ಬೆಂಗಳೂರು : ಚಿನ್ನದ ಬೆಲೆ ಗಗನಕ್ಕೇರಿದ್ದರೂ ಅಕ್ಷಯ ತೃತೀಯಕ್ಕೆ ಜನ ಮುಗಿಬಿದ್ದು ಚಿನ್ನ ಖರೀದಿಸಿದ್ದಾರೆ. ಈ ಬಾರಿಯೂ ಅಕ್ಷಯ ತೃತೀಯಕ್ಕೆ ಭರ್ಜರಿ ಗೋಲ್ಡ್ ಸೇಲ್ ಆಗಿದ್ದು, ರಾಜ್ಯದಲ್ಲಿ ನಿನ್ನೆ ಒಂದೇ ದಿನ 2050 ಕೆ.ಜಿ.ಚಿನ್ನ ಮಾರಾಟವಾಗಿದೆ.
ಹಾಗೆಯೇ ಜನರು ಬರೋಬ್ಬರಿ 1900 ಕೆಜಿ ಬೆಳ್ಳಿ ಖರೀದಿ ಮಾಡಿದ್ದು, ಈ ವರ್ಷ ಶೇ.18ರಷ್ಟು ವಹಿವಾಟು ಹೆಚ್ಚಳವಾಗಿದೆ. ಬೆಂಗಳೂರು, ದಾವಣಗೆರೆ, ಹಾಸನ, ಚಿಕ್ಕಮಗಳೂರು, ಶಿವಮೊಗ್ಗ ಸೇರಿ ಹಲವು ಕಡೆ ಚಿನ್ನ ಖರೀದಿ ಜೋರಾಗಿತ್ತು.
ಕೆಲವು ಜ್ಯುವೆಲರಿ ಅಂಗಡಿ ರಾತ್ರಿ 11 ಗಂಟೆವರೆಗೂ ಓಪನ್ ಇತ್ತು. ಚಿನ್ನ, ಬೆಳ್ಳಿ ಕಾಯಿನ್ಗಳ ಖರೀದಿ ಬಲು ಜೋರಾಗಿತ್ತು, ಗ್ರಾಂಗೆ 6700 ರೂಪಾಯಿ ಬೆಲೆ ಇದ್ರೂ ಚಿಂತೆಯಿಲ್ಲದೇ ಜನರು ಚಿನ್ನ ಖರೀದಿಸಿದ್ದಾರೆ.
ಇದನ್ನೂ ಓದಿ : ಲೈಂಗಿಕ ದೌರ್ಜನ್ಯ ಕೇಸ್ : ಬಿಜೆಪಿ ಮುಖಂಡ ದೇವರಾಜೇಗೌಡ ಅರೆಸ್ಟ್..!
Post Views: 71