ಗಿಲ್ ಅಬ್ಬರ, ಶಮಿ ಮ್ಯಾಜಿಕ್ – ಬಾಂಗ್ಲಾ ಮಣಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ಶುಭಾರಂಭ!

ದುಬೈ : ದುಬೈನಲ್ಲಿ ನಡೆದ 2025ರ ಚಾಂಪಿಯನ್ಸ್ ಟ್ರೋಫಿಯ 2ನೇ ಪಂದ್ಯದಲ್ಲಿ ಬಾಂಗ್ಲಾದೇಶದ ವಿರುದ್ಧ ಟೀಮ್​ ಇಂಡಿಯಾ ಗೆದ್ದು ಬೀಗಿದೆ. ಇನ್ನೂ 3 ಓವರ್​ 3 ಬಾಲ್​ ಬಾಕಿ ಇರುವಂತೆಯೇ ಭಾರತ 4 ವಿಕೆಟ್​ ನಷ್ಟಕ್ಕೆ 231 ರನ್​ ಕಲೆ ಹಾಕಿ 6 ವಿಕೆಟ್​ಗಳ ಅಮೋಘ ಗೆಲುವು ಸಾಧಿಸಿದೆ. ಈ ಮೂಲಕ ಟೂರ್ನಿಯಲ್ಲಿ ರೋಹಿತ್ ಪಡೆ ಶುಭಾರಂಭ ಮಾಡಿದೆ.

ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ ಬಾಂಗ್ಲಾ 49.4 ಓವರ್‌ಗಳಿಗೆ ಆಲೌಟ್‌ ಆಗಿ 228 ರನ್‌ ಗಳಿಸಿತು. ಬಾಂಗ್ಲಾ ನೀಡಿದ ಸಾಧಾರಣ ರನ್​ಗಳ ಗುರಿ ಬೆನ್ನತ್ತಿದ ಟೀಂ ಇಂಡಿಯಾ 46.3 ಓವರ್‌ಗಳಿಗೆ 4 ವಿಕೆಟ್‌ ನಷ್ಟಕ್ಕೆ ಗುರಿ ತಲುಪಿ ಗೆಲುವು ದಾಖಲಿಸಿದೆ.

ಭಾರತ ಪರ ಆರಂಭಿಕರಾಗಿ ಕಣಕ್ಕಿಳಿದ ರೋಹಿತ್‌ ಶರ್ಮಾ, ಶುಭಮನ್‌ ಗಿಲ್‌ ಜೋಡಿ ಉತ್ತಮ ಪ್ರದರ್ಶನ ನೀಡಿತು. ಶರ್ಮಾ 41 ರನ್‌ ಗಳಿಸಿ ಔಟಾದರು. ವಿರಾಟ್‌ ಕೊಹ್ಲಿ 22, ಶ್ರೇಯಸ್‌ ಅಯ್ಯರ್‌ 15 ರನ್‌ ಗಳಿಸಿದರು. ಗಿಲ್‌ ಅಬ್ಬರದ ಶತಕ ಸಿಡಿಸಿ (101 ರನ್‌, 9 ಫೋರ್‌, 2 ಸಿಕ್ಸರ್‌) ತಂಡವನ್ನು ಗೆಲುವಿನ ದಡ ಸೇರಿಸಿದರು. ಗಿಲ್‌ಗೆ ಕೆ.ಎಲ್‌.ರಾಹುಲ್‌ ಕೂಡ ಸಾಥ್‌ ನೀಡಿ 41 ರನ್‌ ಕಲೆ ಹಾಕಿದರು.

ಭಾರತದ ಬೌಲರ್‌ಗಳು ಬಾಂಗ್ಲಾ ಬ್ಯಾಟರ್‌ಗಳ ಬೆವರಿಳಿಸಿದ್ದು, ಟೀಮ್​ ಇಂಡಿಯಾ ಪರ ಮೊಹಮ್ಮದ್‌ ಶಮಿ ಮ್ಯಾಜಿಕ್ ಬೌಲಿಂಗ್​ನಿಂದ 5 ವಿಕೆಟ್‌ ಕಿತ್ತು ಮಿಂಚಿದರೆ, ಹರ್ಷಿತ್‌ ರಾಣಾ 3 ವಿಕೆಟ್‌ ಕಬಳಿಸಿ ಗಮನ ಸೆಳೆದರು. ಅಕ್ಷರ್‌ ಪಟೇಲ್‌ 2 ವಿಕೆಟ್‌ ಕಿತ್ತು ಬಾಂಗ್ಲಾ ವಿರುದ್ದ ಗೆಲುವಿಗೆ ಕಾರಣರಾದರು.

Btv Kannada
Author: Btv Kannada

Leave a Comment

Read More