ಕೊನೆಗೂ ಮದುವೆ ಬಗ್ಗೆ ಬಿಗ್ ಅಪ್ಡೇಟ್ ಕೊಟ್ಟ ದಿವ್ಯಾ ಉರುಡುಗ-ಅರವಿಂದ್ ಕೆ.ಪಿ.. ಫ್ಯಾನ್ಸ್​ ಖುಷ್​!

ಬಿಗ್ ಬಾಸ್ ಖ್ಯಾತಿಯ ನಟಿ ದಿವ್ಯಾ ಉರುಡುಗ ಸದ್ಯ ‘ನಿನಗಾಗಿ’ ಧಾರಾವಾಹಿಯಲ್ಲಿ ಮಿಂಚುತ್ತಿದ್ದಾರೆ. ಇನ್ನೂ ಅರವಿಂದ್ ಬೈಕ್ ರೇಸ್‌ಗಳಲ್ಲಿ ಬ್ಯುಸಿಯಾಗಿದ್ದಾರೆ. ಈ ಮಧ್ಯೆ ಅರವಿಂದ್-ದಿವ್ಯಾ ಉರುಡುಗ ಅವರು ಯಾವಾಗ ಮದುವೆ ಆಗ್ತಾರೆ ಎನ್ನುವ ಪ್ರಶ್ನೆ ಆಗಾಗ ಕೇಳಿ ಬರುತ್ತಲೇ ಇದೆ. ಇತ್ತೀಚೆಗೆ ಡಾಲಿ ಧನಂಜಯ್​-ಧನ್ಯತಾ ಅವರ ಮದುವೆಯಲ್ಲಿ ಭಾಗಿಯಾದ ಈ ಜೋಡಿ ಮದುವೆ ಯಾವಾಗ ಎಂಬ ಬಗ್ಗೆ ಬಿಗ್ ಅಪ್ಡೇಟ್ ಕೊಟ್ಟಿದ್ದಾರೆ.

“ಮದುವೆ ಯಾವಾಗ” ಅನ್ನೋ ಪ್ರಶ್ನೆ ಎದುರಾದಾಗ ಉತ್ತರಿಸಿದ ಜೋಡಿ “ಶೀಘ್ರದಲ್ಲಿಯೇ.. ನಿಮಗೆ ಹೇಳದೇ ಮದುವೆ ಆಗುವುದಿಲ್ಲ. ಅತೀ ಶೀಘ್ರದಲ್ಲೇ ಮದುವೆಯಾಗಲಿದ್ದೇವೆ” ಎಂದು ದಿವ್ಯಾ ಉರುಡುಗ ಮತ್ತು ಅರವಿಂದ್ ನಗುತ್ತಲೇ ಉತ್ತರಿಸಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಾಗಲಿ, ಯಾವುದೇ ಕಾರ್ಯಕ್ರಮದಲ್ಲಾಗಲಿ ಈ ಜೋಡಿ ಜೊತೆಯಾಗಿ ಕಾಣಿಸಿಕೊಳ್ಳುತ್ತಲೇ ಇರುತ್ತಾರೆ. ಅರವಿಂದ್ ಬೈಕ್‌ ರ್ಯಾಲಿಗಳಲ್ಲೂ ದಿವ್ಯಾ ಹಾಜರಿರುತ್ತಾರೆ. ಇಬ್ಬರು ಜೊತೆಯಾಗಿ ಅರ್ಧಂಬರ್ಧ ಪ್ರೇಮ ಕಥೆ ಎನ್ನುವ ಸಿನಿಮಾ ಕೂಡ ಮಾಡಿದ್ದರು.

ಇನ್ನು ಸೋಶಿಯಲ್ ಮೀಡಿಯಾದಲ್ಲಿ ಜೊತೆಯಾಗಿಯೇ ಫೋಟೋಗಳನ್ನು ಈ ಜೋಡಿ ಶೇರ್ ಮಾಡಿಕೊಳ್ಳುತ್ತದೆ. ಈಚೆಗೆ ದುಬಾರಿ ಕಾರು ಒಂದನ್ನು ದಿವ್ಯಾ ಉರುಡುಗ ಖರೀದಿ ಮಾಡಿದ್ದರು. ಇದೇ ವೇಳೆ ಅರವಿಂದ್ ಕೂಡ ದಿವ್ಯಾ ಜೊತೆಗೆ ಕಾಣಿಸಿಕೊಂಡಿದ್ದರು. ಸದ್ಯ ಯಾವುದೇ ಪೋಸ್ಟ್ ಮಾಡಲಿ ಇನ್ಸ್ಟಾಗ್ರಾಂನಲ್ಲಿ “ಮದುವೆ ಯಾವಾಗ” ಅನ್ನೋ ಪ್ರಶ್ನೆ ಇಬ್ಬರಿಗೂ ಕೇಳಿ ಬರುತ್ತಿತ್ತು.

ಆದರೆ ಇಬ್ಬರೂ ಕೂಡ ಇಲ್ಲಿವರೆಗೂ ಆ ಪ್ರಶ್ನೆಗೆ ಉತ್ತರ ನೀಡಿರಲಿಲ್ಲ. ಇದೀಗ ಅತೀ ಶೀಘ್ರದಲ್ಲೇ ಮದುವೆ ಆಗಲಿದ್ದೇವೆ ಎಂದು ಇವರಿಬ್ಬರು ಹೇಳಿರುವುದರಿಂದ ಅಭಿಮಾನಿಗಳಲ್ಲಿಯೂ ಕುತೂಹಲ ಹೆಚ್ಚಾಗಿದೆ.

Btv Kannada
Author: Btv Kannada

Leave a Comment

Read More