ್ಲ. ಇದೀಗ ಹೈಕಮಾಂಡ್ ನಾಯಕರೇ ಮತ್ತೊಮ್ಮೆ ಕೆ.ಎನ್.ರಾಜಣ್ಣ ನೇರವಾಗಿ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ ಎಂದು ತಿಳದುಬಂದಿದೆ.

ಆದ್ರೆ ಸಚಿವ ಕೆ.ಎನ್.ರಾಜಣ್ಣ ಹೇಳಿಕೆಗಳು ಇದೇ ರೀತಿ ಮುಂದುವರಿದರೆ ಹೈಕಮಾಂಡ್ ಮುಂದೆ ಏನು ಕ್ರಮ ಕೈಗೊಳ್ಳುತ್ತೆ ಎಂಬುವುದು ಕುತೂಹಲದ ಪ್ರಶ್ನೆಯಾಗಿದೆ.

Btv Kannada
Author: Btv Kannada

Leave a Comment

Read More