ಮಂಗಳೂರು : ಮೂವರು ಯೂಟ್ಯೂಬರ್ ಮೇಲೆ ಪುಂಡರು ಮಾರಣಾಂತಿಕ ಹಲ್ಲೆ ಮಾಡಿರುವ ಘಟನೆ ಧರ್ಮಸ್ಥಳ ಸಮೀಪದ ಪಾಂಗಳದಲ್ಲಿ ನಡೆದಿದೆ. ಪ್ರತಿಷ್ಥಿತ ಕುಟುಂಬದ ಮೇಲೆ ಸುಳ್ಳು ಆರೋಪ ಮಾಡಿದ್ದಾರೆ ಎಂದು ಯೂಟ್ಯೂಬರ್ ಮೇಲೆ ಹಲ್ಲೆ ನಡೆಸಿದ್ದು, ಈ ವೇಳೆ ಗ್ರಾಮಸ್ಥರು ಹಾಗೂ ಹೋರಾಟಗಾರರ ನಡುವೆ ಸಂಘರ್ಷ ನಡೆದಿದೆ.

ಯೂಟ್ಯೂಬರ್ಗಳಾದ ಅಜಯ್, ಅಭಿಷೇಕ್ ಹಾಗೂ ಸಂತೋಷ್ ಮೇಲೆ ದಾಳಿ ಮಾಡಲಾಗಿದೆ. ಗುಂಪನ್ನು ಚದುರಿಸಲು ಪೊಲೀಸರು ಹರಸಾಹಸ ಪಟ್ಟಿದ್ದು, ಕೈ ಮೀರಿದ ಪರಿಸ್ಥಿತಿ ಉಂಟಾಗಿದ್ದರಿಂದ ಪೊಲೀಸರು ಲಘು ಲಾಠಿ ಪ್ರಹಾರ ಮಾಡಿದ್ದಾರೆ. ಇದೀಗ ಪಾಂಗಳದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.

ಇದನ್ನೂ ಓದಿ : ಸಸ್ಪೆನ್ಸ್ ಥ್ರಿಲ್ಲರ್ ವೆಬ್ ಸೀರೀಸ್ ‘ಶೋಧ’ದಲ್ಲಿ ನಿರ್ದೇಶಕ ಪವನ್ ಕುಮಾರ್ ಆಕ್ಟಿಂಗ್ – ಆ.22ಕ್ಕೆ Zee5ನಲ್ಲಿ ಸ್ಟ್ರೀಮಿಂಗ್!
Author: Btv Kannada
Post Views: 5,031







