ಬೆಂಗಳೂರು : ವೀಕೆಂಡ್ನಲ್ಲಿ ಕುಡಿದು ವಾಹನ ಚಲಾಯಿಸಿದವರಿಗೆ ಬಿಗ್ ಶಾಕ್ ಎದುರಾಗಿದೆ. ಡ್ರಂಕ್ & ಡ್ರೈವ್ಗೆ ಬ್ರೇಕ್ ಹಾಕಲು ಪೊಲೀಸರು ಸ್ಪೆಷಲ್ ಡ್ರೈವ್ ಮಾಡಿದ್ದಾರೆ. ತಡರಾತ್ರಿ ನಗರದಲ್ಲಿ 41 ಕಡೆಗಳಲ್ಲಿ ಚೆಕ್ ಪೋಸ್ಟ್ ಹಾಕಿ ತಪಾಸಣೆ ಮಾಡಿದ್ದಾರೆ.
ದಕ್ಷಿಣ ವಿಭಾಗ ಸಂಚಾರಿ ಡಿಸಿಪಿ ಶಿವಪ್ರಕಾಶ್ ದೇವರಾಜ್ ನೇತೃತ್ವದಲ್ಲಿ ತಪಾಸಣೆ ಮಾಡಿದ್ದು, 41 ಚೆಕ್ ಪಾಯಿಂಟ್ಗಳಲ್ಲಿ ಸುಮಾರು 150ಕ್ಕೂ ಹೆಚ್ಚು ಕೇಸ್ ದಾಖಲಾಗಿದೆ. ಪಬ್ಗಳು ಹೆಚ್ಚಾಗಿರೋ ಕಡೆಗಳಲ್ಲಿ ಚೆಕ್ಪೋಸ್ಟ್ ಹಾಕಿ ತಪಾಸಣೆ ಮಾಡಿದ್ದಾರೆ.
ಕೋರಮಂಗಲ, MG ರೋಡ್, HSR ಲೇಔಟ್, ಇಂದಿರಾನಗರದಲ್ಲಿ ಸ್ಪೆಷಲ್ ಡ್ರೈವ್ ಮಾಡಿದ್ದು, ಕುಡಿದು ವಾಹನ ಚಲಾಯಿಸಿದವರ ವಾಹನಗಳನ್ನು ಪೊಲೀಸರು ಸೀಜ್ ಮಾಡಿದ್ದಾರೆ. ಮಧ್ಯಸೇವಿಸಿ ವಾಹನ ಚಲಾಯಿಸಿದವರು ಕೋರ್ಟ್ಗೆ ದಂಡ ಕಟ್ಟಬೇಕು.
ಇದನ್ನೂ ಓದಿ : ಬನಶಂಕರಿ ದೇವಿಗೆ ಭಕ್ತರ ಚಿತ್ರ-ವಿಚಿತ್ರ ಹರಕೆ ಪತ್ರ : ಆಡಳಿತ ಮಂಡಳಿ ಶಾಕ್..!
Post Views: 906