Download Our App

Follow us

Home » ಸಿನಿಮಾ » ಮತ್ತಷ್ಟು ಹೆಚ್ಚಾಯ್ತು ಕಣ್ಣಪ್ಪ ಚಿತ್ರದ ತಾಕತ್ತು : ವಿಶೇಷ ಪಾತ್ರದಲ್ಲಿ ಪ್ರಭಾಸ್‌ ನಟನೆ..!

ಮತ್ತಷ್ಟು ಹೆಚ್ಚಾಯ್ತು ಕಣ್ಣಪ್ಪ ಚಿತ್ರದ ತಾಕತ್ತು : ವಿಶೇಷ ಪಾತ್ರದಲ್ಲಿ ಪ್ರಭಾಸ್‌ ನಟನೆ..!

ಈಗಾಗಲೇ ಸ್ಟಾರ್‌ ಕಾಸ್ಟ್‌ ವಿಚಾರವಾಗಿಯೇ ಸಾಕಷ್ಟು ಸುದ್ದಿಯಲ್ಲಿದೆ ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ನಿರ್ಮಾಣವಾಗುತ್ತಿರುವ ಕಣ್ಣಪ್ಪ ಸಿನಿಮಾ. ಈಗ ಇದೇ ಸಿನಿಮಾ ತಂಡಕ್ಕೆ ಇನ್ನೊಬ್ಬ ಸ್ಟಾರ್‌ ನಟನ ಎಂಟ್ರಿಯಾಗಿದೆ. ಅದು ಬೇರ್ಯಾರು ಅಲ್ಲ, ಪ್ಯಾನ್‌ ಇಂಡಿಯನ್‌ ಹೀರೋ ಪ್ರಭಾಸ್.

ಈಗಾಗಲೇ ಅಕ್ಷಯ್‌ ಕುಮಾರ್‌, ಮೋಹನ್‌ ಬಾಬು, ಮೋಹನ್‌ ಲಾಲ್‌, ಶರತ್‌ ಕುಮಾರ್‌, ಕಣ್ಣಪ್ಪ ಚಿತ್ರದ ತಾರಾಬಳಗದಲ್ಲಿದ್ದಾರೆ. ಈಗ ಈ ಸ್ಟಾರ್‌ ತಾರಾಬಳಗಕ್ಕೆ ಪ್ರಭಾಸ್‌ ಅವರ ಎಂಟ್ರಿಯೂ ಆಗಿದೆ. ಈ ವಿಚಾರವನ್ನು ಸ್ವತಃ ಚಿತ್ರತಂಡವೇ ಅಧಿಕೃತವಾಗಿ ಘೋಷಣೆ ಮಾಡಿದೆ.

ಮುಖೇಷ್‌ ಕುಮಾರ್‌ ಸಿಂಗ್‌ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಕಣ್ಣಪ್ಪ ಸಿನಿಮಾ, ಬಹುಭಾಷೆಗಳಲ್ಲಿ ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ನಿರ್ಮಾಣವಾಗಲಿದೆ. ಬಹು ಕೋಟಿ ವೆಚ್ಚದಲ್ಲೂ ಈ ಸಿನಿಮಾ ಮೂಡಿಬರುತ್ತಿದೆ. ಶಿವನ ಪರಮ ಭಕ್ತ ಕಣ್ಣಪ್ಪನಾಗಿ ವಿಷ್ಣು ಮಂಚು ನಟಿಸಲಿದ್ದಾರೆ.

ಕಳೆದ ಏಳು ವರ್ಷಗಳಿಂದ ಈ ಪ್ರಾಜೆಕ್ಟ್‌ ಸಲುವಾಗಿ ವಿಷ್ಣು ಮಂಚು ಶ್ರಮಿಸುತ್ತಿದ್ದಾರೆ. ಅಷ್ಟೇ ಅದ್ದೂರಿಯಾಗಿಯೇ ಅದನ್ನು ತೆರೆಗೆ ತರುವ ಪ್ರಯತ್ನ ನಡೆಯುತ್ತಿದೆ. ಅದರಂತೆ ಸ್ಟಾರ್‌ ಕಲಾವಿದರನ್ನೇ ಆಯ್ಕೆ ಮಾಡಿಕೊಳ್ಳುತ್ತ ಕುತೂಹಲ ಮೂಡಿಸುತ್ತಿದೆ. ಹಾಲಿವುಡ್‌ನ ಶೆಲ್ಡೋನ್‌ ಚಾವ್‌ ಅವರ ಛಾಯಾಗ್ರಹಣ, ಕೇಚ ಖಂಫಕದೀ ಅವರ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ.

ಇದನ್ನೂ ಓದಿ : ಕಿಡ್ನಾಪ್ ಕೇಸ್​ನಲ್ಲಿ ಭವಾನಿ ರೇವಣ್ಣಗೆ ಎರಡನೇ ಬಾರಿ SIT ನೋಟಿಸ್​..!

Leave a Comment

DG Ad

RELATED LATEST NEWS

Top Headlines

ಕೊನೆಗೂ ಹೈ ಪ್ರೊಫೈಲ್ ಚಿನ್ನದ ರಾಣಿ ಅರೆಸ್ಟ್ – ಜ್ಯುವೆಲ್ಲರಿ ಓನರ್​ಗೆ ಎನ್​ಕ್ವೈರಿ ಬಿಸಿ!

ಬೆಂಗಳೂರು : ಮಾಜಿ ಸಂಸದ ಡಿಕೆ ಸುರೇಶ್ ಜೊತೆಗಿನ ಫೋಟೋಸ್ ಹಾಗೂ ಸಂಬಂಧದ ನೆಪ ಹೇಳಿ ಕೋಟಿ ಕೋಟಿ ಮೌಲ್ಯದ ಚಿನ್ನ ವಂಚನೆ ಮಾಡಿದ್ದ ಕೇಸಲ್ಲಿ ಐಶ್ವರ್ಯ

Live Cricket

Add Your Heading Text Here