ಉದಯಗಿರಿ ಗಲಭೆ ಪ್ರಕರಣ – ವಿವಾದಿತ ಪೋಸ್ಟ್ ಹಾಕಿದ್ದ ಸತೀಶ್ ಜೈಲಿಂದ‌ ರಿಲೀಸ್!

ಮೈಸೂರು : ಉದಯಗಿರಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿವಾದಿದ ಪೋಸ್ಟ್ ಹಾಕಿದ್ದ ಆರೋಪಿ ಸತೀಶ್​ಗೆ ಮೈಸೂರು ಕೋರ್ಟ್ ನಿನ್ನೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದ್ದು, ಇಂದು ಆರೋಪಿ ಜೈಲಿನಿಂದ ರಿಲೀಸ್ ಆಗಿದ್ದಾನೆ. ಆರೋಪಿ ಸತೀಶ್ @ಪಾಂಡುರಂಗ ಜೈಲಿನಿಂದ ರಿಲೀಸ್ ಬಳಿಕ ಗೌಪ್ಯ ಸ್ಥಳಕ್ಕೆ ತೆರಳಿದ್ದಾರೆ ಎಂದು ತಿಳಿದುಬಂದಿದೆ.

ಫೆಬ್ರವರಿ 10ರಂದು ಸತೀಶ್ ಅವಹೇಳನಕಾರಿ ಪೋಸ್ಟ್ ಹಾಕಿದ್ದ ವಿಚಾರಕ್ಕೆ ಉದಯಗಿರಿ ಪೊಲೀಸ್ ಠಾಣೆ ಮೇಲೆ ರಾತ್ರೋರಾತ್ರಿ ಅನ್ಯಕೋಮಿನ ಗುಂಪು ಕಲ್ಲು ತೂರಾಟ ನಡೆಸಿತ್ತು. ಘಟನೆಯಲ್ಲಿ 14 ಮಂದಿ ಪೊಲೀಸರು ಗಾಯಗೊಂಡಿದ್ದರು ಹಾಗೂ ಹಲವು ಪೊಲೀಸ್ ವಾಹನಗಳು ಜಖಂ ಆಗಿದ್ದವು. ಪೊಲೀಸರು 1000ಕ್ಕೂ ಹೆಚ್ಚು ಮಂದಿಯ ವಿರುದ್ದ FIR ದಾಖಲಿಸಿ ತನಿಖೆ ಕೈಗೆತ್ತಿಕೊಂಡಿದ್ದರು. ಬಳಿಕ ಪೋಸ್ಟ್ ಹಾಕಿದ್ದ ಸತೀಶ್​ನನ್ನು ಬಂಧಿಸಿದ್ದರು.

ಇನ್ನು ಗಲಾಟೆ ತಡೆಯಲು ಅವಕಾಶವಿದ್ರು ನಿರ್ಲಕ್ಷ್ಯವಹಿಸಿರೋ ಆರೋಪದ ಮೇಲೆ ಉದಯಗಿರಿ ಠಾಣೆಯ ಸಬ್ಇನ್ಸ್​​ಪೆಕ್ಟರ್​ ರೂಪೇಶ್ ಅವರನ್ನು ಮೈಸೂರು ಕಮಿಷನರ್ ಕಚೇರಿಯ ಆಟೋಮೇಷನ್ ಸೆಂಟರ್‌ಗೆ ಟ್ರಾನ್ಸ್​ಫರ್ ಮಾಡಿ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ಆದೇಶ ಹೊರಡಿಸಿದ್ದಾರೆ.

Btv Kannada
Author: Btv Kannada

Leave a Comment

Read More