ರಾಜ್ಯದ ಇಂಧನ ಇಲಾಖೆ ಬಗ್ಗೆ ಹರಡುತ್ತಿರುವುದು ತಪ್ಪು ಮಾಹಿತಿ – ಇಂಧನ ಸಚಿವ KJ ಜಾರ್ಜ್ ಸ್ಪಷ್ಟನೆ!

ಬೆಂಗಳೂರು : ಇತ್ತೀಚೆಗೆ ಆದಾಯ ತೆರಿಗೆ ಇಲಾಖೆಯ ತಂಡವು ನಮ್ಮ ಕಂಪನಿಗಳ ಆದಾಯ ತೆರಿಗೆ ಸಲ್ಲಿಕೆಗೆ ಸಂಬಂಧಿಸಿದ ಸಾಮಾನ್ಯ ಪರಿಶೀಲನೆ ನಡೆಸಿತು. ಇದು ನಿಯಮಿತವಾಗಿ ನಡೆಯುವ ಚಟುವಟಿಕೆಯಾಗಿದೆ. ಆದಾಯ ತೆರಿಗೆ ಇಲಾಖೆ ನಮ್ಮ ಕಂಪನಿಗಳಲ್ಲಿ ನಡೆಸಿದ ಪರಿಶೀಲನೆಗೂ ಸ್ಮಾರ್ಟ್ ಮೀಟರ್ ಕುರಿತಂತೆ ಇತ್ತೀಚೆಗೆ ನಡೆಯುತ್ತಿರುವ ಬೆಳವಣಿಗೆ ಅಥವಾ ಇಂಧನ ಇಲಾಖೆ ಸೇರಿದಂತೆ ಯಾವುದೇ ಸರ್ಕಾರಿ ಯೋಜನೆಗಳಿಗೆ ಯಾವುದೇ ಸಂಬಂಧವಿಲ್ಲ. ಕರ್ನಾಟಕ ಸರ್ಕಾರದ ಇಂಧನ ಇಲಾಖೆಯ ಬಗ್ಗೆ ಹರಡುತ್ತಿರುವ ತಪ್ಪು ಮಾಹಿತಿ ಎಂದು ಇಂಧನ ಸಚಿವ KJ ಜಾರ್ಜ್​ ಸ್ಪಷ್ಟನೆ ಕೊಟ್ಟಿದ್ದಾರೆ.

ಈ ಬಗ್ಗೆ ಸಚಿವ KJ ಜಾರ್ಜ್ ಪ್ರತಿಕ್ರಿಯಿಸಿ, ನಮ್ಮ ಎಲ್ಲಾ ವ್ಯವಹಾರಗಳಲ್ಲಿ ದೀರ್ಘಕಾಲದಿಂದ ಪಾರದರ್ಶಕತೆ ಹಾಗೂ ಕಾನೂನುಪರ ಬದ್ಧತೆಯನ್ನು ನಾವು ಅನುಸರಿಸುತ್ತಿದ್ದೇವೆ. ಇತ್ತೀಚಿಗೆ ನಡೆದ ಈ ನಿಗದಿತ ಪರಿಶೀಲನೆಯ ಸಂದರ್ಭದಲ್ಲಿ ನಮ್ಮ ತಂಡಗಳು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳಿಗೆ ಸಂಪೂರ್ಣ ಸಹಕಾರವನ್ನು ನೀಡಿದ್ದು, ಯಾವ ಬಗೆಯ ಉಲ್ಲಂಘನೆಗಳು ನಮ್ಮ ಕಡೆಯಿಂದ ಕಂಡುಬಂದಿಲ್ಲ. ಹೀಗಿರುವಾಗ ಊಹಾಪೋಹಗಳು ಅಥವಾ ತಪ್ಪು ಮಾಹಿತಿ ಹಬ್ಬಿಸುವುದು ಅನುಚಿತ ನಡವಳಿಕೆಯಾಗಿದ್ದು, ಅಂತಹ ಎಲ್ಲ ಸುದ್ದಿಗಳನ್ನು ನಾವು ಸಂಪೂರ್ಣವಾಗಿ ತಿರಸ್ಕರಿಸುತ್ತೇವೆ ಮತ್ತು ಖಂಡಿಸುತ್ತೇವೆ ಎಂದಿದ್ದಾರೆ.

ಈ ಸಮಯದಲ್ಲಿ ಎಲ್ಲರೂ ಜವಾಬ್ದಾರಿಯಿಂದ ವರ್ತಿಸಿ ಆಧಾರವಿಲ್ಲದ ಆರೋಪಗಳನ್ನು ಹರಡುವುದಾಗಲೀ ಅಥವಾ ಬೆಂಬಲಿಸುವುದಾಗಲೀ ಮಾಡಬಾರದು ಎಂದು ಇಂಧನ ಸಚಿವ KJ ಜಾರ್ಜ್ ಅವರು ಕೇಳಿಕೊಂಡಿದ್ದಾರೆ.

ಇದನ್ನೂ ಓದಿ : ಕೆಂಪೇಗೌಡ ಲೇಔಟ್​ ವಿಸ್ತರಣೆಗೆ ಮುಂದಾದ BDA.. ಮೈಸೂರು ರಸ್ತೆ​​-ಮಾಗಡಿ ಮಧ್ಯೆ 9 ಸಾವಿರ ಎಕರೆ ಸ್ವಾಧೀನಕ್ಕೆ ನಿರ್ಧಾರ!

Btv Kannada
Author: Btv Kannada

Read More